ಮ್ಯಾನ್ಮಾರ್ ನ ಜನನಾಯಕಿ ಆಂಗ್ ಸಾನ್ ಸೂಕಿಗೆ ನಾಲ್ಕು ವರ್ಷ ಜೈಲು ಶಿಕ್ಷೆ

ಬ್ಯಾಂಕಾಕ್ : ನೊಬೆಲ್ ಪ್ರಶಸ್ತಿ ವಿಜೇತೆ ಮತ್ತು ಮ್ಯಾನ್ಮಾರ್ ನ ಜನನಾಯಕಿ ಆಂಗ್ ಸಾನ್ ಸೂಕಿ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಸೇನೆಯ ವಿರುದ್ಧ ಅತೃಪ್ತಿ ಮತ್ತು ಕೋವಿಡ್ ಶಿಷ್ಟಾಚಾರವನ್ನು ಮುರಿದದ್ದಕ್ಕಾಗಿ ಅವರನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ.

ಆಂಗ್ ಸಾನ್ ಸೂಕಿ ಮ್ಯಾನ್ಮಾರ್ ನಲ್ಲಿ ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅವರ ಮೇಲೆ ಭ್ರಷ್ಟಾಚಾರ, ಮತದಾನದ ರಿಗ್ಗಿಂಗ್ ಆರೋಪವೂ ಇದೆ. ಪ್ರಸ್ತುತ, ಸೇನೆ ಅವರನ್ನು ಎರಡು ಪ್ರಕರಣಗಳಲ್ಲಿ ದೋಷಿ ಎಂದು ತೀರ್ಪು ನೀಡಿದೆ.

ಸೆಕ್ಷನ್ 505 (ಬಿ) ಅಡಿಯಲ್ಲಿ ಆಂಗ್ ಸಾನ್ ಸೂಕಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಸ್ವಾಭಾವಿಕ ವಿಪತ್ತು ಕಾನೂನು ಅಡಿಯಲ್ಲಿ ಮತ್ತೆರಡು ವರ್ಷ ಜೈಲು ಶಿಕ್ಷೆಗೆ ಅವರು ಒಳಗಾಗಿದ್ದಾರೆ ಎಂದು ಜುಂಟಾ ಲಕ್ತಾರ ಝವ್ ಮಿನ್ ತುನ್ ಹೇಳಿದ್ದಾರೆ.

ಮಿಲಿಟರಿ ಆಡಳಿತದ ವಿರುದ್ಧ ಧ್ವನಿ ಎತ್ತಿದ ಉನ್ನತ ನಾಯಕರಲ್ಲಿ ಆಂಗ್ ಸಾನ್ ಸೂಕಿ ಕೂಡ ಒಬ್ಬರು. ಆದ್ದರಿಂದಲೇ ಮ್ಯಾನ್ಮಾರ್ ನೊಳಗೆ ಅವರ ಜನಪ್ರಿಯತೆ ಅಗಾಧವಾಗಿ ಮುಂದುವರೆದಿದೆ. ಕ್ಷಿಪ್ರಕ್ರಾಂತಿಯ ನಂತರ ಮ್ಯಾನ್ಮಾರ್ ನಲ್ಲಿ ಭಾರಿ ಪ್ರತಿಭಟನೆಗಳು ನಡೆದಿದ್ದವು. ಈ ಜನರ ಧ್ವನಿಗಳನ್ನು ಹತ್ತಿಕ್ಕಲು ಸೈನ್ಯವು ಹಿಂಸಾತ್ಮಕ ವಿಧಾನಗಳನ್ನು ಬಳಸಿತು. ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪ್ರಾಣತ್ಯಾಗ ಮಾಡಿದ್ದರು. ಆದಾಗ್ಯೂ, ದೇಶದ ಅನೇಕ ಭಾಗಗಳಲ್ಲಿ ಪ್ರತಿಭಟನೆಗಳು ಇನ್ನೂ ನಡೆಯುತ್ತಲೇ ಇವೆ.

Donate Janashakthi Media

Leave a Reply

Your email address will not be published. Required fields are marked *