ಕೋಲಾರ: ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಅವರ ಪುತ್ರ ಮೇಘಾವರ್ಷ ಮೇಲೆ ಅಂತರಗಂಗೆ ಬೆಟ್ಟದ ಪಾಪರಾಜನಹಳ್ಳಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ. ಕೋಟಿಗಾನಹಳ್ಳಿ ರಾಮಯ್ಯ
ಗ್ರಾಮದ ಮುನೇಶ್ವರ ದೇವಸ್ಥಾನದಲ್ಲಿ ಧ್ವನಿವರ್ಧಕ (ಮೈಕ್) ಹಾಕಿದ್ದರು. ಓದಲು ತೊಂದರೆ ಆಗುತ್ತಿದ್ದು, ಸೌಂಡ್ ಕಡಿಮೆ ಮಾಡುವಂತೆ ರಾಮಯ್ಯ ಮನವಿ ಮಾಡಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ತಗಾದೆ ತೆಗೆದ ಗ್ರಾಮದ ಮೂವರು ರಾಮಯ್ಯ ಹಾಗೂ ಮೇಘಾವರ್ಷ ಮೇಲೆ ಹಲ್ಲೆ ನಡೆಸಿದ್ದಾರೆ. ಕೋಟಿಗಾನಹಳ್ಳಿ ರಾಮಯ್ಯ
ಇದನ್ನು ಓದಿ : ಚುನಾವಣಾ ಬಾಂಡ್ ಹಗರಣ : ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಗೆ ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹ
ರಾಮಯ್ಯ ಅವರ ಮೇಲೆ ಪಾಪರಾಜನಹಳ್ಳಿಯ ಮಂಜುನಾಥ್, ಭೈರಪ್ಪ ಹಾಗೂ ಸುಬ್ಬು ಎಂಬುವರು ಹಲ್ಲೆ ನಡೆಸಿದ್ದಾರೆ. ಮಂಜುನಾಥ್‌ನನ್ನು ಬಂಧಿಸಲಾಗಿದೆ’ ಉಳಿದವರನ್ನು ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದ್ದಾರೆ.
ರಾಮಯ್ಯ ಅವರ ಕಣ್ಣಿಗೆ ಗಾಯವಾಗಿದ್ದು, ಮೊದಲು ನಗರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆ, ಬಳಿಕ ನೇತ್ರದೀಪ ಕಣ್ಣಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದರು. ಆಸ್ಪತ್ರೆಗೆ ಎಸ್ಪಿ ನಾರಾಯಣ ಭೇಟಿ ನೀಡಿದ್ದರು. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೋರಾಟಗಾರ ರಾಮಯ್ಯ ಅವರು ಪಾಪರಾಜನಹಳ್ಳಿ ಸಮೀಪದ ‘ಬುಡ್ಡಿದೀಪ’ ನಿವಾಸಿಯಾಗಿದ್ದಾರೆ.
ರಾಮಯ್ಯ ಅವರ ಹಲ್ಲೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಹಲ್ಲೆ ಮಾಡಿದವರ ವಿರುದ್ಧ ಸರ್ಕಾರ ಸ್ವಯಂ ದೂರು ದಾಖಲಿಸಿಕೊಳ್ಳಬೇಕು, ಹಾಗೂ ಅವರಿಗೆ ರಕ್ಷಣೆ ನೀಡಬೇಕು ಎಂದಿದ್ದಾರೆ.
ಇದನ್ನು ನೋಡಿ : ಕೋಮುವಾದಿ ಶಕ್ತಿಗಳನ್ನು ಓಡಿಸದ ಹೊರತು ಪ್ರಜಾಪ್ರಭುತ್ವಕ್ಕೂ ಸಂವಿಧಾನಕ್ಕೂ ಉಳಿಗಾಲವಿಲ್ಲ – ಎಸ್‌ಜಿ ಸಿದ್ದರಾಮಯ್ಯ