ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ನಗರದ ಸಪ್ತಗಿರಿ ಆಸ್ಪತ್ರೆ ಎದುರಿನ ಹೆಸರಘಟ್ಟ ರಸ್ತೆಯಲ್ಲಿರುವ ಗಬ್ರು ಬಿಸ್ಟ್ರೋ ಅಂಡ್ ಕೆಫೆಯಲ್ಲಿ ಡೆಲಿವರಿ ಬಾಯ್ ಮೇಲೆ ಸಿಬ್ಬಂದಿ ನಿರ್ದಯವಾಗಿ ಹಲ್ಲೆ ನಡೆಸಿದ ವಿಡಿಯೋವೊಂದು ಸಾಮಾಜಿ ಜಾಲತಾಣದಲ್ಲಿ ಹರಿದಾಡುತ್ತಿದೆ. ಆರ್ಡರ್ ಮಾಡಿದ ಆಹಾರ ತಡವಾಗಿ ಕೊಟ್ಟಿದ್ದಕ್ಕೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ. ಬೆಂಗಳೂರು
ಹೆಸರಘಟ್ಟ ರಸ್ತೆಯ ಗಬ್ರು ಬ್ರಿಸ್ಟೋ ಆ್ಯಂಡ್ ಕೆಫೆ ರೆಸ್ಟೋರೆಂಟ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ ಎಂದು ತಿಳಿದು ಬಂದಿದೆ. ಡೆಲಿವರಿ ಬಾಯ್‌ಯೊಬ್ಬ ರೆಸ್ಟೋರೆಂಟ್‌ನಿಂದ ಫುಡ್ ಪಡೆದು ಡೆಲಿವರಿ ಮಾಡಬೇಕಿತ್ತು. ಆದರೆ ಅರ್ಧ ಗಂಟೆಯಾದರೂ ರೆಸ್ಟೋರೆಂಟ್ ಸಿಬ್ಬಂದಿ ಪಾರ್ಸೆಲ್ ಕೊಟ್ಟಿರಲಿಲ್ಲ. ಇದನ್ನು ಪ್ರಶ್ನಿಸಿದ್ದ ಡೆಲಿವರಿ ಬಾಯ್‌ಗೆ ರೆಸ್ಟೋರೆಂಟ್ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಹುಚ್ಚುತನ ಬಿಡಿ, ಗೋಮೂತ್ರ ಔಷಧಿ ಅಲ್ಲ !
ಹಲ್ಲೆಗೊಳಗಾದ ಡೆಲಿವರಿ ಬಾಯ್ ಯಾರು ಎಂಬ ಮಾಹಿತಿ ತಿಳಿದುಬಂದಿಲ್ಲ. ಹಲ್ಲೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಝೊಮ್ಯಾಟೊ (@zomato), ಬೆಂಗಳೂರು ಪೊಲೀಸರು (@BlrCityPolice), @blrcitytraffic ಮತ್ತು ಇತರ ಅಧಿಕಾರಿಗಳ ಅಧಿಕೃತ ಎಕ್ಸ್ ಖಾತೆಗಳನ್ನು ಟ್ಯಾಗ್ ಮಾಡಿ ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆಸಿದ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಗಿದೆ.
ಇದನ್ನೂ ನೋಡಿ: ಮೋದಿ ಆಡಳಿತದಿಂದ ನಮ್ಮ ಜೀವನ ಗುಣಮಟ್ಟ ಮತ್ತಷ್ಟು ಹದಗೆಟ್ಟಿದೆ ಎಂದ ಶೇ. 37ರಷ್ಟು ಜನಸಂಖ್ಯೆ… Janashakthi Media