ಧರ್ಮಸ್ಥಳ ಹೆಗ್ಗಡೆ ಪರ ಪ್ರತಿಭಟನೆಯಲ್ಲಿ ಸೌಜನ್ಯ ಕುಟುಂಬ ಸದಸ್ಯರ ಮೇಲೆ ಹಲ್ಲೆಗೆ ಯತ್ನ!

‘ಸೌಜನ್ಯಳಿಗೆ ನ್ಯಾಯ ಕೊಡಿಸಿ’ ಎಂಬ ಬಿತ್ತಿ ಪತ್ರವನ್ನು ಹಿಡಿದು ಸೌಜನ್ಯರ ಅಲ್ಲಿಗೆ ತೆರಳಿದ್ದರು

ದಕ್ಷಿಣ ಕನ್ನಡ: ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಕುಮಾರಿ ಸೌಜನ್ಯ ಅವರ ತಮ್ಮ, ತಾಯಿ ಮತ್ತು ಕುಟುಂಬಿಕರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ ಘಟನೆ ಶುಕ್ರವಾರ ಧರ್ಮಸ್ಥಳ ಬಳಿಯ ಉಜಿಯಲ್ಲಿ ನಡೆದ ಪ್ರತಿಭಟನಾ ಸಭಯೊಂದರಲ್ಲಿ ನಡೆದಿದೆ. ಈ ವೇಳೆ ಅವರನ್ನು ಪೊಲೀಸರು ಸುತ್ತುವರೆದು ರಕ್ಷಿಸಿ ಅಲ್ಲಿಂದ ಹೊರಗಡೆ ಕರೆತಂದಿದ್ದಾರೆ.

ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಧರ್ಮಸ್ಥಳ ದೇವಾಲಯ ಮತ್ತು ಬಿಜೆಪಿ ಸಂಸದ ವೀರೇಂದ್ರ ಹೆಗ್ಗೆಡೆ ಅವರನ್ನು ಅವಮಾನಿಸಲಾಗುತ್ತಿದೆ ಎಂದು ಆರೋಪಿಸಿ ಮಂಜುನಾಥ ಸ್ವಾಮಿ ಭಕ್ತವೃಂದ ಈ ಪ್ರತಿಭಟನಾ ಸಭೆಯೊಂದನ್ನು ಆಯೋಜಿಸಿತ್ತು. ಪ್ರತಿಭಟನಾಕಾರರು ಸೌಜನ್ಯ ಸಾವಿಗೆ ನ್ಯಾಯ ಬೇಕು, ಆದರೆ ಧರ್ಮಸ್ಥಳದ ಅವಹೇಳನ ಸಲ್ಲದು ಎಂದು ಹಕ್ಕೊತ್ತಾಯ ಮಾಡಿದ್ದರು.

ಈ ಪ್ರತಿಭಟನೆಯಲ್ಲಿ ಸೌಜನ್ಯ ಅವರ ತಾಯಿ, ತಮ್ಮ ಸೇರಿದಂತೆ ಕುಟುಂಬದ ಕೆಲವು ಸದಸ್ಯರು, “ಸೌಜನ್ಯಳಿಗೆ ನ್ಯಾಯ ಕೊಡಿಸಿ” ಎಂಬ ಬಿತ್ತಿ ಪತ್ರವನ್ನು ಹಿಡಿದು ಭಾಗವಹಿಸಿದ್ದರು.

ಇದನ್ನೂ ಓದಿ: ಸೌಜನ್ಯ ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಲ್ಲ: ದುನಿಯಾ ವಿಜಯ್

ಆದಾಗ್ಯೂ, ಸೌಜನ್ಯ ಅವರ ತಾಯಿ ವೇದಿಕೆ ಹತ್ತಲು ಪ್ರಯತ್ನಿಸಿದಾಗ ಪೊಲೀಸರು ತಡೆದಿದ್ದು ಸ್ಥಳದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಇದನ್ನು ಸೌಜನ್ಯ ಅವರ ತಮ್ಮ ಇದನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಅವರ ಕೊರಳ ಪಟ್ಟಿ ಹಿಡಿದು ದೌರ್ಜನ್ಯ ನಡೆಸಲಾಗಿದೆ. ಅವರನ್ನು ತಳ್ಳಾಡಿದ್ದು ಸೌಜನ್ಯ ಕುಟುಂಬದ ಸದಸ್ಯರ ಮೇಲೆ ಹಲ್ಲೆಗೂ ಪ್ರಯತ್ನಿಸಲಾಗಿದೆ. ಘಟನೆಯ ವಿಡಿಯೊ ಇದೀಗ ವೈರಲ್ ಆಗಿದ್ದು, ದುಷ್ಕರ್ಮಿಯೊಬ್ಬ ಸೌಜನ್ಯರ ತಮ್ಮನನ್ನು ಎಳೆದು ಎಚ್ಚರಿಕೆ ನೀಡುವುದು ದಾಖಲಾಗಿದೆ.

ಘಟನೆಯ ನಂತರ ಮಾಧ್ಯಮದ ಜೊತೆಗೆ ಮಾತನಾಡಿದ ಸೌಜನ್ಯ ಅವರ ತಾಯಿ ಕುಸುಮಾವತಿ, “ವಿರೇಂದ್ರ ಹೆಗಡೆಯವರ ಬೆಂಬಲಿಗರು ಸೌಜನ್ಯ ಪರವಾಗಿ ಹೋರಾಟ ಮಾಡುತ್ತಿಲ್ಲ. ಇದೆಲ್ಲಾ ನೆಪವಷ್ಟೇ. ನನ್ನ ಮಗಳ ಹೆಸರನ್ನು ಬಳಸಿ ಹೋರಾಟ ಮಾಡುತ್ತಿದ್ದಾರೆ ಹೊರತು ನನ್ನ ಮಗಳ ಪರವಾಗಿ ಅಲ್ಲ. ನಾವು ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಎಸ್‌ಐಟಿ ತನಿಖೆ ನಡೆಯಲೇಬೇಕು” ಎಂದು ಆಗ್ರಹಿಸಿದ್ದಾರೆ.

ಹಲ್ಲೆ ನಡೆಸಲು ಪ್ರಯತ್ನಿಸಿದ ವ್ಯಕ್ತಿ ಈ ಹಿಂದೆ ಸೌಜನ್ಯ ಪರ ಹೋರಾಟದಲ್ಲಿ ಭಾಗವಹಿಸಿ ಸೌಜನ್ಯ ಕುಟುಂಬದ ಸದಸ್ಯರ ಮೇಲೆ ಹಲ್ಲೆಗೆ ಮುಂದಾಗಿದ್ದ ಎಂದು ಹಿರಿಯ ಪತ್ರಕರ್ತೆ ಹೇಮಾವತಿ ವೆಂಕಟ್ ಆರೋಪಿಸಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದಿರುವ ಅವರು, “ಸೌಜನ್ಯ ಕುಟುಂಬದವರ ಮೇಲೆ ಇಂದು ಉಜಿರೆಯಲ್ಲಿ ಹಲ್ಲೆಗೆ ಯತ್ನಿಸಿದ ಈ ವ್ಯಕ್ತಿ ಕಳೆದ ವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯುತ್ತಿರುವಾಗ ಸೌಜನ್ಯ ಮಾವ ವಿಠ್ಠಲ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದ. ಇದೇ ವ್ಯಕ್ತಿ ಮೈಸೂರಿನಲ್ಲಿ ಪ್ರೆಸ್ ಮೀಟ್ ನಡೆಯುವಾಗಲೂ ಇದ್ದನಂತೆ. ಹಾಗಿದ್ದರೆ ಸೌಜನ್ಯ ಕುಟುಂಬ ಹೋದಲ್ಲೆಲ್ಲ ಹಾಜರಿರುವ ಇವನನ್ನು ಕಳಿಸಿದವರು ಯಾರು, ಕೋರ್ಟಿನಿಂದ ಸ್ಟೇ ತಂದವರಾ?” ಎಂದು ಪ್ರಶ್ನಿಸಿದ್ದಾರೆ.

ವಿಡಿಯೊ ನೋಡಿ: ವಿರೇಂದ್ರ ಹೆಗ್ಗಡೆ ಪರ ಹೋರಾಟದಲ್ಲಿ” ಸೌಜನ್ಯಳಿಗೆ ನ್ಯಾಯ ಕೊಡಿಸಿ” ಪ್ಲೇಕಾರ್ಡ್‌ ಹಿಡಿದ ಸೌಜನ್ಯ ಕುಟುಂಬದ ಮೇಲೆ ಹಲ್ಲೆ

Donate Janashakthi Media

Leave a Reply

Your email address will not be published. Required fields are marked *