ವಿಧಾನಸಭೆ ಚುನಾವಣೆ ಫಲಿತಾಂಶ: ಹರಿಯಾಣದಲ್ಲಿ ಸಮಬಲ, ಜಮ್ಮು – ಕಾಶ್ಮೀರದಲ್ಲಿ ಇಂಡಿಯಾ ಕೂಟ ಮುನ್ನಡೆ

ನವದೆಹಲಿ : ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆಯು ಆರಂಭದ ಹಂತಗಳಲ್ಲಿ ಮಿಶ್ರಣ ಫಲಿತಾಂಶದ ಲಕ್ಷಣ ತೋರಿಸಿದೆ. ಹೆಚ್ಚಿನ ಎಕ್ಸಿಟ್ ಪೋಲ್ ಸಮೀಕ್ಷೆಗಳು ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ಅಂದಾಜಿಸಿವೆ. 90 ಸೀಟುಗಳ ವಿಧಾನಸಭೆಯಲ್ಲಿ ಯಾವುದೇ ಪಕ್ಷದ ಅಧಿಕಾರಕ್ಕೆ ಬರಲು 45 ಸೀಟುಗಳ ಗಡಿ ತಲುಪಬೇಕಿದೆ.

ಈಗಾಗಲೇ ಸತತ ಎರಡು ಅವಧಿಯಲ್ಲಿ ಅಧಿಕಾರ ನಡೆಸಿರುವ ಬಿಜೆಪಿ, ಹ್ಯಾಟ್ರಿಕ್ ಜಯದ ಕನಸಿನಲ್ಲಿದೆ. ಆದರೆ, ಬಿಜೆಪಿ ನಾಗಾಲೋಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಬಯಸಿದೆ. ಸ್ವಂತ ಬಲದೊಂದಿಗೆ ಮೂರು ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿರುವ ಕೈ ಪಾಳೆಯಕ್ಕೆ, ಹರಿಯಾಣದ ಗೆಲುವು ದೊಡ್ಡ ಶಕ್ತಿ ನೀಡಲಿದೆ.

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿ ಬಹುಮತದ ಅಂಕವನ್ನು ದಾಟಿ 49 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 35 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಇದನ್ನೂ ಓದಿಜಮ್ಮು-ಕಾಶ್ಮೀರ, ಹರಿಯಾಣ ಚುನಾವಣಾ ಫಲಿತಾಂಶ : ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಆರಂಭಿಕ ಮುನ್ನಡೆ

ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಮತ್ತು ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ತಮ್ಮ ಸ್ಥಾನಗಳಲ್ಲಿ ಮುಂದಿದ್ದರು. ಐಎನ್‌ಎಲ್‌ಡಿ ನಾಯಕ ಅಭಯ್ ಸಿಂಗ್ ಚೌತಾಲಾ ಮತ್ತು ಜೆಜೆಪಿಯ ದುಶ್ಯಂತ್ ಚೌತಾಲಾ ಅವರು ತಮ್ಮ ಸ್ಥಾನಗಳಿಂದ ಹಿನ್ನಡೆಯಲ್ಲಿದ್ದಾರೆ. ಜಿಂದ್ ಜಿಲ್ಲೆಯ ಜೂಲಾನಾ ಕ್ಷೇತ್ರದಿಂದ ಕಾಂಗ್ರೆಸ್‌ನ ವಿನೇಶ್ ಫೋಗಟ್ 38 ಮತಗಳಿಂದ ಮುಂದಿದ್ದಾರೆ.  ಬಿಜೆಪಿಯ ಯೋಗೇಶ್ ಕುಮಾರ್ ಆರಂಭಿಕ ಮುನ್ನಡೆ ಸಾಧಿಸಿದ್ದರು. ಭಿವಾನಿ ಕ್ಷೇತ್ರದಲ್ಲಿ ಸಿಪಿಐಎಂ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿ ನಡುವೆ ಪೈಪೋಟಿ ಇದೆ.

 

ಹರಿಯಾಣ ವಿಧಾನಸಭೆ ಫಲಿತಾಂಶ 2024 

ಕಾಂಗ್ರೆಸ್‌ – 33

ಬಿಜೆಪಿ- 47

ಇತರರು – 07

 

ಕೇಂದ್ರಾಡಳಿತ ಪ್ರದೇಶವಾಗಿ ಬದಲಾದ ಬಳಿಕ ಜಮ್ಮು- ಕಾಶ್ಮೀರದಲ್ಲಿ ನಡೆದ ಮೊದಲ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ಜಮ್ಮು ಮತ್ತು ಕಾಶ್ಮೀರದ 90 ಸ್ಥಾನಗಳ ಪೈಕಿ ನ್ಯಾಷನಲ್ ಕಾನ್ಫರೆನ್ಸ್‌ ಪಕ್ಷ 41 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಜಮ್ಮು ಕಾಶ್ಮೀರದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಬಗ್ಗೆ ಮತಗಟ್ಟೆ ಸಮೀಕ್ಷೆಗಳು ಹೇಳಿದ್ದವು, ಆದರೆ ಲೆಕ್ಕಾಚಾರವೇ ಬೇರೆಯಾಗುತ್ತಿದೆ. ಇಂಡಿಯಾ ಕೂಟ ಸ್ಪಷ್ಟ ಬಹುಮತದತ್ತ ಸಾಗಿದೆ.

ಮುನ್ನಡೆಯಲ್ಲಿರುವ ಅಭ್ಯರ್ಥಿಗಳು

ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್ ಅಹ್ಮದ್ ಮಿರ್ ಮತ್ತು ಸಿಪಿಐ(ಎಂ) ನಾಯಕ ಎಂವೈ ತಾರಿಗಾಮಿ 3654 ಮತಗಳಿಂದ ಮುನ್ನಡೆಯಲ್ಲಿದ್ದು, ಪಕ್ಷೇತರ ಅಭ್ಯರ್ಥಿ ಎರಡನೇ ಸ್ಥಾನದಲ್ಲಿ ಇದ್ದಾರೆ. ಪಿಡಿಪಿ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ತರಿಗಾಮಿಯವರು 1996 ರಿಂದ ಸತತವಾಗಿ ಗೆಲ್ಲುತ್ತಿದ್ದಾರೆ.  ರಿಂದ   ಮತ್ತು ಬಿಜೆಪಿಯ ಮಾಜಿ ಸಚಿವ ಶಾಮ್ ಲಾಲ್ ಶರ್ಮಾ ಪ್ರಮುಖರು.

ಜಮ್ಮು – ಕಾಶ್ಮೀರ ವಿಧಾನಸಭೆ ಫಲಿತಾಂಶ 2024 

ನ್ಯಾಶಿನಲ್‌ ಕಾನ್ಫರೆನ್ಸ್‌ (NC) – 41

ಕಾಂಗ್ರೆಸ್‌ – 10

ಬಿಜೆಪಿ – 25

ಸಿಪಿಐಎಂ -01

ಪಿಡಿಪಿ – 04

ಇತರರು- 09

 

Donate Janashakthi Media

Leave a Reply

Your email address will not be published. Required fields are marked *