ಮೈಸೂರು: ಮೈಕ್ರೋ ಫೈನಾನ್ಸ್ ಕಂಪನಿಗಳು ನೀಡುತ್ತಿರುವ ಕಿರುಕುಳಗಳು ಮಿತಿ ಮೀರಿದ್ದು, ಮಹೇಂದ್ರ ಫೈನಾನ್ಸ್ ಕಚೇರಿಗೆ ಆಟೋ ಚಾಲಕರು ನುಗ್ಗಿರುವ ಘಟನೆ ನಗರದಲ್ಲಿ ನಡೆದಿದೆ. ಮೈಸೂರು ಆಟೋ ಚಾಲಕರು ರೊಚ್ಚಿಗೆದ್ದಿದ್ದಾರೆ. ಮಹೇಂದ್ರ ಫೈನಾನ್ಸ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮಹೇಂದ್ರ ಫೈನಾನ್ಸ್ ಕಚೇರಿಯ ಸಿಬ್ಬಂದಿಗಳು ಹಾಗೂ ಆಟೋ ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದೆ. ಗೂಂಡಾಳನ್ನು ಬಳಸಿ ಆಟೋ ಸೀಜ್ ಮಾಡಿದ್ದಾರೆಂದು ಆಟೋ ಚಾಲಕರ ಆರೋಪವಾಗಿದೆ. ಮುಖ್ಯಮಂತ್ರಿಗಳ ಆದೇಶವನ್ನು ಲೆಕ್ಕಿಸದೆ ಮಹೇಂದ್ರ ಫೈನಾನ್ಸ್ ಉದ್ದಟತನ ಮೆರೆದಿದೆ.
ಇದನ್ನೂ ಓದಿ: ಬ್ಯಾಂಕ್‌ಗಳಲ್ಲಿ ಕನ್ನಡಿಗರ ಸಂಖ್ಯೆಯಲ್ಲಿ ಕುಸಿತ : ಡಾ. ಪುರುಷೋತ್ತಮ ಬಿಳಿಮಲೆ ಕಳವಳ
ಮೂರು ತಿಂಗಳ ಕಂತು ಬಾಕಿ ಇದ್ದ ಆಟೋ ರಿಕ್ಷಾವನ್ನು ಬಲವಂತವಾಗಿ ಗೂಂಡಾಗಳು ಸೀಜ್ ಮಾಡಿದೆ. ನೋಟೀಸ್ ನೀಡದ ಆಟೋ ಸೀಜ್ ಮಾಡಿದ್ದಾರೆಂದು ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.
ಮಹೇಂದ್ರ ಫೈನಾನ್ಸ್ ಕಚೇರಿ ಮುಂದೆ ಆಟೋ ಚಾಲಕರ ಪ್ರತಿಭಟನೆ ನಡೆಸಿದರು. ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆ ಸಮೀಪ ಆಟೋ ಚಾಲಕರ ಪ್ರತಿಭಟನೆ ನಡೆಸಿದರು.
ಇದನ್ನೂ ನೋಡಿ: ಉದ್ಘಾಟನೆ | ಗಣರಾಜ್ಯ ಭಾರತ @75 : ಪ್ರಸಕ್ತ ಸವಾಲುಗಳು | ರಾಜ್ಯ ಮಟ್ಟದ ವಿಚಾರ ಸಕಿರಣ