ಬೆಂಗಳೂರು| ಆಗಸ್ಟ್‌ 1ರಿಂದ ಆಟೋ ಪ್ರಯಾಣ ದರ ಹೆಚ್ಚಳ

ಬೆಂಗಳೂರು: ಆಟೋರಿಕ್ಷಾ ಪ್ರಯಾಣದ ದರಗಳನ್ನು ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪರಿಷ್ಕರಿಸಿದ್ದು, ಆಗಸ್ಟ್‌ 1ರಿಂದ ನೂತನ ದರ ಜಾರಿಗೆ ಬರಲಿದೆ. ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಆಟೋರಿಕ್ಷಾ ಮೀಟರ್‌ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.

ಕನಿಷ್ಠ ದರ ಮೊದಲ ಎರಡು ಕಿ.ಮೀ.ಗೆ 36 ರೂ. ನಿಗದಿ ಪಡಿಸಿದ್ದು, ಆಟೋರಿಕ್ಷಾದಲ್ಲಿ ಮೂವರು ಪ್ರಯಾಣಿಕರಿಗೆ ಪ್ರಯಾಣಿಸಲು ಅವಕಾಶವಿದೆ. ಕಾಯುವಿಕೆ ದರವು ಮೊದಲ ಐದು ನಿಮಿಷ ಉಚಿತವಾಗಿದೆ. ಅನಂತರ ಪ್ರತಿ 15 ನಿಮಿಷಕ್ಕೆ 10 ರೂ. ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಆರೋಗ್ಯಕ್ಕಾಗಿ ಹರ್ಬಲ್ ಟೀ

ಪ್ರಯಾಣಿಕರ ಲಗೇಜಿಗೆ 20 ಕೆ.ಜಿ.ವರೆಗೆ ಉಚಿತವಿದ್ದು, ನಂತರದ 20 ಕೆ.ಜಿ. ಲಗೇಜಿಗೆ 10 ರೂ. ನಿಗದಿಪಡಿಸಲಾಗಿದೆ. ಗರಿಷ್ಠ ಪ್ರಯಾಣಿಕರ 50 ಕೆ.ಜಿ. ಲಗೇಜಿಗೆ ಸೀಮಿತಗೊಳಿಸಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಸಾಮಾನ್ಯದರ ಜೊತೆಗೆ ಅರ್ಧದಷ್ಟು ಹೆಚ್ಚುವರಿಯಾಗಿ ಪಾವತಿಸಬೇಕು.

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟಿರುವ ನಿಗದಿತ ಪರಿಷ್ಕೃತ ದರದ ಮೂಲ ಪಟ್ಟಿಯನ್ನು ಪ್ರತಿಯೊಂದು ಆಟೋರಿಕ್ಷಾದಲ್ಲಿ ಪ್ರಮುಖ ಸ್ಥಾನದಲ್ಲಿ ಪ್ರದರ್ಶಿಸಬೇಕು.

ಪರಿಷ್ಕೃತ ದರ ಮೀಟರ್‌ನಲ್ಲಿ ಪ್ರದರ್ಶನವಾಗುವಂತೆ ಮೀಟರ್‌ಗಳನ್ನು ಅಟ್ಟೋಬರ್‌ 31ರೊಳಗಾಗಿ ಪುನಃ ಸ್ತಯಾಪನೆ ಮಾಡಿ(ಬದಲಿಸಿಕೊಳ್ಳಬೇಕು) ಮುದ್ರೆ ಹಾಕಿಸಿಕೊಳ್ಳಬೇಕು ಎಂದು ಬೆಂಗಳೂರು ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ನೋಡಿ: ಧರ್ಮಸ್ಥಳದಲ್ಲಿನ ಕೊಲೆ ಅತ್ಯಾಚಾರಗಳ ಹಿಂದೆ ಇರುವವರು ಯಾರು? ಸತ್ಯ ಹೊರ ಬರಲಿ…

Donate Janashakthi Media

Leave a Reply

Your email address will not be published. Required fields are marked *