ಅಶ್ಫಾಕ್ ಉಲ್ಲಾ ಖಾನ್ ಅವರ 120ನೇ ಜನ್ಮದಿನ

ಬೆಂಗಳೂರು :  ಕ್ರಾಂತಿಕಾರಿ, ಕವಿ ಸ್ವಾತಂತ್ರ್ಯ ಹೋರಾಟಗಾರ ‘ಅಶ್ಫಾಕ್ ಉಲ್ಲಾ ಖಾನ್ ಅವರ 120ನೇ ಜನ್ಮದಿನದ ಪ್ರಯುಕ್ತ ಎಸ್.ಎಫ್.ಐ ನಿಂದ   ಮಲ್ಲತ್ತಹಳ್ಳಿಯಲ್ಲಿ  ಕಾರ್ಯಕ್ರಮವನ್ನು ನಡೆಸಲಾಯಿತು.

ಎಸ್.ಎಫ್.ಐ ಘಟಕ ಕಾರ್ಯದರ್ಶಿ ಯಶಸ್ಸು ಮಾತನಾಡಿ “ಅಷ್ಪುಖುಲ್ಲಾ ಖಾನ್  ದೇಶದ ಸ್ವಾತಂತ್ರ  ಹೋರಾಟದಲ್ಲಿ ಹಾಡು ಮತ್ತು ಬರಹದ ಮೂಲಕ ಸೌಹಾರ್ದತೆಯನ್ನು ಸಾರಿದವರು ಹಾಗೂ ಭಗತ್ ಸಿಂಗ್ ರಿಗೆ ಸ್ಫೂರ್ತಿ ಆಗಿದ್ದ ಮಹಾನ್ ಕ್ರಾಂತಿಕಾರಿ ಯಾಗಿದ್ದರು. ಇವರ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಇದೇ ವೇಳೆ ವಿಜ್ಞಾನ ಚಳುವಳಿಯ ನಾಯಕ ಪುರುಷೋತ್ತಮ ಕಲಾಲಬಂಡಿ, ರೈತ ನಾಯಕ ಮಾರುತಿ ಮಾನ್ಪಡೆಯವರಿಗೆ ಶ್ರದ್ಧಾಂಜಲಿನ್ನು ಸಲ್ಲಿಸಲಾಯಿತು.

ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಮಾತನಾಡಿ  ಈ ಮೂರು ಜನ ನಾಯಕರ ಆದರ್ಶಗಳನ್ನು  ನಾವು  ರೂಢಿಸಿಕೊಳ್ಳಬೇಕು. ಅವರ ಆಶಯದಂತೆ ನಾವು ಅಧ್ಯನದ ಜೊತೆ ಹೋರಾಟ ನಡೆಸಲು ಮುಂದಾಗಬೇಕು ಎಂದರು.

ಎಸ್ಎಫ್ಐ ನ ರಾಜ್ಯ ಜಂಟಿ ಕಾರ್ಯದರ್ಶಿ ಭೀಮನಗೌಡ ಮಾತನಾಡಿ, ಭಗತ್ ಸಿಂಗ್ ರಂತಹ ಕ್ರಾಂತಿಕಾರಿಗೆ ಸ್ಪೂರ್ತಿಯಾಗಿದ್ದ  ‘ಅಷ್ಫಖುಲ್ಲಾ ಖಾನ್   ಬದುಕು ಬರವಣಿಗೆ ಹಾಗೂ ಅವರ ಸೌಹಾರ್ದತೆಯ ಹಾಡುಗಳು’ ಹೇಗೆ ದೇಶದ ವಿದ್ಯಾರ್ಥಿ ಯುವಜನರಲ್ಲಿ ಸ್ವಾತಂತ್ರ ಹೋರಾಟದ ಕಿಚ್ಚನ್ನು ಹಚ್ಚಿತು ಎಂದು ಸವಿಸ್ತಾರವಾಗಿ ತಿಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

 

Donate Janashakthi Media

Leave a Reply

Your email address will not be published. Required fields are marked *