ಲಕ್ನೋ: ಲಕ್ನೋ ಪೊಲೀಸರು ಎರಡು ದಿನಗಳ ಹಿಂದೆ ಮಲಿಹಾಬಾದ್ನ ಮಾವಿನ ತೋಟದಲ್ಲಿ ಪತ್ತೆಯಾದ ಮಹಿಳೆಯನ್ನು ಅಪಹರಿಸಿ ಕತ್ತು ಹಿಸುಕಿ ಕೊಲೆ ಮಾಡಿದ ಆರೋಪದ ಮೇಲೆ ಆಟೋ ರಿಕ್ಷಾ ಚಾಲಕನನ್ನುಶುಕ್ರವಾರ ಗುಂಡಿಕ್ಕಿ ಕೊಂದಿದ್ದಾರೆ. ಆರೋಪಿ ಅವಳ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿರಬಹುದು ಮತ್ತು ಅವಳು ಪ್ರತಿರೋಧಿಸಿದಾಗ ಅಕೆಯನ್ನು ಕೊಂದಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ಬೇರೆ ಜಿಲ್ಲೆಯಿಂದ ಹಿಂದಿರುಗಿದ ನಂತರ 30 ವರ್ಷದ ಸಂತ್ರಸ್ತೆ ನಾಪತ್ತೆಯಾಗಿದ್ದು, ಆಟೋರಿಕ್ಷಾದಲ್ಲಿ ಹತ್ತಿರದ ಸಂಬಂಧಿಕರ ಮನೆಗೆ ತೆರಳುತ್ತಿದ್ದಾಗ ವಾಹನವನ್ನು ಚಲಾಯಿಸುತ್ತಿದ್ದ ಆರೋಪಿ ಅಜಯ್ ಕುಮಾರ್ (26) ಅವಳನ್ನು ಅಪಹರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಜೈಪುರ| ಕೇಂದ್ರ ಪೊಲೀಸ್ ಪಡೆಯ ಕಾರು ರೈಲಿಗೆ ಡಿಕ್ಕಿ
ಅಜಯ್ ಕುಮಾರ್ ವಿರುದ್ಧ 23 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಆತನ ಬಂಧನಕ್ಕೆ ಕಾರಣವಾಗುವ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಜಯ್ ಸಹೋದರ ದಿನೇಶ್ ಕುಮಾರ್ (35) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಅಜಯ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಎಂದು ಲಕ್ನೋ ಡಿಸಿಪಿ ವಿಶ್ವಜೀತ್ ಶ್ರೀವಾಸ್ತವ ತಿಳಿಸಿದ್ದಾರೆ. ಪೊಲೀಸರು ದಿನೇಶ್ ಬಳಿಯಿಂದ ಸಂತ್ರಸ್ತೆಯ ಶೈಕ್ಷಣಿಕ ಪ್ರಮಾಣಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ನೋಡಿ: ಮಹಾಡ್ ಸತ್ಯಾಗ್ರಹ |ಅಸ್ಪ್ರಶ್ಯ ಆಚರಣೆಗೆ ಒಡ್ಡಿದ್ದ ಪ್ರತಿರೋಧ – ಬರಗೂರು ರಾಮಚಂದ್ರಪ್ಪ Janashakthi Media