ಹಾಸನ : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೊದಲಿಗೆ ಆರೋಪಿಗೂ ನಮ್ಮ ಕುಟುಂಬಕ್ಕೂ ಸಂಭಂಧವಿಲ್ಲ ಎಂದವರು ಈಗ ಪ್ರತಿ ದಿನ ಯಾಕೆ ಮೈಕ್ ಮುಂದೆ ಭಾಷಣ ಮಾಡುತ್ತಿದ್ದಾರೆ, ಕುಟುಂಬ ಪ್ರೇಮ ಯಾಕೆ ಉಕ್ಕಿ ಹರಿಯುತ್ತಿದೆ? ಮೊದಲಿಗೆ
ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಯಕ ಮಾವಳ್ಳಿ ಶಂಕರ್ ಪ್ರಜ್ವಲ್ ರೇವಣ್ಣ ಚಿಕ್ಕಪ್ಪ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯನ್ನು ಬಹಿರಂಗವಾಗಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಪ್ರತಿಭಟನೆಗೆ ಮುಂದಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಬಂಧನ
ವಿವಿಧ ಜನಪರ ಸಾಮಾಜಿಕ ಹೋರಾಟಗಾರರು, ವಿವಿಧ ಸಂಘಟನೆಗಳು ಒಗ್ಗಟ್ಟಾಗಿ ಹಾಸನದಲ್ಲಿಂದು ಆಯೋಜಿಸಿದ್ದ ವಿಕೃತ ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್ ರೇವಣ್ಣ ಬಂಧನ್ಕಕೆ ಆಗ್ರಹ, ಲೈಂಗಿಕ ದೌರ್ಜನ್ಯಕ್ಕೊಳಗಾದವರಿಗೆ ಆತ್ಮಸ್ಥೈರ್ಯ ತುಂಬುವ, ಹೆಣ್ಣು ಸಂಕುಲದ ಘನತೆ ಎತ್ತಿ ಹಿಡಿಯಲು “ ಹೋರಾಟದ ನಡಿಗೆ ಹಾಸನದ ಕಡೆಗೆ” ಅಡಿಬರಹದಡಿ ಹಾಸನ ಚಲೋ ಬೃಹತ್ ಕಾರ್ಯಕ್ರವನ್ನುದ್ದೇಶಿಸಿ ಮಾವಳ್ಳಿ ಶಂಕರ್ ಮಾತನಾಡಿದರು. ಮೊದಲಿಗೆ
ಹಾಸನ ಜಿಲ್ಲೆಯಲ್ಲಿ ನಡೆದಿರುವ ಈ ಪ್ರಕರಣ ಎಲ್ಲರೂ ತಲೆತಗ್ಗಿಸುವಂಥದ್ದು, ಏಕೆಂದರೆ ಇದು ಹೋರಾಟದ ಕಣವಾಗಿದ್ದಂತಹ ಜಿಲ್ಲೆ, ರೈತ ಹೋರಾಟ, ದಲಿತ ಹೋರಾಟ, ಮಹಿಳಾ ಹೋರಾಟ ಮತ್ತು ಎಲ್ ಬಗೆಯ ಜನಪರ ಹೋರಾಟಗಳ ತಾಣವಾಗಿದ್ದ ಜಿಲ್ಲೆಯಲ್ಲಿ ಇಂಥ ಘೋರ ಪ್ರಕರಣ ನಡೆದಿರುವುದು ನಾಚಿಕೆಗೇಡು ಎಂದು ಮಾವಳ್ಳಿ ಶಂಕಿರ್ ಬೇಸರ ವ್ಯಕ್ತಪಡಿಸಿದರು.
ʼನಾನೇ ದೇವರು ಅಂತ ಹೇಳಿಕೊಳ್ಳುತ್ತಿರುವ ಪ್ರಧಾನ ಮಂತ್ರಿಗಳೇ ನೀವು ವಿವೇಕಾನಂದರನ್ನು ಮಲಿನ ಮಾಡುವುದನ್ನು ನಿಲ್ಲಿಸಿ, ಹಾಗೇನಾದರೂ ಮಾಡಬೇಕೆಂದಿದ್ದರೆ ಹಾಸನಕ್ಕೆ ಬಂದು ನೊಂದವರ ಅಳಲು ಕೇಳಿ ಎಬುದನ್ನು ನಾನೇ ದೇವರು ಎಂದು ಸ್ವಯಂ ಕರೆಯಿಸಿಕೊಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನುದ್ದೇಶಿಸಿ ಮಾವಳ್ಳಿ ಶಂಕರ್ ಪ್ರಶ್ನಿಸಿದರು.
ಹೇಗೆ ಆರೋಪಿ ದೇಶ ಬಿಟ್ಟು ಹಾರಿಹೋಗುತ್ತಾನೆ ಯಾರ ಬೆಂಬಲ ಇತ್ತು ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು
ರಾಜ್ಯ ಸರ್ಕಾರವೂ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ನೊಂದವರಿಗೆ ರಕ್ಷಣೆ ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಲೇಬೇಕು ಎಂದು ಈ ಹೋರಾಟದ ಮೂಲಕ ನಾವು ಆಗ್ರಹಿಸುತ್ತಿದ್ದೇವೆ. ಅಲ್ಲಿಯತನಕ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಸಿದರು.
ಇದನ್ನೂ ನೋಡಿ: ಏಂಗೆಲ್ಸ್ 200 : ಪ್ರಕೃತಿಯ ಗತಿತಾರ್ಕಿಕತೆ ಪುಸ್ತಕ ಬಿಡುಗಡೆ