ಅಸ್ಸಾಂ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ : ಮೊದಲ ಹಂತದ ಮತದಾನ

ನವದೆಹಲಿ: ದೇಶಾದ್ಯಂತ ಭಾರೀ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು ಆರಂಭವಾಗಿದೆ.

ಪಶ್ಚಿಮ ಬಂಗಾಳದಲ್ಲಿ ಒಟ್ಟು ಎಂಟು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಮೊದಲ ಹಂತದಲ್ಲಿ 30 ಕ್ಷೇತ್ರಗಳಿಗೆ  ಮತದಾನ ನಡೆಯುತ್ತಿದೆ. ಅಸ್ಸಾಂನಲ್ಲಿ ಮೂರು ಹಂತದಲ್ಲಿ ಮತದಾನ ನಡೆಯುತ್ತಿದೆ. ಮೊದಲ ಹಂತದಲ್ಲಿ 47 ಸ್ಥಾನಳಿಗೆ ಮತದಾನ ನಡೆಯುತ್ತಿದೆ.  ಪಶ್ಚಿಮ ಬಂಗಾಳದ ಒಟ್ಟು 5 ಜಿಲ್ಲೆಗಳ 30 ಸ್ಥಾನಗಳಿಗೆ ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ನಡೆಯಲಿದೆ. 73 ಲಕ್ಷಕ್ಕೂ ಅಧಿಕ ಮತದಾರರು ಕಣದಲ್ಲಿರುವ 191 ಅಭ್ಯರ್ಥಿಗಳ ಹಣೆಬರಹ ತೀರ್ಮಾನಿಸಲಿದ್ದಾರೆ. ಟಿಎಂಸಿ ಮತ್ತು ಬಿಜೆಪಿಯ 29 ಅಭ್ಯರ್ಥಿಗಳು ಅಖಾಡದಲ್ಲಿದ್ದರೆ, ಎಡಪಕ್ಷ- ಕಾಂಗ್ರೆಸ್‌- ಐಎಸ್‌ಎಫ್ ಮೈತ್ರಿಯ 30 ಅಭ್ಯರ್ಥಿಗಳು ಮತ ಪರೀಕ್ಷೆ ಎದುರಿಸಲಿದ್ದಾರೆ.

ಭಾರತದ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳಲ್ಲಿ ಮೊದಲ ಹಂತದ ಮತದಾನದಲ್ಲಿ ಕ್ರಮವಾಗಿ ಶೇಕಡಾ 11.48 ಮತ್ತು 24.61 ರಷ್ಟು ಮತದಾನ ದಾಖಲಾಗಿದೆ ಎಂದು ತಿಳಿಸಿದೆ.

ಕಾಂಗ್ರೆಸ್ ಮುಖಂಡ ಗೌರವ್ ಗೊಗೊಯ್ ಅವರು ಮೊದಲ ಹಂತದಲ್ಲಿ ಅಸ್ಸಾಂನ ಜೋರ್ಹತ್‌ ನಲ್ಲಿರುವ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದರು. ತನ್ನ ಮತದಾನದ ನಂತರ, ಗೊಗೊಯ್ ಹಲವು ವರ್ಷಗಳ ನಂತರ ತನ್ನ ಪೋಷಕರು ಇಲ್ಲದೆ ಮತದಾನ ಕೇಂದ್ರಕ್ಕೆ ಬರುತ್ತಿದ್ದೇನೆ ಎಂದು ಹೇಳಿದರು.

ಅಸ್ಸಾಂನಲ್ಲಿನ ಚುನಾವಣಾ ಹೋರಾಟದ ಬಗ್ಗೆ ಮಾತನಾಡಿದ ಗೊಗೊಯ್, “ಜನರು ಸುಳ್ಳು ಮತ್ತು ವಂಚನೆಯ ರಾಜಕೀಯವನ್ನು ಮತ ಚಲಾಯಿಸಲಿದ್ದಾರೆ ಮತ್ತು ಅವರ ಭವಿಷ್ಯವು ಉಜ್ವಲವಾಗಿದೆ ಎಂದು ಖಾತರಿಪಡಿಸುವ ರಾಜಕೀಯಕ್ಕೆ ಮತ ಚಲಾಯಿಸುತ್ತಾರೆ” ಎಂದು ಹೇಳಿದರು.

 

Donate Janashakthi Media

Leave a Reply

Your email address will not be published. Required fields are marked *