ಲಾಗೊಸ್: ಚರ್ಚ್‌ನಲ್ಲಿ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಬಂದೂಕುಧಾರಿಗಳು 50ಕ್ಕೂ ಹೆಚ್ಚು ಭಕ್ತರನ್ನು ದಾರುಣವಾಗಿ ಹತ್ಯೆಗೈದಿರುವ ಘಟನೆ ನೈರುತ್ಯ ನೈಜೀರಿಯಾದ ಕ್ಯಾಥೊಲಿಕ್ ಚರ್ಚ್‌ನಲ್ಲಿ ನಡೆದಿದೆ.
ನೈರುತ್ಯ ನೈಜೀರಿಯಾದ ಒಂಡೋ ರಾಜ್ಯದ ಒವೊ ನಗರದ ಸೈಂಟ್ ಫ್ರಾನ್ಸಿಸ್ ಕ್ಯಾಥೊಲಿಕ್ ಚರ್ಚ್‌ನಲ್ಲಿ ಕ್ರೈಸ್ತ ಧರ್ಮೀಯರ ವಿಶೇಷ ದಿನವಾದ ಪೆಂಟೆಕೋಸ್ಟ್ ಸಂಡೇ ಹಿನ್ನೆಲೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ ನೂರಾರು ಸಂಖ್ಯೆಯಲ್ಲಿ ಭಕ್ತರು ಚರ್ಚ್‌ಗೆ ಪೂಜೆಗಾಗಿ ಆಗಮಿಸಿದ್ದರು. ಈ ವೇಳೆ ಏಕಾಏಕಿ ಚರ್ಚ್‌ಗೆ ಶಸ್ತ್ರಸಜ್ಜಿತವಾಗಿ ದಾಳಿ ನಡೆಸಿದ ಬಂದೂಕುಕೋರರು ಗುಂಡಿನ ಸುರಿಮಳೆ ಸುರಿಸಿದ್ದಾರೆ. ಪರಿಣಾಮ ಈ ದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 50ಕ್ಕೂ ಹೆಚ್ಚು ಜನ ಮೃತಪಟ್ಟಿರೋದಾಗಿ ತಿಳಿದುಬಂದಿದೆ.
‘ಪೂಜೆ ನಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಬಂದೂಕುದಾರರು ಚರ್ಚ್‌ನ ಒಳಗೆ ಮತ್ತು ಹೊರಗೆ ಇದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಿದರು. ಹೀಗಾಗಿ ಘಟನೆಯಲ್ಲಿ 50ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಒಟ್ಟು ಎಷ್ಟು ಮಂದಿ ಮೃತಪಟ್ಟಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ ಎಂದು ನೈಜೀರಿಯಾದ ಕ್ಯಾಥೋಲಿಕ್ ಚರ್ಚ್ ವಕ್ತಾರ ರೆವರೆಂಡ್ ಆಗಸ್ಟೀನ್ ಇಕ್ವು ಹೇಳಿದ್ದಾರೆ.
I was at the scene of the terror attack on innocent worshipers at St. Francis Catholic Church in Owo, today. I also visited the hospitals where survivors of the attack are receiving medical attention.
The attack was the most dastardly act that could happen in any society. pic.twitter.com/I8xv80CTfL
— Arakunrin Akeredolu (@RotimiAkeredolu) June 5, 2022
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಒಂಡೋ ರಾಜ್ಯದ ರಾಜ್ಯಪಾಲ ಅರಕುನ್ರಿನ್ ಒಲುವಾರೊಟಿಮಿ ಅಕೆರೆಡೊಲು ಅವರು ಈ ಭೀಕರ ಘಟನೆಯನ್ನು ‘ಮಹಾನ್ ಹತ್ಯಾಕಾಂಡ’ ಎಂದು ಬಣ್ಣಿಸಿದ್ದಾರೆ. ಅಲ್ಲದೇ ಇಂತಹ ದುರ್ಘಟನೆ ಮತ್ತೆ ಮರುಕಳಿಸಲು ಬಿಡಬಾರದು. ಎಂದು ಹೇಳಿದ್ದಾರೆ.