ಭಿನ್ನ ಅಭಿಪ್ರಾಯಗಳನ್ನು ದಮನಿಸುವುದನ್ನು ನಿಲ್ಲಿಸಬೇಕು -ಸಿಪಿಐ(ಎಂ) ಪೊಲಿಟ್‍ ಬ್ಯುರೊ

ದಿಲ್ಲಿಯಲ್ಲಿ ಜಿ-20 ರ ಪರ್ಯಾಯ ನೀತಿಗಳ ವಿಚಾರ ಸಂಕಿರಣವನ್ನು ತಡೆಯುವ ಯತ್ನ 

ನವದೆಹಲಿ: ದಿಲ್ಲಿಯಲ್ಲಿ ಸುರ್ಜಿತ್‍ ಭವನದಲ್ಲಿ ಜಿ-20 ಶೃಂಗ ಸಭೆ ಕುರಿತಂತೆ ಕೆಲವು ನಾಗರಿಕ ಸಮಾಜದ ಸಂಘಟನೆಗಳು  ನಡೆಯುತ್ತಿದ್ದ ವಿಚಾರ ಸಂಕಿರಣವನ್ನು ತಡೆಯಲು ದಿಲ್ಲಿ ಪೋಲೀಸರು ಭವನದ ದ್ವಾರವನ್ನು ಅಡ್ಡಗಟ್ಟಿ ಬೀಗ ಜಡಿದಿರುವುದರ ಬಗ್ಗೆ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ.

ಜಿ-20ಕ್ಕೆ  ಗೆ ಸಂಬಂಧಿಸಿದಂತೆ ಪರ್ಯಾಯ ನೀತಿಗಳ ಕುರಿತು ನವದೆಹಲಿಯ ಹರ್ಕಿಶನ್ ಸಿಂಗ್ ಸುರ್ಜೀತ್ ಭವನದಲ್ಲಿ ನಡೆಯುತ್ತಿದ್ದ ವಿಚಾರಸಂಕಿರಣ-ಕಾರ್ಯಾಗಾರವನ್ನು  ನಿಲ್ಲಿಸಲು ಪ್ರಯತ್ನಿಸಿದ ದೆಹಲಿ ಪೊಲೀಸರ ಕ್ರಮವು ಸಂಪೂರ್ಣವಾಗಿ ಅನಪೇಕ್ಷಿತವಾಗಿದೆ  ಮತ್ತು ಭಿನ್ನಾಭಿಪ್ರಾಯದ ದನಿಗಳನ್ನು  ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಖಂಡಿಸಿದೆ.

ಸುರ್ಜೀತ್ ಭವನವು ಸಿಪಿಐ(ಎಂ) ಒಡೆತನದಲ್ಲಿದೆ, ಅಲ್ಲಿ ಅದು ಪಕ್ಷದ ಶಿಕ್ಷಣ ಮತ್ತು ಸೆವಿಚಾರ ಸಂಕಿರಣಗಳು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸುತ್ತದೆ. ಮುಂಬರುವ ಜಿ-20 ಶೃಂಗಸಭೆ ಎತ್ತಿರುವ ವಿಷಯಗಳ ಕುರಿತು We20 ಬ್ಯಾನರ್ ಅಡಿಯಲ್ಲಿ ವಿವಿಧ ನಾಗರಿಕ ಸಮಾಜದ ಸಂಘಟನೆಗಳು ಒಂದು ಸಭೆಯನ್ನು ನಡೆಸುತ್ತಿದ್ದವು.

ಪೊಲೀಸರ ಅನುಮತಿ ಪಡೆದಿಲ್ಲ ಎಂದು ಹೇಳಿ ಸಭೆ ನಿಲ್ಲಿಸಲು ಪೊಲೀಸರು ಯತ್ನಿಸಿದರು. ಖಾಸಗಿ ಕಟ್ಟಡಗಳಲ್ಲಿ ಇಂತಹ ಸಭೆಗಳು ಅಥವಾ ವಿಚಾರ ಸಂಕಿರಣಗಳಿಗೆ ಪೊಲೀಸ್ ಅನುಮತಿಯ ಅಗತ್ಯ ಎಂದೂ ಇರಲಿಲ್ಲ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯೂರೋ ದೆಹಲಿ ಪೊಲೀಸರ ಈ ನಿರಂಕುಶ ಕ್ರಮವನ್ನು ತೀವ್ರವಾಗಿ ಪ್ರತಿಭಟಿಸುವುದಾಗಿ ಹೇಳಿದೆ.

ಇದನ್ನೂ ಓದಿ:ನೂಹ್ ಮತ್ತು ಗುರ್‌ಗಾಂವ್‌ಗೆ ಸಿಪಿಐ(ಎಂ) ನಿಯೋಗದ ಭೇಟಿ

 ರಾಜಧಾನಿಯಲ್ಲಿ ಚರ್ಚೆಗಳು ಮತ್ತು ವಿಚಾರ ಸಂಕಿರಣಗಳನ್ನು ನಡೆಸುವ ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕಿನಲ್ಲಿ ದೆಹಲಿ ಪೊಲೀಸರ ಮೂಲಕ ಹಸ್ತಕ್ಷೇಪ ನಡೆಸುವುದನ್ನು ಮೋದಿ ಸರ್ಕಾರ ನಿಲ್ಲಿಸಬೇಕು ಎಂದು ಅದು ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *