ಬೈಕ್ ಟ್ಯಾಕ್ಸಿ ನಿಷೇದಕ್ಕಾಗಿ ಒತ್ತಾಯಸಿ ಬಂದ್‌ಗೆ ನಿರ್ಧಾರ
ಬೆಂಗಳೂರು: ಬಜೆಟ್‍ನಲ್ಲಿ ಆಟೋಚಾಲಕರನ್ನು ನಿರ್ಲಕ್ಷಿಸಲಾಗಿದೆ ಎಂದು ಆಟೋ ಚಾಲಕರ ಸಂಘಟನೆಗಳ ಒಕ್ಕೂಟ ಆರೋಪಿಸಿದೆ. ಶಕ್ತಿ ಯೋಜನೆ ಆಟೋ ಚಾಲಕರ ಹೊಟ್ಟೆ ಮೇಲೆ ಬರೆ ಎಳೆದಿದೆ ರ್ಯಾಪಿಡ್‌ದಂತಹ ಬೈಕ್ ಟ್ಯಾಕ್ಸಿಗಳು, ತಡೆದುಕೊಳ್ಳಲಾಗದ ರೀತಿ ಪೆಟ್ಟು ನೀಡಿವೆ. ಇದರಿಂದಾಗಿ ಆಟೋದವರಿಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಸರ್ಕಾರ ಆಟೋ ಚಾಲಕರ ನೆರೆವಿಗೆ ಬರುಬೇಕು. ಇಲ್ಲದೆ ಹೋದಲ್ಲಿ ಜುಲೈ 28 ಕ್ಕೆ ಪ್ರತಿಭಟನೆ ನಡೆಸುವುದಾಗಿ ಅಟೋ ಚಾಲಕರ ಸಂಘಟನೆಗಳು ತಿಳಿಸಿವೆ.
ಇದನ್ನೂ ಓದಿ:ರ‍್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧಿಸುವಂತೆ ಆಗ್ರಹಿಸಿ ಮಾ.20ರಂದು ಆಟೋ ಚಾಲಕರಿಂದ ಮುಖ್ಯಮಂತ್ರಿ ಮನೆ ಮುತ್ತಿಗೆ
ಆಟೋ ಚಾಲಕರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ್ ವಿ, ಮಾಧ್ಯಮಗಳ ಜೊತೆ ಮಾತನಾಡಿ, ತಮ್ಮ ಬೇಡಿಕೆಗಳನ್ನು ಈಡೇರಿಕೆಗೆ ಸರ್ಕಾರಕ್ಕೆ ಒಂದು ವಾರದ ಗಡುವು ನೀಡಲಾಗಿದೆ. ಇಲ್ಲವಾದ್ರೆ, ಜುಲೈ 28 ರಂದು ಸಂಪೂರ್ಣ ಆಟೋ ಸಂಚಾರ ಬಂದ್ ಮಾಡುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ರ್ಯಾಪಿಡ್ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಬೇಕು, ಆಟೋ ಚಾಲಕರಿಗೆ ಪ್ರತಿ ತಿಂಗಳು 10 ಸಾವಿರ ಪರಿಹಾರ ಧನ ನೀಡಬೇಕು, ಅಸಂಘಟಿತ ವಾಣಿಜ್ಯ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ಆಟೋ ಟ್ಯಾಕ್ಸಿ ಚಾಲಕರಿಗೆ ಎರಡು ಲಕ್ಷ ಸಾಲ ಸೌಲಭ್ಯ ನೀಡಬೇಕು ಜೊತೆಗೆ ಎಲೆಕ್ಟ್ರಿಕ್ ಆಟೋಗಳನ್ನ ರ್ಯಾಪಿಡೊ,ಓಲಾ,ಊಬರ್ ಕಂಪನಿಗೆ ನೊಂದಣಿ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಎಲ್ಲಾ ಬೇಡಿಕೆಗಳು ಹಾಗೂ ಆಟೋ ಮುಷ್ಕರದ ಸಂಬಂಧ ನಾಳೆ ಆಟೋ ಸಂಘಟನೆಗಳು ಸಭೆ ನಡೆಸಿ ರೂಪುರೇಷೆ ಸಿದ್ದ ಮಾಡಲು ತೀರ್ಮಾನಿಸಿವೆ. ರಾಜ್ಯಾದ್ಯಂತ ಇರುವ 3.10 ಲಕ್ಷ ಹಾಗೂ ಬೆಂಗಳೂರಲ್ಲಿ ಇರುವ 2.10 ಲಕ್ಷ ಆಟೋಗಳು ಈ ಮುಷ್ಕರದಲ್ಲಿ ಭಾಗಿಯಾಗಲಿವೆ.
ಖಾಸಗಿ ಬಸ್ ಒಕ್ಕೂಟ, ಟೂರ್ಸ್ ಅಂಡ್ ಟ್ರಾವೆಲ್ ಸೇರಿದಂತೆ 21 ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗೋದಾಗಿ ಆಟೋ ಚಾಲಕರು ತಿಳಿಸಿದ್ದಾರೆ. ಈ ಸಂಬಂಧ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಅನ್ನೋದನ್ನ ಕಾದು ನೋಡಬೇಕಿದೆ.