ಅವಳ ಹೆಜ್ಜೆ ವತಿಯಿಂದ ʼಕನ್ನಡತಿ ಉತ್ಸವ-2022ʼ; ವಿನೂತನ ರ‍್ಯಾಂಪ್ ವಾಕ್‌

ಬೆಂಗಳೂರು: ʼಅವಳ ಹೆಜ್ಜೆʼ ಸಂಸ್ಥೆಯ 6ನೇ ವರ್ಷದ ವಾರ್ಷಿಕ ಹಬ್ಬದ ಅಂಗವಾಗಿ ʼಕನ್ನಡತಿ ಉತ್ಸವ-2022ʼ ವನ್ನು ಹಮ್ಮಿಕೊಂಡಿದೆ. ಸಂಸ್ಥೆಯ ವತಿಯಿಂದ ಪ್ರತಿ ವರ್ಷದ ವಿನೂತನವಾದ ಒಂದಿಲ್ಲೊಂದು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.

ಈ ಬಾರಿ, 2022ರ ಉತ್ಸವ ಅಂಗವಾಗಿ ಮಿಸ್‌ ಮಹಾಲಕ್ಷ್ಮೀ ಶೀರ್ಷಿಕೆಯಡಿ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಮಹಿಳೆಯರಿಗಾಗಿ ಒಂದು ವಿನೂತನ ರ‍್ಯಾಂಪ್ ವಾಕ್‌ ಆಯೋಜಿಸಿದೆ.

ಅವಳ ಹೆಜ್ಜೆ ಸಂಸ್ಥೆಯು ಕಾರ್ಯಕ್ರಮದ ಮೂಲಕ ಮಹಿಳೆಯರ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ರಾಜಕೀಯ ಬದುಕಿನ ಮೇಲೆ ಪರಿಣಾಮವನ್ನು ಬೀರುವಂತ ವಸ್ತುವಿಷಯಗಳ ಮೇಲೆ ಕವಿತೆ, ನಾಟಕ, ಸಿನಿಮಾ, ಚರ್ಚಾಗೋಷ್ಠಿಗಳನ್ನು ಏರ್ಪಡಿಸಿ ತನ್ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಮಹಿಳಾ ಆಶಯಗಳಿಗೆ ದನಿಯಾಗುತ್ತಾ ಬಂದಿದೆ ಎಂದು ಕಾರ್ಯಕ್ರಮ ನಿರ್ದೇಶಕಿ ದೀಪಾ ಅವರು ತಿಳಿಸಿದ್ದಾರೆ.

ಎರಡು ವಿಭಾಗಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಆಸಕ್ತ ಮಹಿಳೆಯರಿಂದ ಅರ್ಜಿ ಆಹ್ವಾನಿಸಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ.

ಕಾರ್ಯಕ್ರಮದ ವಿವರ ಹೀಗಿದೆ:

PASSION SHOW – ಇದು ಫ್ಯಾಷನ್‌ ಶೋ ಅಲ್ಲ, ಪ್ಯಾಷನ್‌ ಶೋ!

ಈ ವಿಭಾಗದಲ್ಲಿ ಭಾಗವಹಿಸಲು ಮಹಿಳೆಯರು ಮತ್ತು ಹೆಣ್ಣುಮಕ್ಕಳು ತಮ್ಮ ವೈಯಕ್ತಿಕ ಕನಸು, ಕಸುಬು ಮತ್ತು ಕಲೆಯನ್ನು ಉಡುಗೆ-ತೊಡುಗೆ, ವೇಷಭೂಷಣಗಳ ಮೂಲಕ ವೇದಿಕೆ ಮೇಲೆ ಪ್ರದರ್ಶಿಸಲು 30 ಸೆಕೆಂಡುಗಳ ಕಾಲಾವಕಾಶ ನೀಡಲಾಗುವುದು.

ʼಹಳೆ ಬೇರು, ಹೊಸ ಚಿಗುರುʼ – ಇದು ತಲೆಮಾರುಗಳ ಬಾಂಧವ್ಯದ ನಡಿಗೆ

ಈ ವಿಭಾಗದಲ್ಲಿ ಭಾಗವಹಿಸಲು ಅಜ್ಜಿ, ತಾಯಿ, ಮಗಳು, ಮೊಮ್ಮಗಳು ಹೀಗೆ ಹೆಣ್ಣು ತಲೆಮಾರು ಒಟ್ಟಿಗೆ ಒಂದು ತಂಡವಾಗಿ ವೇದಿಕೆ ಮೇಲೆ ಹೆಜ್ಜೆ ಹಾಕಬೇಕು. ಪ್ರತೀ ತಂಡಕ್ಕೆ 1 ನಿಮಿಷಗಳ ಕಾಲಾವಕಾಶವಿದ್ದು, ತಮ್ಮ ಬಾಂಧವ್ಯವನ್ನು ಒಂದು ವಿಶೇಷ ಥೀಮ್‌ ಮೂಲಕ ಪ್ರದರ್ಶಿಸಬಹುದು.

ಕಾರ್ಯಕ್ರಮಕ್ಕೆ ನೊಂದಾಯಿಸಿಕೊಳ್ಳಲು ಅಕ್ಟೋಬರ್‌ 31 ಕಡೆಯ ದಿನಾಂಕವಾಗಿದ್ದು ನೊಂದಣಿಗಾಗಿ 9740022909 ಸಂಖ್ಯೆಯನ್ನು ಸಂಪರ್ಕಿಸಬಹುದು.

Donate Janashakthi Media

Leave a Reply

Your email address will not be published. Required fields are marked *