ಅತಿವೃಷ್ಟಿಯಿಂದ ಹಾನಿ: ಸಮೀಕ್ಷೆ ಮುಗಿಸಿದ ಕೇಂದ್ರ ತಂಡ 

ರಾಜ್ಯದ ಅಧಿಕಾರಿಗಳೊಂದಿಗೆ ಸಭೆ , ಕಂದಾಯ ಸಚಿವ ಅಶೋಕ್ ಭಾಗಿ ಸಾಧ್ಯತೆ

 

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ತಲೆಧೋರಿದ್ದ ಪ್ರವಾಹದಿಂದಾದ ಹಾನಿಯನ್ನು ಕೇಂದ್ರದ ಸಮೀಕ್ಷಾ ತಂಡ ಪರಿಶೀಲನೆ ನಡೆಸಿದೆ. ಮಡಿಕೇರಿ, ಬಾಗಲಕೋಟೆ, ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ಸಮೀಕ್ಷೆ ಮುಕ್ತಾಯಗೊಳಿಸಿದೆ.

ಕೇಂದ್ರ ಗೃಹ ಸಚಿವಾಲಯದ ಜಂಟಿ ನಿರ್ದೇಶಕ ಕೆ.ಬಿ ಪ್ರತಾಪ್ ನೇತೃತ್ವದ ಆರು ಮಂದಿ ತಜ್ಞರನ್ನು ಒಳಗೊಂಡ ತಂಡ ಸೋಮವಾರ ರಾಜ್ಯಕ್ಕೆ ಭೇಟಿ ನೀಡಿತ್ತು. ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಜೊತೆಗೆ ಚರ್ಚೆ ನಡೆಸಿದ ತಂಡ ಬಳಿಕ ಪ್ರವಾಹದಿಂದ ಹಾನಿಗೊಳಗಾದ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ರಾಜ್ಯಕ್ಕೆ ಪ್ರವಾಹದಿಂದ 8071 ಕೋಟಿ ರೂ.ಗಳ ನಷ್ಟ ಆಗದೆ ಎಂದು ಕೇಂದ್ರ ಅಧ್ಯಯನ ತಂಡಕ್ಕೆ ಮುಖ್ಯಮಂತ್ರಿ ಬಿಎಸ್‌ವೈ ಈಗಾಗಲೇ ನಡೆದ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಈ ಬಳಿಕ ಜಿಲ್ಲೆಗಳಿಗೆ ಮೂರು ತಂಡಗಳಾಗಿ ತೆರಳಿ ಕೇಂದ್ರದ ಸಮೀಕ್ಷಾ ತಂಡ ಪರಿಶೀಲನೆ ನಡೆಸಿದೆ. ಇದೀಗ ಮತ್ತೆ ಬೆಂಗಳೂರಿಗೆ ವಾಪಸ್‌ ಆಗಿದ್ದು ಬುಧವಾರದಂದು ವಿಧಾನಸೌಧದಲ್ಲಿ ರಾಜ್ಯದ ಅಧಿಕಾರಿಗಳ ಜೊತೆಗೆ ಮಹತ್ವದ ಸಭೆಯನ್ನು ನಡೆಸಲಿದ್ದಾರೆ.

ಕಂದಾಯ ಸಚಿವ ಆರ್‌. ಅಶೋಕ್ ಕೂಡಾ ಈ ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.  ಪ್ರವಾಹ ಹಾಗೂ ಹಾನಿಯ ಕುರಿತಾದ ವಿಡಿಯೋಗಳು, ಫೋಟೋ ದಾಖಲೆಗಳನ್ನು ಕೇಂದ್ರದ ತಂಡಕ್ಕೆ ರಾಜ್ಯದ ಅಧಿಕಾರಿಗಳು ತೋರಿಸಲಿದ್ದಾರೆ

Donate Janashakthi Media

Leave a Reply

Your email address will not be published. Required fields are marked *