ಕೋಯಿಕ್ಕೋಡ್: ವ್ಯವಸ್ಥಿತವಾಗಿ ‘ಪ್ರಶ್ನಿಸುವವರ ಧ್ವನಿಯನ್ನೇ ಮೌನವಾಗಿಸುವ ಆಡಳಿತವು ಕೇಂದ್ರದಲ್ಲಿದೆ’ ಎಂದು ನಟ ಪ್ರಕಾಶ್‌ರಾಜ್ ಗುರುವಾರ ಇಲ್ಲಿ ಟೀಕಿಸಿದರು. ಕೇರಳ ಸಾಹಿತ್ಯ ಉತ್ಸವ (ಕೆಎಫ್‌ಎಲ್)– 2026ರಲ್ಲಿ ಮಾತನಾಡಿದ ಅವರು, ‘ಮಾತನಾಡದಂತೆ ಬಾಯಿಗಳಿಗೆ ಬೀಗ ಹಾಕಿರುವವರು ಯಾರು’ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಮುಖ್ಯವಾಹಿನಿ ಮಾಧ್ಯಮಗಳ ನಾಚಿಕೆ ಇಲ್ಲದ ಶರಣಾಗತಿ ಮತ್ತು ಕುಂದುತ್ತಿರುವ ನ್ಯಾಯಾಂಗ ಸ್ವಾತಂತ್ರ್ಯದ ಕುರಿತಂತೆ ತನಿಖಾ ಪತ್ರಕರ್ತ ಜೋಸಿ ಜೋಸೆಫ್ ನಡೆಸಿದ ಸಂವಾದದಲ್ಲಿ ಪ್ರಕಾಶ್‌ರಾಜ್ ಭಾಗಿಯಾದರು.
ಇದನ್ನೂ ಓದಿ : ರಾಜ್ಯಪಾಲರ ನಡೆ ಅಸಂವಿಧಾನಿಕ, ಸರ್ವಾಧಿಕಾರಿ ನಡೆ – ಸಿಪಿಐ(ಎಂ) ಪ್ರತಿಭಟನೆ
ನಾನು ವಿಭಿನ್ನ ಎಂಬುದು ಅವರಿಗೆ ಗೊತ್ತಿಲ್ಲ. ನನ್ನನ್ನು ದೇಶದ್ರೋಹಿ, ಹಿಂದೂ ವಿರೋಧಿ, ಪೆರಿಯಾರಿಸ್ಟ್ ಎನ್ನುತ್ತಾರೆ’ ಎಂದು ಪ್ರಕಾಶ್‌ರಾಜ್ ಉತ್ತರಿಸಿದರು. ಸಂವಾದದ ಆರಂಭದಲ್ಲೇ ಜೋಸೆಫ್ ಪ್ರಶ್ನಿಸಿದ್ದಕ್ಕೆ, ‘ನಿಮ್ಮ ವಿರುದ್ಧ ಹಲವು ಪ್ರಕರಣ ದಾಖಲಾಗಿವೆ’ ‘ನನ್ನ ಸಮಯ ವ್ಯರ್ಥ ಮಾಡಲಿಕ್ಕಾಗಿಯೇ ಪ್ರಕರಣ ದಾಖಲಿಸಿದ್ದಾರೆ.
ಲಡಾಖ್‌ನ ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಮತ್ತು ಹೋರಾಟಗಾರ ಉಮರ್ ಖಾಲಿದ್ ಪರವಾಗಿಯೂ ಪ್ರಕಾಶ್‌ರಾಜ್ ಮಾತನಾಡಿದರು. ಅವರ ಹೋರಾಟಗಳನ್ನು ಬೆಂಬಲಿಸಿ, ಸಮರ್ಥಿಸಿಕೊಂಡರು.
ಹಿಮಾಲಯದ ಪರಿಸರ ಉಳಿವಿಗಾಗಿ ಕಾರ್ಪೊರೇಟ್ ಹಿತಾಸಕ್ತಿ ವಿರುದ್ಧ ಸೋನಮ್ ವಾಂಗ್ಚುಕ್ ಪ್ರತಿಭಟಿಸಿದಾಗ, ಅವರನ್ನು ಬೆಂಬಲಿಸಲಿಕ್ಕಾಗಿಯೇ ಅಲ್ಲಿಗೆ ಹೋಗಿದ್ದನ್ನು ನಟ ವಿವರಿಸಿದರು.ಆತನನ್ನು ಭಯೋತ್ಪಾದಕ ಎಂದು ಯಾರಾದರೂ ನಂಬುತ್ತಾರೆಯೇ? ‘ವಾಂಗ್ಚುಕ್ ಅವರನ್ನು ರಾಜಸ್ಥಾನದ ಜೈಲಿನಲ್ಲಿಡಲಾಗಿದ್ದು, ಅವರ ಪತ್ನಿಗೂ ಭೇಟಿಯ ಅವಕಾಶ ಇಲ್ಲವಾಗಿದೆ ಎಂದರು.
‘ಸಿಎಎ ಪ್ರತಿಭಟನೆಯ ಸಮಯದಲ್ಲಿ ರಸ್ತೆ ನಿರ್ಬಂಧಿಸುವುದು ಯಾವಾಗ ಭಯೋತ್ಪಾದಕ ಚಟುವಟಿಕೆ ಆಯಿತು? ಅಧಿಕಾರದಲ್ಲಿ ಕುಳಿತಿರುವ ಈ ‘ಮಹಾಪ್ರಭು’ (ಪ್ರಧಾನಿ ಮೋದಿ) ಅಧಿಕಾರದಿಂದ ಕೆಳಗಿಳಿ ಎಂಬ ಪದವನ್ನೇ ಇಷ್ಟಪಡಲ್ಲ’ ಎಂದು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ (ಯುಎಪಿಎ) ಬಂಧನಕ್ಕೊಳಗಾಗಿರುವ ಉಮರ್ ಖಾಲಿದ್ ಅವರನ್ನು ಸಮರ್ಥಿಸಿಕೊಂಡರು.
ಇದನ್ನೂ ನೋಡಿ : “ದುಡಿಯುವ ವರ್ಗದ ಆಕ್ರೋಶ: ಫೆಬ್ರವರಿ 12ಕ್ಕೆ ಸಾರ್ವತ್ರಿಕ ಮುಷ್ಕರ ಘೋಷಣೆ” Janashakthi Media
