ಅಸಂಘಟಿತ ಕಾರ್ಮಿಕರಿಗೆ ರೇಷನ್‌ ಕಿಟ್‌ ವಿತರಣೆ

ಬೆಂಗಳೂರು: ಸಿಐಟಿಯು ಬೆಂಗಳೂರು ವತಿಯಿಂದ ಅಸಂಘಟಿತ ಕಾರ್ಮಿಕರಿಗೆ ವಿಶೇಷವಾಗಿ ಅನ್ನಪೂರ್ಣ ಯೋಜನೆಯ ಭಾಗವಾಗಿ ರೇಷನ್‌ ಕಿಟ್‌ ವಿತರಣೆ ಕಾರ್ಯಕ್ರಮವು ಇತ್ತೀಚಿಗೆ ಹಮ್ಮಿಕೊಳ್ಳಲಾಗಿತ್ತು.

ನಗರದ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಇಎಂಎಸ್‌ ಭವನ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ವಿವಿಧ ವಲಯಗಳ ಕಾರ್ಮಿಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಜಂಟಿ ಸಭೆಯ ನಿಮಿತ್ತ ಅಖಿಲ ಭಾರತ ಮುಖಂಡರು ಬೆಂಗಳೂರಿಗೆ ಭಾಗವಹಿಸಿದ್ದರು.

ಇದನ್ನು ಓದಿ: ಸಿಐಟಿಯು ವತಿಯಿಂದ ಅನ್ನಪೂರ್ಣ ಅಭಿಯಾನಕ್ಕೆ ಚಾಲನೆ

ಅಸಂಘಟಿತ ವಲಯದಲ್ಲಿ ದುಡಿಮೆ ಮಾಡುತ್ತಿರುವ ಆಟೋ ಚಾಲಕರು, ಮನೆಗೆಲಸ ಮಾಡುವವರಿಗೆ ಸಿಐಟಿಯು ಅಖಿಲ ಭಾರತ ಅಧ್ಯಕ್ಷರಾದ ಹೇಮಲತ ಅವರು ರೇಷನ್‌ ಕಿಟ್‌ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಾರ್ಮಿಕರಿಗೆ ಎಐಎಡಬ್ಲ್ಯೂಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ವೆಂಕಟ್‌, ಕೆಪಿಆರ್‌ಎಸ್‌ ರಾಜ್ಯ ಅಧ್ಯಕ್ಷರಾದ ಜಿ.ಸಿ.ಬಯ್ಯಾರೆಡ್ಡಿ, ರಾಜ್ಯ ಮುಖಂಡರಾದ ಎಂ.ವೆಂಕಟಾಚಲಯ್ಯ ರೇಷನ್‌ ಕಿಟ್‌ಗಳನ್ನು ನೀಡಿದರು.

ಸಿಐಟಿಯು ಪರವಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಸಿಐಟಿಯು ರಾಜ್ಯ ಪದಾಧಿಕಾರಿಗಳಾದ ಪ್ರಕಾಶ್‌ ಕೆ., ಕೆ.ಎನ್.ಉಮೇಶ್‌, ಪ್ರತಾಪ್‌ ಸಿಂಹ, ಎಆರ್‌ಡಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎನ್‌.ಶ್ರೀನಿವಾಸ್‌, ಮುಖಂಡರಾದ ನವೀನ್‌ ಶೆಣೈ, ಬೆಂಗಳೂರು ಮನೆಗೆಲಸಗಾರರ ಸಂಘದ ಜಿಲ್ಲಾ ಅಧ್ಯಕ್ಷರಾದ ಸಿ.ಚಂದ್ರಶೇಖರ್‌, ಪ್ರಧಾನ ಕಾರ್ಯದರ್ಶಿ ಸೆಲ್ವಿ ಹಾಗೂ ಮತ್ತಿತರರು ಭಾಗವಹಿಸಿದ್ದರು.

ವರದಿ: ವಿನೋದ ಶ್ರೀರಾಮಪುರ

Donate Janashakthi Media

Leave a Reply

Your email address will not be published. Required fields are marked *