ಬಾಗಲಕೋಟೆ: ಮಾದಿಗ ಸಮುದಾಯದ ಕುಟುಂಬದ ಮೇಲೆ ಸವರ್ಣೀಯ ಮನೆತನದವರಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ಜಾಲಿಕಟ್ಟಿ ಗ್ರಾಮದಲ್ಲಿ ನಡೆದಿದ್ದೂ, ಇದನ್ನು ಖಂಡಿಸಿ ಪ್ರತಿಭಟನೆ ನಡೆದಿದೆ.
ಹಲ್ಲೆ ನಡೆದು ದೂರು ನೀಡಿದರು ಎಫ್‌ಐಆರ್ ದಾಖಲಿಸದೇ ಕಾಲಹರಣ ಮಾಡುತ್ತಿದ್ದ ಲೋಕಾಪುರ ಪಿಎಸ್‌ಐ ವಿರುದ್ಧ ಸಂತ್ರಸ್ತ ಕುಟುಂಬದೊಂದಿಗೆ ಪೋಲಿಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಟ್ರಸ್ಟ್ ದಾಖಲೆ – ₹18,380 ಕೋಟಿ ಸಂಗ್ರಹ
ಮೇಲಾಧಿಕಾರಿಗಳ ಆಗಮನದ ನಂತರ ಪರಿಸ್ಥಿತಿ ಶಾಂತಗೊಳಿಸಿದರು. ನಂತರ ಪಿಎಸ್‌ಐ.ರವರು ಎಫ್‌ಐಆರ್ ದಾಖಲಿಸಿದರು.
ಈ ಸಂದರ್ಭದಲ್ಲಿ ಭೀಮ್ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ಸದಸ್ಯರು, ಹಿರಿಯ ಹೋರಾಟಗಾರರು, ಲೋಕಾಪುರ ಭಾಗದ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ನೋಡಿ: ಒಳಮೀಸಲಾತಿ: ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ ನ್ಯಾ. ನಾಗಮೋಹನ್ ದಾಸ್ ಆಯೋಗ Janashakthi Media