ಪರಿಷತ್ ಸದಸ್ಯ ರಾಜೇಂದ್ರ ಹತ್ಯೆಗೆ ಸುಪಾರಿ ಸಂಚಿನ ಮಾಹಿತಿಯ ಆಡಿಯೋ ಬಿಡುಗಡೆ

ಬೆಂಗಳೂರು: ಈಗಾಗಲೇ ಸಚಿವ ಕೆ.ಎನ್‌ ರಾಜಣ್ಣ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಹತ್ಯೆಗೆ ಸುಪಾರಿ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದ ದೂರು ದಾಖಲಾಗಿದ್ದೂ, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದ ಆಡಿಯೋ ಹೊರ ಬಿದ್ದಿದೆ. ಸದಸ್ಯ

ರಾಜೇಂದ್ರ ರಾಜಣ್ಣ ಇದೇ ಆಡಿಯೋ ಉಲ್ಲೇಖಿಸಿ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ಆಡಿಯೋದಲ್ಲಿ ಸುಪಾರಿ ಸಂಚಿನ ಮಾಹಿತಿ ಹೊರ ಬಿದ್ದಿದೆ. ಇದೇ ಆಡಿಯೋದಿಂದಲೇ ಹತ್ಯೆಯ ಬಗ್ಗೆ ಮಾಹಿತಿಯು ರಾಜೇಂದ್ರಗೆ ಗೊತ್ತಾಗಿದೆ ಎನ್ನಲಾಗಿದೆ. ಸದಸ್ಯ

ಇದೇ ಆಡಿಯೋ ಆಧರಿಸಿ ರಾಜೇಂದ್ರ ಅವರು ದೂರು ದಾಖಲಿಸಿದ್ದಾರೆ. ಡಿಸೆಂಬರ್‌ನಲ್ಲಿ ಪುಷ್ಪಾ ಹಾಗೂ ರಾಕಿ ಎನ್ನುವವರ ಮಧ್ಯೆ ಈ ಸಂಭಾಷಣೆ ನಡೆದಿದೆ. ಈ ಆಡಿಯೋನಲ್ಲಿ ಪ್ರಕರಣದ ಎ1 ಆರೋಪಿ ಸೋಮನ ಪ್ಲ್ಯಾನ್‌ ಬಗ್ಗೆ ಪುಷ್ಪಾ ಎಂಬ ಮಹಿಳೆ ಮಾತನಾಡಿದ್ದಾರೆ.

ಇದನ್ನೂ ಓದಿ: ವೃದ್ಧೆಯ ಮೇಲೆ ಅತ್ಯಾಚಾರ: ವಿಚಾರಣೆಯ12ನೇ ದಿನಕ್ಕೆ ಕೋರ್ಟ್ ತೀರ್ಪು

ಆರೋಪಿ ಸೋಮ ರಾಜೇಂದ್ರರನ್ನು ಹತ್ಯೆ ಮಾಡಲು ಸುಪಾರಿ ಪಡೆದಿರುವುದಾಗಿ ಪುಷ್ಪಾಳ ಬಳಿ ಹೇಳಿಕೊಂಡಿದ್ದಾನೆ. ಆನಂತರ ಪುಷ್ಪಾ ಸುಪಾರಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿದ್ದಳು. ಸೋಮನ ಜೊತೆಗಿದ್ದು ಕೊಲೆ ಸಂಚಿನ ಮಾಹಿತಿ ಕಲೆಹಾಕಿದ್ದಾಳೆ. ಈ ವಿಚಾರವನ್ನ ರಾಜೇಂದ್ರಗೆ ತಿಳಿಸಲು ಪುಷ್ಪಾ ಮುಂದಾಗಿ, ರಾಕಿ ಎಂಬ ಹುಡುಗನೊಂದಿಗೆ ಮಾತನಾಡಿದ್ದಾಳೆ.

ಅದಕ್ಕಾಗಿ ಕೊಲೆ ಸಂಚಿನ ಬಗ್ಗೆ ಪುಷ್ಪ ಹೇಳಿದ್ದನ್ನ ರಾಕಿ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದ. ಆನಂತರ ಈ ವಿಡಿಯೋ ರಾಜೇಂದ್ರ ಅವರನ್ನು ತಲುಪಿದೆ. ಸದ್ಯ ಈ ಆಡೋಯಿವನ್ನು ಪೊಲೀಸರು ಎಫ್ ಎಸ್ ಎಲ್ ಗೆ ಕಳುಹಿಸಿದ್ದಾರೆ. ಆರೋಪಿ ಸೋಮ, ಭರತ್, ಅಮಿತ್, ಗುಂಡಾ, ಯತೀಶ್ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ರಾಜೇಂದ್ರ ಹತ್ಯೆಗೆ ಸುಪಾರಿ ನೀಡಿದ ವಿಚಾರದ ಬಗ್ಗೆ ಆಡಿಯೋದಲ್ಲಿ ಪುಷ್ಪಾ ಹಲವು ಆರೋಪ ಮಾಡಿದ್ದು, ನವೆಂಬರ್‌ನಲ್ಲಿ ರಾಜೇಂದ್ರ ಅವರ ಮಗಳ ಬರ್ತ್‌ಡೇ ಡೆಕೋರೇಷನ್‌ಗೆ ಜೈಪುರದ ಇಬ್ಬರು ಹುಡುಗರು ಬಂದಿದ್ದರು. ಆ ಇಬ್ಬರನ್ನೂ ಸೋಮ ಕಳುಹಿಸಿದ್ದ. ಆಗಲೇ ಹತ್ಯೆಗೆ ಯತ್ನ ನಡೆದಿತ್ತು ಅಂತ ಆಡಿಯೋದಲ್ಲಿ ಪುಷ್ಪಾ ಮಾಹಿತಿ ನೀಡಿದ್ದಾಳೆ. ಸೋಮನಿಗೆ 5 ಲಕ್ಷ ಹಣ ಬಂದಿರೋದು ಸತ್ಯ ಸತ್ಯ ಸತ್ಯ. ಪೊಲೀಸರು ಕರೆದುಕೊಂಡು ಹೋಗಿ ವಿಚಾರಣೆ ಮಾಡಿದರೆ ಎಲ್ಲ ಗೊತ್ತಾಗುತ್ತದೆ.

ರಾಜೆಂದ್ರ ಅವ್ರ ಮುಂದೆ ನಾನೇ ಹೇಳ್ತೀನಿ, ನನ್ನ ಕರೆದುಕೊಂಡು ಹೋಗು ಅಂತ ರಾಕಿ ಎನ್ನುವವನೊಂದಿಗೆ ಪುಷ್ಪಾ ಹೇಳಿಕೊಂಡಿದ್ದಾಳೆ. ಜೈಪುರದ ಮತ್ತೋರ್ವ ರೌಡಿಶೀಟರ್ ಪ್ರಸಿಯನ್ನೂ ಮರ್ಡರ್ ಮಾಡೋದಾಗಿ ಸೋಮ ಹೇಳಿದ್ದಾನೆ.ನ ಬೆಂಗಳೂರಿನ ಕಲಾಸಿಪಾಳ್ಯದಿಂದ ಇಬ್ಬರು ತಮಿಳು ಹುಡುಗರ್ನು ಸೋಮ ಕರೆಸಿಕೊಳ್ತಿದ್ದಾನೆ. ಜೈಲಿನಲ್ಲಿರುವ ಸ್ಟೀಫನ್ ಗುಂಡನನ್ನ ಪೆರೋಲ್ ಮೇಲೆ ಕರೆದುಕೊಂಡು ಬರಲು ಸೋಮ ಪ್ಲಾನ್ ಮಾಡಿದ್ದಾನೆ. ಆತನನ್ನು ನೆಟ್‌ವರ್ಕ್ ಇಲ್ದೇ ಇರೋ ಜಾಗದಲ್ಲಿ ಇಡಲು ಮನೆ ಮಾಡುತ್ತಿದ್ದಾನೆ ಎಂಬ ಮಾಹಿತಿಯನ್ನು ಪುಷ್ಪಾ ನೀಡಿದ್ದಾಳೆ ಸದ್ಯ ಈ ಆಡಿಯೋ ವೈರಲ್ ಆಗಿದೆ.

ಇದನ್ನೂ ನೋಡಿ: ಇಂಗ್ಲೀಷ್‌ ಕಲಿಯೋಣ | ಸರ್ವನಾಮಗಳು – Pronouns | ತೇಜಸ್ವಿನಿ Janashakthi Media

Donate Janashakthi Media

Leave a Reply

Your email address will not be published. Required fields are marked *