ಪಾಟ್ನಾ: ಬಿಹಾರ ರಾಜ್ಯದ ನೂತನ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ 10 ಲಕ್ಷ ಉದ್ಯೋಗಗಳ ಭರವಸೆಯ ಬಗ್ಗೆ ಇದೀಗ ಭಾರೀ ಚರ್ಚೆಯಾಗುತ್ತಿದ್ದು, ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಸರಿಯಾಗಿಯೇ ತಿರುಗೇಟು ನೀಡಿದ ತೇಜಸ್ವಿ ಯಾದವ್, ನಮ್ಮನ್ನು ಪ್ರಶ್ನಿಸುವ ರೀತಿಯಲ್ಲೇ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ ಪ್ರತಿ ವರ್ಷ 2 ಕೋಟಿ ಉದ್ಯೋಗಗಳ ಸೃಷ್ಟಿ ಏನಾಯಿತೆಂದು ಎಂದು ಬಿಜೆಪಿ ನಾಯಕರನ್ನು ಕೇಳಿ ಎಂದಿದ್ದಾರೆ.
ಬಿಜೆಪಿಯವರು ಸುಮಾರು 2 ವರ್ಷಗಳು ಬಿಹಾರದಲ್ಲಿ ಅಧಿಕಾರದಲ್ಲಿದ್ದರು. ಬಿಜೆಪಿಯವರು ಭರವಸೆ ನೀಡಿದ 19 ಲಕ್ಷ ಉದ್ಯೋಗಗಳಲ್ಲಿ 19 ಆದರೂ ನೀಡಿದೆಯೇ? ಎಂದು ಕೇಳಿದ್ದಾರೆ.
ಹಿಂದೂ-ಮುಸ್ಲಿಂ ವಿಚಾರಗಳ ಪ್ರಸ್ತಾಪವಾಗುವ ಕಡೆಗಳಲ್ಲೇ ಇದೀಗ ಉದ್ಯೋಗದ ಬಗ್ಗೆ ಕೇಳುತ್ತಿರುವುದು ನಮ್ಮ ಯಶಸ್ಸಲ್ಲವೇ. ಯಾವತ್ತೂ ಉದ್ಯೋಗದ ಬಗ್ಗೆ ಕೇಳದೆ, ಸದಾ ನಿದ್ದೆ ಮಾಡುತ್ತಿದ್ದ ಜನರಿಗೆ ಧನ್ಯವಾದಗಳು. ಮಾಧ್ಯಮಗಳೂ ಈಗ ಎಚ್ಚೆತ್ತುಕೊಂಡಿವೆ. ಇದು ನಮ್ಮ ಯಶಸ್ಸಲ್ಲವೇ?” ಎಂದು ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ.
“ಬಿಜೆಪಿ ತನ್ನ ಭರವಸೆಯನ್ನು ಎಂದಿಗೂ ಈಡೇರಿಸುವುದಿಲ್ಲ. ಆದರೆ, ನಾವು ನಮ್ಮ ಭರವಸೆಗಳನ್ನು ಈಡೇರಿಸುತ್ತೇವೆ. ನೀವು 10 ಲಕ್ಷ ಉದ್ಯೋಗ ಯಾವಾಗ ಕೊಡುತ್ತೀರಿ?” ಎಂದು ನಿರ್ಭಯವಾಗಿ ಕೇಳುತ್ತಿರುವ ಪ್ರಶ್ನೆಗೆ ಮುಖ್ಯಮಂತ್ರಿಗಳು ನಿಮ್ಮ ಮುಂದೆ ಉತ್ತರಿಸಿಲ್ಲವೇ?” ಎಂದು ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.
ಬಿಹಾರದಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡ ನಿತೀಶ್ ಕುಮಾರ್ 2 ದಿನಗಳ ಹಿಂದಷ್ಟೇ ವಿರೋಧ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಹೊಸ ಸರ್ಕಾರ ರಚಿಸಿದರು. ತೇಜಸ್ವಿ ಯಾದವ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, “ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆ ಭರವಸೆಯನ್ನು ಖಂಡಿತವಾಗಿಯೂ ಈಡೇರಿಸಲು ಪ್ರಯತ್ನಿಸುತ್ತೇವೆ” ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದರು.
ನಿತಿಶ್ ಕುಮಾರ್ ನೇತೃತ್ವದ ಜೆಡಿಯು ಆರ್‌ಜೆಡಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ ಬೆನ್ನಲ್ಲೇ, 2020ರ ಬಿಹಾರ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ 10 ಲಕ್ಷ ಉದ್ಯೋಗಗಳನ್ನು ನೀಡುವುದಾಗಿ ತೇಜಸ್ವಿ ಯಾದವ್ ಭರವಸೆ ನೀಡಿದ್ದರು. ಇದೀಗ ಉಪಮುಖ್ಯಮಂತ್ರಿಯಾಗಿರುವ ತೇಜಸ್ವಿ ಯಾದವ್ ನೀಡಿದ ಭರವಸೆಯನ್ನು ಪದೇ ಪದೇ ನೆನಪಿಸುತ್ತಿವೆ.