ಬಾಬರಿ ತೀರ್ಪು ಬರೆದವರ ಹೆಸರು ಅನಾಮಧೇಯವಾಗಿ ಇರಲು ಸರ್ವಾನುಮತದಿಂದ ನಿರ್ಧಾರಿಸಿದ್ದೆವು – ಸಿಜೆಐ ಚಂದ್ರಚೂಡ್

ಹೊಸದಿಲ್ಲಿ: ಬಾಬರಿ ಮಸೀದಿ ಒಡೆದ ಸ್ಥಳದಲ್ಲಿ ರಾಮಮಂದಿರ ಕಟ್ಟಡ ಕಟ್ಟಲು ತೀರ್ಪು ನೀಡಿದ ಸುಮಾರು ನಾಲ್ಕು ವರ್ಷಗಳ ನಂತರ, ಈ ತೀರ್ಪನ್ನು ಯಾರು ಬರೆದಿದ್ದರು ಎಂಬುದನ್ನು ತಿಳಿಸುವುದಿಲ್ಲ ಎಂದು ಆ ವೇಳೆ ಇದ್ದ ಐವರು ನ್ಯಾಯಮೂರ್ತಿಗಳು ಸರ್ವಾನುಮತದಿಂದ ನಿರ್ಧರಿಸಿದ್ದರು ಎಂದು ಆಗ ನ್ಯಾಯಪೀಠದ ಭಾಗವಾಗಿದ್ದ, ಸುಪ್ರೀಂಕೋರ್ಟ್‌ನ ಈಗಿನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಸೋಮವಾರ ಹೇಳಿದ್ದಾರೆ.

ಸಿಜೆಐ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರ ಪೀಠವು 2019ರ ನವೆಂಬರ್ 9 ರಂದು ಬಾಬರಿ ಮಸೀದಿ ಒಡೆದ ಸ್ಥಳದಲ್ಲಿ ಬೇರೆ ಕಟ್ಟಡ ಕಟ್ಟುವಂತೆ ತೀರ್ಪು ನೀಡಿತ್ತು. ಜೊತೆಗೆ ಬಾಬರಿ ಮಸೀದಿಗೆ ಪರ್ಯಾಯ ಐದು ಎಕರೆ ಜಾಗವನ್ನು ನೀಡಲಾಗುವುದು ಎಂದು ಅಂದು ಹೇಳಲಾಗಿತ್ತು.

ಇದನ್ನೂ ಓದಿ: ‘ಪ್ರಧಾನಿ ನರೇಂದ್ರ ಮೋದಿ’ಯೇ ಬಂದು ನಿಂತರೂ, ಮೈಸೂರು-ಕೊಡಗು ಕ್ಷೇತ್ರದಲ್ಲಿ ಗೆಲ್ಲುವುದಿಲ್ಲ!

ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಂವಿಧಾನ ಪೀಠದ ಭಾಗವಾಗಿದ್ದ ಸಿಜೆಐ ಚಂದ್ರಚೂಡ್ ಅವರು ತೀರ್ಪು ಯಾರು ಬರೆದರು ಎಂಬ ಬಗ್ಗೆ ಇನ್ನೂ ಅನಾಮಧೇಯವಾಗಿದೆ ಎಂಬ ವಿಚಾರದ ಬಗ್ಗೆ ಮಾತನಾಡುತ್ತಾ, “ನ್ಯಾಯಾಧೀಶರು ಒಟ್ಟಿಗೆ ಕುಳಿತು ತೀರ್ಪು ನೀಡುವ ಮೊದಲು ಸರ್ವಾನುಮತದಿಂದ ‘ನ್ಯಾಯಾಲಯದ ತೀರ್ಪು’ ಇದು ಎಂದು ನಿರ್ಧರಿಸಲಾಯಿತು” ಎಂದು ಹೇಳಿದ್ದಾರೆ.

ಈ ಮೂಲಕ ತೀರ್ಪನ್ನು ಬರೆದವರು ಯಾರು ಎಂಬುವುದನ್ನು ಯಾಕೆ ಸಾರ್ವಜನಿಕಗೊಳಿಸಿಲ್ಲ ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. “ಐದು ನ್ಯಾಯಾಧೀಶರ ಪೀಠವು ತೀರ್ಪು ಪ್ರಕಟಿಸುವ ಮೊದಲು ನಾವೆಲ್ಲರೂ ಮಾಡುವಂತೆ ತೀರ್ಪಿನ ಬಗ್ಗೆ ಚರ್ಚಿಸಲು ಕುಳಿತಾಗ, ಇದು ನ್ಯಾಯಾಲಯದ ತೀರ್ಪು ಎಂದು ನಾವೆಲ್ಲರೂ ಸರ್ವಾನುಮತದಿಂದ ನಿರ್ಧರಿಸಿದೆವು. ಆದ್ದರಿಂದ ಯಾವುದೇ ಒಬ್ಬ ನ್ಯಾಯಾಧೀಶರಿಗೆ ಅದರ ಕರ್ತೃತ್ವವನ್ನು ನೀಡಿಲ್ಲ” ಎಂದು ಸಿಜೆಐ ಹೇಳಿದ್ದಾರೆ.

ಇದನ್ನೂ ಓದಿ: ಹೊಸ ಕ್ರಿಮಿನಲ್ ಕಾನೂನು ವಿರೋಧಿಸಿ ಟ್ರಕ್ ಚಾಲಕರ ದೇಶವ್ಯಾಪಿ ಪ್ರತಿಭಟನೆ

“ಈ ಪ್ರಕರಣವು ಸಂಘರ್ಷದ ಸುದೀರ್ಘ ಇತಿಹಾಸವನ್ನು ಹೊಂದಿದೆ, ರಾಷ್ಟ್ರದ ಇತಿಹಾಸದ ಆಧಾರದ ಮೇಲೆ ವೈವಿಧ್ಯಮಯ ದೃಷ್ಟಿಕೋನಗಳನ್ನು ಹೊಂದಿದೆ. ಪೀಠದ ಭಾಗವಾಗಿದ್ದ ಎಲ್ಲರೂ ಇದು ನ್ಯಾಯಾಲಯದ ತೀರ್ಪು ಎಂದು ನಿರ್ಧರಿಸಿದರು. ನ್ಯಾಯಾಲಯವು ಒಂದೇ ಧ್ವನಿ ಮತ್ತು ಕಲ್ಪನೆಯ ಮೂಲಕ ಮಾತನಾಡುತ್ತದೆ. ಹಾಗೆ ಮಾಡುವುದರಿಂದ ಅಂತಿಮ ಫಲಿತಾಂಶದಲ್ಲಿ ಮಾತ್ರವಲ್ಲದೆ ತೀರ್ಪಿನಲ್ಲಿ ಸೂಚಿಸಲಾದ ಕಾರಣಗಳಲ್ಲಿ ನಾವೆಲ್ಲರೂ ಒಟ್ಟಿಗೆ ನಿಂತಿದ್ದೇವೆ ಎಂಬ ಸ್ಪಷ್ಟ ಸಂದೇಶವನ್ನು ಕಳುಹಿಸುವುದಾಗಿದೆ” ಎಂದು ಅವರು ಹೇಳಿದ್ದಾರೆ.

ದೇಶವನ್ನು ದೀರ್ಘಕಾಲ ಧ್ರುವೀಕರಣಗೊಳಿಸಿದ ಮತ್ತು ಭಾರತೀಯ ಸಮಾಜದ ಜಾತ್ಯತೀತ ಚಿತ್ರಣವನ್ನು ಹಾಳುಗೆಡವಿದ್ದ ಪ್ರಕರಣದ ಕುರಿತು ಸರ್ವಾನುಮತದ ತೀರ್ಪನ್ನು ನೀಡುತ್ತಾ ಸರ್ವೋಚ್ಚ ನ್ಯಾಯಾಲಯದ ಪೀಠವು, “2019 ರಲ್ಲಿ ರಾಮನು ಈ ಸ್ಥಳದಲ್ಲಿ ಜನಿಸಿದನು ಎಂಬ ಹಿಂದೂಗಳ ನಂಬಿಕೆ ಎಂಬುವುದು ನಿರ್ವಿವಾದ. ಹಾಗಾಗಿ ಅವರು ಸಾಂಕೇತಿಕವಾಗಿ ಭೂಮಿಯ ಮಾಲೀಕರು” ಎಂದು ಹೇಳಿತ್ತು. ಆದರೂ, 16ನೇ ಶತಮಾನದ ಮಸೀದಿಯ ಮೂರು ಗುಮ್ಮಟಗಳನ್ನು ಹಿಂದೂ ಕರಸೇವಕರು ಕೆಡವಿದ್ದು ತಪ್ಪು ಎಂಬುದು ಸ್ಪಷ್ಟವಾಗಿದೆ ಅದನ್ನು ಸರಿಪಡಿಸಬೇಕು ಎಂದು ನ್ಯಾಯಾಲಯ ಹೇಳಿತ್ತು.

ವಿಡಿಯೊ ನೋಡಿ: ಮೃಣಾಲ್ ಸೆನ್ 100 : ಒಕ ಊರಿ ಕಥಾ ದಲ್ಲಿ ಕಾಣುವ ತೆಲಂಗಾಣ ಊಳಿಗಮಾನ್ಯ ವ್ಯವಸ್ಥೆ Janashakthi Media

Donate Janashakthi Media

Leave a Reply

Your email address will not be published. Required fields are marked *