ಆಟೋರಿಕ್ಷಾ ಮೀಟರ್‌ಗಳ ಪರಿಷ್ಕರಣಾ ವೆಚ್ಚ ರೂ.450ಕ್ಕೆ ನಿಗದಿಗೊಳಿಸಿದ ಮಾಪನ ಶಾಸ್ತ್ರ ಇಲಾಖೆ

ಬೆಂಗಳೂರು: ನಗರದಲ್ಲಿ ಈ ಹಿಂದಿನ ಆದೇಶದಂತೆ ಆಟೋರಿಕ್ಷಾ ಮೀಟರ್ ದರವು ಡಿಸೆಂಬರ್‌ 01ರಿಂದ ಜಾರಿಯಾಗುವಂತೆ ಒಂದು ಕಿಲೋಮೀಟರ್ ರೂ.15 ಕನಿಷ್ಠ ದರ ಹಾಗೂ ಎರಡು ಕಿಲೋಮೀಟರ್‌ಗೆ 30 ರೂ.ಗಳನ್ನು ಹೆಚ್ಚಳ ಮಾಡಿ ಸರ್ಕಾರ ಆದೇಶಿದೆ. ಆದೇಶದ ಭಾಗವಾಗಿ ಆಟೋರಿಕ್ಷಾ ಮೀಟರ್‌ಗಳನ್ನು ಪರಿಷ್ಕರಣೆಯನ್ನು 2022ರ ಮಾರ್ಚ್‌ 01ರ ಒಳಗೆ ಮಾಡಿಕೊಳ್ಳಲು ಆದೇಶಿಸಿದೆ.

ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್(ಎಆರ್‌ಡಿಯು-ಸಿಐಟಿಯು) ಸಂಘಟನೆಯು ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ನಿಯಂತ್ರಕರಿಗೆ ಪರಿಷ್ಕರಣ ವೆಚ್ಚ ನಿಗದಿಗೊಳಿಸುವಂತೆ ಮನವಿ ಮಾಡಿದ್ದರು. ಅದರಂತೆ, ಇಲಾಖೆಯು ಎಆರ್‌ಡಿಯು ಮನವಿ ಮೇರೆಗೆ ಉಪ ನಿಯಂತ್ರಕರ ಅಧ್ಯಕ್ಷತೆಯಲ್ಲಿ ಆಟೋರಿಕ್ಷಾ ಮೀಟರ್ ತಯಾರಕರ ಹಾಗೂ ಸಂಘಟನೆಯ ಮುಖಂಡರೊಂದಿಗೆ ಸಭೆಯು ಇಂದು ನಡೆದಿದ್ದು, ಒಂದು ಮೀಟರ್‌ಗೆ ಜಿ.ಎಸ್.ಟಿ. ಒಳಗೊಂಡಂತೆ `450ಕ್ಕೆ ನಿಗದಿಗೊಳಿಸಿ ತೀರ್ಮಾನಿಸಿದೆ.

ಅದರಂತೆ, ಆಟೋರಿಕ್ಷಾ ಮಾಲೀಕರು ಮತ್ತು ಚಾಲಕರು `450 ಗಿಂತ ಹೆಚ್ಚು ಹಣ ನೀಡಬಾರದೆಂದು ಆಟೋರಿಕ್ಷಾ ಚಾಲಕರ ಸಂಘ ಚಾಲಕರಲ್ಲಿ ಮತ್ತು ಮಾಲೀಕರಲ್ಲಿ ಮನವಿ ಮಾಡಿಕೊಂಡಿದೆ. ಇನ್ನು ಕಡಿಮೆ ವೆಚ್ಚದಲ್ಲಿ ಪರಿಷ್ಕರಣೆ ಮಾಡಿದರೆ ಮಾಡಿಸಿಕೊಳ್ಳಬಹುದು ಎಂದು ಸಂಘವು ಚಾಲಕರಲ್ಲಿ ವಿನಂತಿಸಿಕೊಂಡಿದೆ. ಇದರಿಂದ ಒಟ್ಟಾರೆಯಾಗಿ ಆಟೋರಿಕ್ಷಾ ಚಾಲಕರಿಗೆ ಮತ್ತು ಮಾಲೀಕರಿಗೆ 3 ಕೋಟಿ ರೂ. ಗಳಷ್ಟು ಉಳಿತಾಯವಾಗಲಿದೆ.

Donate Janashakthi Media

Leave a Reply

Your email address will not be published. Required fields are marked *