ಕನ್ನಡದ ಹಿರಿಯ ನಟ ಅಶೋಕ್ ರಾವ್ ಇನ್ನಿಲ್ಲ

ಬೆಂಗಳೂರು : ನೂರಾರು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಹಿರಿಯ ನಟ ಅಶೋಕ್​ ರಾವ್​ ಅವರು ನಿಧನರಾಗಿದ್ದಾರೆ.

ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರು ಈಗ ಮೃತಪಟ್ಟಿದ್ದು, ಅಭಿಮಾನಿಗಳಿಗೆ ಮತ್ತು ಕುಟುಂಬದವರಿಗೆ ತೀವ್ರ ನೋವು ಉಂಟಾಗಿದೆ. ಡಾ. ರಾಜ್​ಕುಮಾರ್​ ಸೇರಿದಂತೆ ಅನೇಕ ಸ್ಟಾರ್​ ಕಲಾವಿದರ ಜೊತೆ ಅಶೋಕ್​ ರಾವ್​ ತೆರೆಹಂಚಿಕೊಂಡಿದ್ದರು. ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ಅವರ ಅನುಭವ ಅಪಾರ. ಅವರಿಗೆ 75 ವರ್ಷ ವಯಸ್ಸಾಗಿತ್ತು. ರಾತ್ರಿ 12.30ಕ್ಕೆ ಅವರು ನಿಧನರಾದರು ಎಂದು ಕುಟುಂಬದವರು ತಿಳಿಸಿದ್ದಾರೆ. ಪತ್ನಿ, ಮಗಳು ಹಾಗೂ ಮಗನನ್ನು ಅಶೋಕ್​ ರಾವ್​ ಅಗಲಿದ್ದಾರೆ.

ವಿಲನ್​ ಪಾತ್ರ ಮೂಲಕ ಮಿಂಚಿದ್ದ ಅಶೋಕ್​ ರಾವ್​!

ಹಲವು ವರ್ಷಗಳಿಂದ ಜನರನ್ನು ಅಶೋಕ್​ ರಾವ್​ ರಂಜಿಸಿಕೊಂಡು ಬಂದಿದ್ದರು. ಅನೇಕ ಬಗೆಯ ಪಾತ್ರಗಳನ್ನು ಮಾಡಿಕೊಂಡು ಬಂದಿದ್ದರು. ಹೆಚ್ಚಾಗಿ ವಿಲನ್​ ಪಾತ್ರಗಳಲ್ಲಿ ಅವರು ನಟಿಸಿ ಸೈ ಎನಿಸಿಕೊಂಡಿದ್ದರು. ಡಾ.ರಾಜ್​ಕುಮಾರ್​ ಅಭಿನಯದ ಪರಶುರಾಮ್​ ಸಿನಿಮಾದಲ್ಲಿ ವಿಲನ್​ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಹಲವಾರು ಸಿನಿಮಾಗಳಲ್ಲಿ ಇವರ ಅಭಿನಯ ಕಂಡಿದ್ದ ಡಾ.ರಾಜ್​ಕುಮಾರ್​ ಇವರನ್ನು ಪರಶುರಾಮ್​ ಸಿನಿಮಾದ ವಿಲನ್​ ಪಾತ್ರ ನೀಡುವಂತೆ ನಿರ್ದೇಶಕರಿಗೆ ಹೇಳಿದ್ದರಂತೆ.

ಕಾಸರಗೋಡಿನ ಪ್ರತಿಭೆ ಅಶೋಕ್​ ರಾವ್​!

ಅಶೋಕ್ ರಾವ್ ಅವರು ಜನಿಸಿದ್ದು ಕಾಸರಗೋಡಿನಲ್ಲಿ. ತಮಿಳುನಾಡಿನಲ್ಲಿ ಅವರು ವಿದ್ಯಾಭಾಸ ಪಡೆದರು. ಸೇಲಂ ಬಳಿಯ ಒಂದು ವಸತಿ ಶಾಲೆಯಲ್ಲಿ ಅಶೋಕ ರಾವ್​ ಶಿಕ್ಷಣ ಪಡೆದರು. ಕಂಚಿನ ಕಂಠದ ಕಾರಣಕ್ಕೆ ಅವರಿಗೆ ಕೆಲವು ಪಾತ್ರಗಳು ಅರಸಿಕೊಂಡು ಬಂದಿತ್ತು. ಶಾಲಾ ದಿನಗಳಿಂದಲೂ ಅಭಿನಯದ ಬಗ್ಗೆ ಆಸಕ್ತಿ ಮೂಡಿಸಿಕೊಂಡಿದ್ದ ಅಶೋಖ್​ ರಾವ್​ ವಿದ್ಯಾಭ್ಯಾಸ ಮುಗಿಸಿದ ಬಳಿಕ ಹಲವು ಇಂಗ್ಲಿಷ್​ ನಾಟಕಗಳಲ್ಲಿ ನಟಿಸಿದ್ದರು. ಇದಾದ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ಕೆಲ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು ಆದರೆ, ಕ್ಯಾನ್ಸರ್​ ಕಾಯಿಲೆಯಿಂದ ಬಳಲುತ್ತಿದ್ದ ಅಶೋಕ್​ ರಾವ್​​ ಇಂದು ಕೊನೆಯುಸಿರೆಳೆದಿದ್ದಾರೆ

Donate Janashakthi Media

Leave a Reply

Your email address will not be published. Required fields are marked *