ಜಾರಿ ನಿರ್ದೇಶನಾಲಯದ 3ನೇ ಸಮನ್ಸ್‌ಗೂ ಹಾಜರಾಗದ ಅರವಿಂದ್ ಕೇಜ್ರಿವಾಲ್!

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಅಬಕಾರಿ ನೀತಿ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಹೊರಡಿಸಿದ ಮೂರನೇ ಸಮನ್ಸ್‌ ಅನ್ನು ಕೂಡಾ ತಿರಸ್ಕರಿಸಿದ್ದು, ತನಿಖೆಗೆ ಹಾಜರಾಗಲಿಲ್ಲ. ಬುಧವಾರ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿರುವ ಅರವಿಂದ್ ಕೇಜ್ರಿವಾಲ್ ಅವರು, “ಈ ಸಮನ್ಸ್‌ಗಳನ್ನು ನೀಡುವುದಕ್ಕೆ ಸರಿಯಾದ ಕಾರಣ ನೀಡಿಲ್ಲ” ಎಂದು ಹೇಳಿದ್ದಾರೆ.

ಜಾರಿ ನಿರ್ದೇಶನಾಲಯವು ಅನಗತ್ಯ ಗೌಪ್ಯತೆಯನ್ನು ಕಾಯ್ದುಕೊಳ್ಳುತ್ತಿದೆ ಮತ್ತು ಪ್ರಸ್ತುತ ಪ್ರಕರಣವು ಅಪಾರದರ್ಶಕವಾಗಿದ್ದು, ಅನಿಯಂತ್ರಿತವಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ಅವರು ಆರೋಪಿಸಿದ್ದಾರೆ. ಸಮನ್ಸ್‌ಗಳು “ದುರುದ್ದೇಶದಿಂದ ಮತ್ತು ಸಂಶಯಾತ್ಮಕವಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.

ಇದನ್ನೂ ಓದಿ: ಅದಾನಿ ಹಿಂಡೆನ್‌ಬರ್ಗ್ ಪ್ರಕರಣದ ತನಿಖೆ ಎಸ್‌ಐಟಿಗೆ ವರ್ಗಾಯಿಸಲ್ಲ ಎಂದ ಸುಪ್ರೀಂಕೋರ್ಟ್!

ನನ್ನ ಹಿಂದಿನ ಪ್ರತಿಕ್ರಿಯೆಗಳಿಗೆ ಪ್ರತಿಕ್ರಿಯಿಸಿ ಎಂದು ಕೇಳಿರುವ ಕೇಜ್ರಿವಾಲ್ ಅವರು, “ನನಗೆ ಸಮನ್ಸ್ ನೀಡಿರುವ ಉದ್ದೇಶಿತ ವಿಚಾರಣೆ/ತನಿಖೆಯ ನೈಜ ಉದ್ದೇಶ, ವ್ಯಾಪ್ತಿ, ಸ್ವರೂಪ ಮತ್ತು ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳಲು ನನಗೆ ಅನುವು ಮಾಡಿಕೊಡಿ” ಎಂದು ಹೇಳಿದ್ದಾರೆ.

2023ರ ನವೆಂಬರ್ 2ರಂದು ಮತ್ತು 2023ರ ಡಿಸೆಂಬರ್ 20 ರಂದು ಅವರ ಹಿಂದಿನ ಉತ್ತರಗಳಿಗೆ ಪ್ರತಿಕ್ರಿಯೆಯನ್ನು ನೀಡದೆ ಜಾರಿ ನಿರ್ದೇಶನಾಲಯವು “ಹಿಂದಿನಂತೆಯೇ ಅದೇ ರೂಪದಲ್ಲಿ ಸಮನ್ಸ್ ಕಳುಹಿಸಿದೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ. “ಆದ್ದರಿಂದ, ಈ ಸಮನ್ಸ್‌ಗಳ ಜಾರಿಗಾಗಿ ನೀವು ಯಾವುದೇ ಮಾನ್ಯ ಕಾರಣ ಅಥವಾ ಸಮರ್ಥನೆಯನ್ನು ನೀಡಿಲ್ಲ ಎಂದು ನಾನು ಭಾವಿಸುತ್ತೇನೆ” ಅವರು ಹೇಳಿದ್ದಾರೆ.

ಇದನ್ನೂ ಓದಿ: ವಿಎಚ್‌ಪಿ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಮೇಲೆ ಅಕ್ರಮ ಸಾರಾಯಿ, ಮಟ್ಕಾ, ಜೂಜಾಟ ಸೇರಿ 16 ಕೇಸ್‌ಗಳಿವೆ

“ಜಾರಿ ನಿರ್ದೇಶನಾಲಯದ ಕಾರಣ ಬಹಿರಂಗಪಡಿಸದ ಮತ್ತು ಈ ಹಿಂದೆ ನೀಡಿದ್ದ ಉತ್ತರಗಳಿಗೆ ಪ್ರತಿಕ್ರಿಯಿಸದ ವಿಧಾನವು ಕಾನೂನಾತ್ಮಕವಾಗಿ ಅಥವಾ ನ್ಯಾಯಯುತವಾಗಿ ಇರಲು ಸಾಧ್ಯವಿಲ್ಲ. ನಿಮ್ಮ ಹಠಮಾರಿತನವು ನ್ಯಾಯಾಧೀಶರು, ತೀರ್ಪುಗಾರರು ಮತ್ತು ಮರಣದಂಡನೆಕಾರರ ಪಾತ್ರವನ್ನು ವಹಿಸುವುದಕ್ಕೆ ಸಮನಾಗಿರುತ್ತದೆ. ಇದು ಕಾನೂನು ಇರುವ ನಮ್ಮ ದೇಶದಲ್ಲಿ ಸ್ವೀಕಾರಾರ್ಹವಲ್ಲ” ಎಂದು ಅವರು ಹೇಳಿದ್ದಾರೆ.

ದೆಹಲಿಯ ಮೂರು ರಾಜ್ಯಸಭಾ ಸ್ಥಾನಗಳಿಗೆ ಜನವರಿ 19 ರಂದು ಚುನಾವಣೆ ನಡೆಯಲಿದೆ ಎಂದು ಅರವಿಂದ್ ಕೇಜ್ರಿವಾಲ್ ತನಿಖಾ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಆಮ್ ಆದ್ಮಿ ಪಕ್ಷದ ಸಂಚಾಲಕರಾಗಿ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ತನಗೆ ಓಡಾಡಲು ಇವೆ ಎಂದು ಅವರು ಹೇಳಿದ್ದಾರೆ. ಜೊತೆಗೆ ಗಣರಾಜ್ಯೋತ್ಸವದ ತಯಾರಿಯನ್ನೂ ಕೂಡಾ ತನಗೆ ಮಾಡಬೇಕಿದೆ ಎಂದು ಅವರು ಹೇಳಿದ್ದು, ಜಾರಿ ನಿರ್ದೇಶನಾಯಲ ಈ ಹಿಂದೆ ಎತ್ತಿದ್ದ ಆಕ್ಷೇಪಣೆಗಳಿಗೆ ಪ್ರತಿಕ್ರಿಯೆ ನೀಡುವಂತೆ ಅದಕ್ಕೆ ಒತ್ತಾಯಿಸಿದ್ದಾರೆ.

ವಿಡಿಯೊ ನೋಡಿ: ಅಕ್ಷರದವ್ವ ಸಾವಿತ್ರಿಬಾಯಿ ಫುಲೆಯವರ ನೆನೆಯೋಣ Janashakthi Media

Donate Janashakthi Media

Leave a Reply

Your email address will not be published. Required fields are marked *