ಹಾಸನ: ಜಿಲ್ಲೆಯ ಬೇಲೂರು ತಾಲ್ಲೂಕಿನ ಅಡವಿ ಬಂಟೇನಹಳ್ಳಿ ಗ್ರಾಮದ ರೈತರ ಕೃಷಿಭೂಮಿಯ ಮಧ್ಯಭಾಗದಲ್ಲಿ ಟ್ರಂಚ್ ತೆಗೆಯುವ ಮೂಲಕ ಅರಣ್ಯ ಇಲಾಖೆಯ ಅಧಿಕಾರಿಗಳು ದೌರ್ಜನ್ಯ ಎಸಗಿದ್ದಾರೆ.
ಊರಿನ ಗೋಮಾಳ ಮತ್ತು ರೈತರು ಸಾಗುವಳಿ ಮಾಡಿ ಬೆಳೆ ಬೆಳೆಯುತ್ತಿರುವ, ಕಂದಾಯ ಇಲಾಖೆ ಹಕ್ಕುಪತ್ರ ನೀಡಿರುವ, ಪಹಣಿಯಲ್ಲಿ ಹೆಸರು ಬರುತ್ತಿರವ ಭೂಮಿಯನ್ನೇ ಅರಣ್ಯ ಇಲಾಖೆಯವರು ತಮಗೆ ಸೇರಿದ್ದು ಎಂದು ತೆರವುಗೊಳಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ:ಬೆಂಗಳೂರು| ಗರ್ಭಿಣಿಯನ್ನು ರಾತ್ರಿ 10 ಗಂಟೆವರೆಗೆ ಠಾಣೆಯಲ್ಲೇ ಕೂರಿಸಿಕೊಂಡ ಪೊಲೀಸರು
ರೈತ ವಿರೋಧಿ ಅರಣ್ಯ ಇಲಾಖೆಯ ದೌರ್ಜನ್ಯ ಖಂಡಿಸಿ ರೈತರು ತಮ್ಮ ಭೂಮಿಯಲ್ಲಿ ತೆಗೆದಿದ್ದ ಗುಂಡಿಯನ್ನು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಗುಂಡಿ ಮುಚ್ಚುವ ಕಾರ್ಯವನ್ನು ನಡೆಸಿದ್ದಾರೆ.
ಈ ಮೂಲಕ ರೈತರು ಆಗ್ರಹಿಸುವುದೇನೆಂದರೆ ಕೂಡಲೇ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ಕೂಡಲೇ ಅನುಭವದ ಆಧಾರದಲ್ಲಿ ರೈತರಿಗೆ ಭೂಮಿಯ ಹಕ್ಕನ್ನು ಉಳಿಸಿಕೊಡಬೇಕು.
ಇದನ್ನೂ ಓದಿ:ಮಹಿಳಾ ಐಪಿಎಲ್; ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳ ವೀಕ್ಷಣೆಗೆ ಮೆಟ್ರೋ ಸೇವೆ ವಿಸ್ತರಣೆ
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಎಚ್.ಆರ್. ನವೀನ್ ಕುಮಾರ್, ಬಂಟೇನಹಳ್ಳಿ ಗ್ರಾಮದ ವಿರುಪಾಕ್ಷ, ಸಿದ್ದಮಲ್ಲಪ್ಪ, ಪುಟ್ಟಸ್ವಾಮಿಗೌಡ, ಜಯಣ್ಣ, ಗಂಗಾಧರ, ನಾಗೇಗೌಡ, ಮುತ್ತಣ್ಣ, ಗಣೇಶ, ಮಲ್ಲೇಶ, ಕಿರಣ, ಯೋಗೇಶ್ ಶಿವೇಗೌಡ, ಶಿವಪ್ಪ ಮತ್ತಿತರರು ಇದ್ದರು.