ಮಹಾರಾಷ್ಟ್ರ: ಎಂವಿಎ ಬಹುಮತ ಪಡೆದರೆ ಒಮ್ಮತದ ಮೂಲಕ ಸಿಎಂ ಆಯ್ಕೆ – ಸಚಿನ್‌ ಪೈಲಟ್‌

ನವದೆಹಲಿ: ಮಹಾ ವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದರೆ, ಮುಖ್ಯಮಂತ್ರಿ ಸ್ಥಾನವನ್ನು ನಿರ್ಧರಿಸುವಲ್ಲಿ ಮೈತ್ರಿ ಘಟಕಗಳ ನಡುವೆ ಯಾವುದೇ ಭಿನ್ನಮತವಿಲ್ಲ. ಯಾರಿಗೆ ಯಾವ ಸ್ಥಾನ ಸಿಗುತ್ತದೆ ಎಂಬುದನ್ನುನಿರ್ಧರಿಸಲು ಒಂದು ದಿನ ಸಾಕು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸಚಿನ್‌ ಪೈಲಟ್‌ ಹೇಳಿದ್ದಾರೆ.

ಮಹಾರಾಷ್ಟ್ರ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ಪ್ರಚಾರ ನಡೆಸಿರುವ ಪೈಲಟ್, ಎರಡು ರಾಜ್ಯಗಳಲ್ಲಿ ಬಿಜೆಪಿ ಮೈತ್ರಿಕೂಟ ಬಹುಮತ ಪಡೆಯಲಿದೆ ಎಂಬ ಮತಗಟ್ಟೆ ಸಮೀಕ್ಷೆಗಳನ್ನು ತಳ್ಳಿಹಾಕಿದ್ದಾರ. ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆಗಳು ಹಾಗೂ ವಿವಿಧ ರಾಜ್ಯಗಳ ಉಪಚುನಾವಣೆಗಳ ಫಲಿತಾಂಶಗಳು ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟಕ್ಕೆ ನಿಜಾಂಶವನ್ನು ಮನದಟ್ಟು ಮಾಡಲಿವ ಎಂದು ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಪೈಲಟ್ ತಿಳಿಸಿದ್ದಾರೆ.

ಇದನ್ನೂ ಓದಿ : ದೆಹಲಿ ವಿಧಾನಸಭಾ ಚುನಾವಣೆ : ಮೂರು ತಿಂಗಳ ಮೊದಲೆ ಪಟ್ಟಿ ಬಿಡುಗಡೆ ಮಾಡಿದ ಎಎಪಿ

ಮಹಾರಾಷ್ಟ್ರದಲ್ಲಿ ‘ಡಬಲ್ ಎಂಜಿನ್ ಸರ್ಕಾರ ಮತದಾರರ ಯಾವುದೇ ನಿರೀಕ್ಷೆಗಳನ್ನು ಈಡೇರಿಸಿಲ್ಲ. ಆದ್ದರಿಂದ ರಾಜ್ಯದಲ್ಲಿ ಸರ್ಕಾರ ಬದಲಾವಣೆಯಾಗಬೇಕು ಎಂಬ ಹಂಬಲ ಮತದಾರರಲ್ಲಿ ಕಾಣಿಸುತ್ತಿದೆ. ಮಹಾರಾಷ್ಟ್ರದಲ್ಲಿ ಎಂವಿಎ ಮೈತ್ರಿಕೂಟ ಬಹುಮತ ಪಡೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಜಾರ್ಖಂಡ್‌ನಲ್ಲಿಯೂ ಬಿಜೆಪಿ ವಿಶ್ವಾಸಾರ್ಹತೆಯನ್ನು ಹೊಂದಿಲ್ಲ. ಎರಡೂ ರಾಜ್ಯಗಳಲ್ಲಿ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಸರ್ಕಾರ ರಚಿಸಲಿವೆ ಎಂದು ನಾನು ಭಾವಿಸುತ್ತೇನೆ. ಎನ್‌ಡಿಎ ಮಿತ್ರಪಕ್ಷಗಳು ಹಲವು ವಿಷಯಗಳಲ್ಲಿ ಸಹಮತ ಹೊಂದಿಲ್ಲ. ಕಳೆದ 10 ವರ್ಷಗಳಲ್ಲಿ ಒಮ್ಮತದ ಕೊರತೆ, ಚರ್ಚೆಯ ಕೊರತೆಯಿಂದಾಗಿ ಸಂಸತ್ತಿನಲ್ಲಿ ಹಲವು ಮಸೂದೆಗಳನ್ನು ಹಿಂಪಡೆದಿರುವುದನ್ನು ನಾವು ನೋಡಿದ್ದೇವ’ ಎಂದು ಪೈಲಟ್ ಹೇಳಿದ್ದಾರೆ.

ಇದನ್ನೂ ನೋಡಿ : ಒಂದು ದೇಶ, ಒಂದು ಚುನಾವಣೆ | ಸಂವಿಧಾನದ ಮೂಲಭೂತರಚನೆಗೆ ಗಂಡಾಂತರ – ಕೆ.ಎನ್. ಉಮೇಶ್ Janashakthi Media

Donate Janashakthi Media

Leave a Reply

Your email address will not be published. Required fields are marked *