-ಪ್ರಭಾತ್ ಪಟ್ನಾಯಕ್
ಬಂಡವಾಳ ಶಾಹಿ ವ್ಯವಸ್ಥೆಯೊಳಗೆ ಕೃತಕ ಬುದ್ಧಿ ಮತ್ತೆಯನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಿದರೆ ಅದು ಮುಂದುವರೆದ ಬಂಡವಾಳ ಶಾಹಿ ದೇಶಗಳಲ್ಲೂ ಮತ್ತು ಬಂಡವಾಳ ಶಾಹಿ ವ್ಯವಸ್ಥೆಯ ಅಂಚಿನಲ್ಲಿರುವ ಪ್ರದೇಶಗಳಲ್ಲೂ ಬೃಹತ್ ನಿರುದ್ಯೋಗವನ್ನು ಉಂಟುಮಾಡುತ್ತದೆ. ಈ ನಿರುದ್ಯೋಗದ ವಿರುದ್ಧ ಹಾಲಿವುಡ್‍ನ ಲೇಖಕರು ಮತ್ತು ಧ್ವನಿ ಕಲಾವಿದರು ಹೋರಾಟಕ್ಕಿಳಿದರು. ಆದರೆ ಇದರಿಂದ ಘೋರ ಭವಿಷ್ಯವನ್ನು ಎದುರಿಸ ಬೇಕಾದವರು ಅವರು ಮಾತ್ರವೇ ಅಲ್ಲ. ಸಾಮಾನ್ಯ ಕಾರ್ಮಿಕರೂ ಇದರ ದುಷ್ಟರಿಣಾಮಗಳನ್ನು ಎದುರಿಸ ಬೇಕಾಗುತ್ತದೆ. ಇಂತಹ ಭೀಕರ ಭವಿಷ್ಯ ಸಾಕಾರಗೊಳ‍್ಳುವುದನ್ನು ತಡೆಯಲು ಸೂಕ್ತವಾದ ಬೇಡಿಕೆಗಳನ್ನು ಎತ್ತುವ ಕಾರ್ಮಿ ಕಹೋರಾಟಗಳನ್ನು ಪ್ರಾರಂಭಿಸುವುದು ಮುಖ್ಯವಾಗಿದೆ. ಕೃತಕ
ಹಾಲಿವುಡ್ ಬರಹಗಾರರು ಕೃತಕ ಬುದ್ಧಿ ಮತ್ತೆ(AI -ಎ.ಐ.) ಯನ್ನು ಬದಲಿಸುವುದರ ವಿರುದ್ಧ ಮುಷ್ಕರಕ್ಕೆ ಇಳಿದು ಎತ್ತಿದ ಮೂಲ ಭೂತ ಸಮಸ್ಯೆಯು ಆ ಒಂದು ಸಂಘರ್ಷ ಪರಿಹಾರಗೊಂಡ ನಂತರ ಹೇಗೋ ಹಿನ್ನೆಲೆಗೆ ಸರಿಯಿತು; ಆದರೆ ಇದು ಮೂಲಭೂತ ಸಮಸ್ಯೆಯಾಗಿಯೇ ಉಳಿದಿದೆ. ಕೃತಕ ಬುದ್ಧಿ ಮತ್ತೆಯ ಪರಿಚಯದೊಂದಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಬಗ್ಗೆ ಹೆಚ್ಚು ಬರೆಯಲಾಗಿದೆ; ಆದರೆ ಇಲ್ಲಿ ನಾವು ಪರಿಶೀಲಿಸುವುದು ಅದು ಸೃಷ್ಟಿಸುವ ಬೃಹತ್ ನಿರುದ್ಯೋಗಕ್ಕೆ ಸಂಬಂಧಿಸಿದೆ. ಕೃತಕ
ಈ ಸಮಸ್ಯೆಯು ಪ್ರತ್ಯೇಕವಾಗಿ ಬಂಡವಾಳ ಶಾಹಿ ಪರಿಸ್ಥಿತಿಗಳಲ್ಲಿ ಎ.ಐ. ಯ ಅನ್ವಯಕ್ಕೆ ಮಾತ್ರ ಸಂಬಂಧಿಸಿದೆ ಎಂದು ಗಮನಿಸಬೇಕು; ಆದರೆ, ಬಂಡವಾಳ ಶಾಹಿಯು ಪ್ರಪಂಚದ ಹೆಚ್ಚಿನ ಭಾಗಗಳಲ್ಲಿ ವಾಸ್ತವವಾಗಿರುವುದರಿಂದ ದುಡಿಯುವ ಜನರಿಗೆ ಎ.ಐ..ಯ ಬೆದರಿಕೆಯು ಅತ್ಯಂತ ಗಂಭೀರವಾಗಿದೆ. ಎ.ಐ.ಗೆ ವಿರೋಧಕ್ಕೆ ಬೇರೇನೇ ನೈತಿಕ ಮತ್ತು ಇತರ ಕಾರಣಗಳಿದ್ದರೂ ಸಮಾಜವಾದಿ ಸಮಾಜದಂತಹ ಕೆಲಸ-ಹಂಚಿಕೆ, ಉತ್ಪನ್ನ-ಹಂಚಿಕೆಯ ನೀತಿಯನ್ನು ಅನುಸರಿಸುವ ಯಾವುದೇ ಸಮಾಜದಲ್ಲಿ, ಮಾನವ ಕೆಲಸದ ಹೊರೆಯನ್ನು ಕಡಿಮೆ ಮಾಡುವ ಎ.ಐಯ ಪರಿಚಯ ಉದ್ಯೋಗವನ್ನು ನಾಶ ಪಡಿಸುತ್ತದೆ ಎಂಬ ಆಧಾರದ ಮೇಲಷ್ಟೇ ಅದಕ್ಕೆ ಆಕ್ಷೇಪ ಎತ್ತಲಾಗುವುದಿಲ್ಲ. ಆದರೆ ಬಂಡವಾಳ ಶಾಹಿ ಸಮಾಜದ ಕಾರ್ಯ ವಿಧಾನವು ಕೆಲಸ-ಹಂಚಿಕೆ, ಉತ್ಪನ್ನ-ಹಂಚಿಕೆಯ ನೀತಿಯಿಂದ ಬಹಳದೂರ ವಿದೆ. ಕೃತಕ
ಇದನ್ನೂ ಓದಿ: ಸಿಎಂ ನಿವಾಸಕ್ಕೆ ಮುತ್ತಿಗೆ ಯತ್ನ; ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ
ಬಂಡವಾಳ ಶಾಹಿ ಮತ್ತು ಸಮಾಜವಾದೀ ಸಮಾಜಗಳ ನಡುವಿನ ವ್ಯತ್ಯಾಸ
ಬಂಡವಾಳ ಶಾಹಿ ಸಮಾಜ ಮತ್ತು ಸಮಾಜವಾದದ ನಡುವಿನ ವ್ಯತ್ಯಾಸವನ್ನು ಒಂದು ಸರಳ ಉದಾಹರಣೆಯೊಂದಿಗೆ ವಿವರಿಸಬಹುದು. ಎ.ಐ .ಸಹಾಯದಿಂದ, ಅಷ್ಟೇ ಏಕೆ, ಯಾವುದೇ ಶ್ರಮ-ಉಳಿತಾಯ ಆವಿಷ್ಕಾರದೊಂದಿಗೆ, 100 ಕಾರ್ಮಿಕರ ಶ‍್ರಮದ ಉತ್ಪಾದನೆಯನ್ನು ಹೊಸ ಪರಿಸ್ಥಿತಿಯಲ್ಲಿ, ಅದರ ಅರ್ಧದಷ್ಟು ಅಂದರೆ 50 ಕಾರ್ಮಿಕರ ಶ್ರಮದಿಂದ ಉತ್ಪಾದಿಸ ಬಹುದು ಎಂದಿಟ್ಟುಕೊಳ್ಳೋಣ. ಸಮಾಜವಾದಿ ಸಮಾಜದಲ್ಲಿ, ಪ್ರತಿ ಕೆಲಸಗಾರರು ಮೊದಲು ಕೆಲಸಮಾಡುತ್ತಿದ್ದ ಅರ್ಧದಷ್ಟು ಸಮಯ ಕೆಲಸ ಮಾಡುತ್ತಾರೆ, ಆದ್ದರಿಂದ ಅವರ ವಿರಾಮದ ಅವಧಿದ್ವಿ ಗುಣಗೊಂಡರೂ, ಅದೇ ವೇತನವನ್ನು ಪಡೆಯುತ್ತಾರೆ, ಅಂದರೆ ಹಿಂದಿನಷ್ಟೇ ಸರಕು ಮತ್ತು ಸೇವೆಗಳು ಅವರಿಗೆ ಲಭ್ಯವಾಗುತ್ತದೆ ಅಥವ ಹಿಂದಿನದ್ದೇ ವೇತನಕ್ಕೆ ಹಿಂದುದ್ದಕ್ಕಿಂತ ಹೆಚ್ಚು. ಸರಕುಗಳಳು ಮತ್ತು ಸೇವೆಗಳು ಲಭ್ಯವಾಗುತ್ತವೆ. ಕೃತಕ
ಪರ್ಯಾಯವಾಗಿ, 100 ಕಾರ್ಮಿಕರ ಸಂಪೂರ್ಣ ಕಾರ್ಯಪಡೆಯು ಮೊದಲಿನಂತೆಯೇ ಕೆಲಸ ಮಾಡುತ್ತದೆ ಆದರೆ ದುಪ್ಪಟ್ಟು ಉತ್ಪಾದಿಸುತ್ತದೆ, ಅದು ಮೊದಲಿಗಿಂತ ಹೆಚ್ಚಿನ ವಿರಾಮವನ್ನು ಹೊಂದುವುದಿಲ್ಲ, ಆದರೆ ಹಿಂದಿನದಕ್ಕೆ ಹೋಲಿಸಿದರೆ ದುಪ್ಪಟ್ಟು ದರದಲ್ಲಿ ವೇತನವನ್ನು ಪಡೆಯುತ್ತದೆ. ಸಮಾಜವಾದಿ ಸಮಾಜದಲ್ಲಿ, ಬೇರೆ ರೀತಿಯಲ್ಲಿ ಹೇಳುವುದಾದರೆ, ಉತ್ಪಾದನೆಯ ಪ್ರತಿ ಯೂನಿಟ್ ಗೆ ಕಾರ್ಮಿಕರ ಶ್ರಮವನ್ನು ಅರ್ಧದಷ್ಟು ಇಳಿಸುವ ಆವಿಷ್ಕಾರ, ಹಿಂದಿನದ್ದೇ ಸರಕು ಮತ್ತು ಸೇವೆಗಳಿಗೆ ಲಭ್ಯವಾಗುತ್ತದೆ, ಹೆಚ್ಚಿನ ವಿರಾಮವನ್ನು ಪಡೆಯುತ್ತದೆ ಅಥವಾ ಸೇವೆ ಮತ್ತು ಸರಕುಗಳ ಲಭ್ಯತೆಯನ್ನು ಹೆಚ್ಚಿಸುತ್ತದೆ. ಈ ಮೂಲಕ ಈ ರೀತಿಯಲ್ಲಿ ಕಾರ್ಮಿಕರ ಜೀವನ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಕೃತಕ
ಆದರೆ ಬಂಡವಾಳ ಶಾಹಿ ಸಮಾಜದಲ್ಲಿ, ಅಂತಹ ಯಾವುದೇ ಶ್ರಮ-ಉಳಿತಾಯದ ಆವಿಷ್ಕಾರವು ತಕ್ಷಣವೇ ಉದ್ಯೋಗದಲ್ಲಿ ಕಡಿತವನ್ನು ಉಂಟುಮಾಡುತ್ತದೆ: ನಮ್ಮ ಉದಾಹರಣೆಯಲ್ಲಿ ಹೊಸ ಪ್ರಕ್ರಿಯೆಯ ಪರಿಚಯದ ಮೂಲಕ ವೆಚ್ಚವನ್ನು ಕಡಿತಗೊಳಿಸಲು ಮತ್ತು ಲಾಭವನ್ನು ಹೆಚ್ಚಿಸಲು 50 ಕೆಲಸಗಾರರನ್ನು ತಕ್ಷಣವೇ ಹೊರ ಹಾಕಲಾಗುತ್ತದೆ; ಇದು ನಿರುದ್ಯೋಗವನ್ನು ಅಷ್ಟರ ಮಟ್ಟಿಗೆ ಹೆಚ್ಚಿಸಿ ಮೀಸಲು ಶ್ರಮಿಕ ಪಡೆಯನ್ನು ಹೆಚ್ಚಿಸುತ್ತದೆ.ಇದು ಕಾರ್ಮಿಕರ ಚೌಕಾಶಿ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ, ಇದರಿಂದ ಕೂಲಿದರವೂ ಇಳಿಯ ಬಹುದೇ ಹೊರತು ಖಂಡಿತವಾಗಿಯೂ ಹೆಚ್ಚಾಗುವುದಿಲ್ಲ. ಆದ್ದರಿಂದ ಬಂಡವಾಳ ಶಾಹಿಯ ಅಡಿಯಲ್ಲಿ ಶ್ರಮ-ಉಳಿತಾಯ ಮಾಡುವ ಆವಿಷ್ಕಾರ, ನಿರುದ್ಯೋಗವನ್ನು ಹೆಚ್ಚಿಸುವ ಮೂಲಕ ಮತ್ತು ನಿಜ ವೇತನವನ್ನು ಕಡಿಮೆ ಮಾಡುವ ಮೂಲಕ ಕಾರ್ಮಿಕರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಹೀಗೆ, ಸಮಾಜವಾದದ ಅಡಿಯಲ್ಲಿ ಮಾನವ ಸಂತೋಷವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿರುವ ಆವಿಷ್ಕಾರ, ಬಂಡವಾಳ ಶಾಹಿಯ ಅಡಿಯಲ್ಲಿ ಕಾರ್ಮಿಕರ ಪರಿಸ್ಥಿತಿಯನ್ನು ನಿಜವಾಗಿಯೂ ಹದಗೆಡಿಸುತ್ತದೆ. ಹೀಗೆ ಬಂಡವಾಳಶಾಹಿ ಸಾಮಾಜಿಕ ವ್ಯವಸ್ಥೆಯಲ್ಲಿ ಎ.ಐ. ಪರಿಚಯವು ಕಾರ್ಮಿಕರಿಗೆ ಅಪಾರ ಹಾನಿಯನ್ನುಂಟು ಮಾಡುತ್ತದೆ. ಕೃತಕ
ರಿಕಾರ್ಡೊವಾದ ಮತ್ತು ಕಾರ್ಮಿಕ ಸಂಘಗಳ ವಾದ
ಈ ರೀತಿಯಲ್ಲಿ ವಾದಿಸುವುದು ಮೊದಲ ನೋಟದಲ್ಲಿ ಲುಡೈಟ್‌ಗಳ ತಪ್ಪಾದ ವಾದವನ್ನು ಅನುಸರಿಸಿ ದಂತೆ ಕಾಣುತ್ತದೆ. ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಬ್ರಿಟನ್‌ನಲ್ಲಿ ಜವಳಿ ಕೆಲಸಗಾರರ ಗುಂಪು ಈ ವಾದವನ್ನು ಅನುಸರಿಸಿ ಕಾರ್ಮಿಕರಲ್ಲಿ ನಿರುದ್ಯೋಗವನ್ನು ಉಂಟು ಮಾಡುವುದು ಯಂತ್ರಗಳೇ ಎಂದು ನಂಬಿದ್ದರಿಂದ ಯಂತ್ರಗಳನ್ನು ಒಡೆಯುವ ಕೆಲಸಕ್ಕೆ ಇಳಿದರು. ಲುಡೈಟ್ ವಾದವು ಯಂತ್ರೋಪಕರಣಗಳು ನಿರುದ್ಯೋಗವನ್ನು ಉಂಟು ಮಾಡುತ್ತವೆ ಎಂದು ನೋಡುವುದರಲ್ಲಿ ತಪ್ಪಿರಲಿಲ್ಲ; ಆದರೆ ಅವರು ಈ ವಿದ್ಯಮಾನ ಬಂಡವಾಳ ಶಾಹಿಯ ಕಾರಣದಿಂದ ಉದ್ಭವಿಸುತ್ತದೆ ಎಂದು ಕಾಣಲಿಲ್ಲ. ಅವರು ಈ ಸಾಮಾಜಿಕ ವಿದ್ಯಮಾನ ತಂತ್ರಜ್ಞಾನದಿಂದಾಗಿ, ಅದರಲ್ಲಿ ಅಂತರ್ಗತವಾಗಿರು ವವಿದ್ಯಮಾನ ಎಂದು ತಪ್ಪಾಗಿ ಗ್ರಹಿಸಿದರು; ಈ ವಿದ್ಯಮಾನದ ಕಾರಣಗಳನ್ನು ಗುರುತಿಸಲಾರದ ಅವರ ತಪ್ಪುಗಳೇನೂ ಇದ್ದರೂ, ಈ ವಿದ್ಯಮಾನವನ್ನು ಗುರುತಿಸುವಲ್ಲಿ ಅವರು ತಪ್ಪುಮಾಡಿರಲಿಲ್ಲ. ವಾಸ್ತವವಾಗಿ, ಯಂತ್ರೋಪಕರಣಗಳು ಉದ್ಯೋಗಕ್ಕೆ ಪ್ರಯೋಜನ ಕಾರಿ ಎಂದು ನೋಡಿದ ಅರ್ಥಶಾಸ್ತ್ರಜ್ಞರು ಸೈದ್ಧಾಂತಿಕವಾಗಿ ತಪ್ಪುಮಾಡಿದ್ದರು.
ಈ ಅರ್ಥಶಾಸ್ತ್ರಜ್ಞರಲ್ಲಿ ಪ್ರಮುಖರು ಡೇವಿಡ್ರಿಕಾರ್ಡೊ. ವೇತನವು ಯಾವಾಗಲೂ ಜೀವನಾಧಾರ ಮಟ್ಟದಲ್ಲಿ ಉಳಿಯುತ್ತದೆ ಎಂದು ಅವರು ವಾದಿಸಿದರು, ಯಂತ್ರೋಪಕರಣಗಳು ಕಾರ್ಮಿಕರನ್ನು ಹೊರದಬ್ಬಿ ಹೆಚ್ಚುವರಿ ನಿರುದ್ಯೋಗವನ್ನು ತಕ್ಷಣವೇ ಉಂಟು ಮಾಡಿ ಲಾಭದ ಮಿತಿಗಳನ್ನು ಮತ್ತು ಆದರಿಂದಾಗಿ ಲಾಭದದರವನ್ನು ಹೆಚ್ಚಿಸುತ್ತದೆ. ಬಂಡವಾಳ ಶಾಹಿ ಅರ್ಥ ವ್ಯವಸ್ಥೇಯಲ್ಲಿ ಒಟ್ಟಾರೆ ಬೇಡಿಕೆಯ ಕೊರತೆ ಎಂದಿಗೂ ಇರಲಾರದು ಎಂಬ ‘ಸೇನಿಯಮದಲ್ಲಿನಂಬಿಕೆಯಿದ್ದರಿಕಾರ್ಡೊ, ನಂತರ ಎಲ್ಲಾ ವೇತನಗಳನ್ನು ಬಳಸಲಾಗುತ್ತದೆ ಮತ್ತು ಎಲ್ಲಾ ಬಳಸದ ಲಾಭವನ್ನು ಉಳಿಸಲಾಗುತ್ತದೆ ಮತ್ತು ಹೂಡಿಕೆ ಮಾಡಲಾಗುತ್ತದೆ ಯಾದ್ದರಿಂದ, ಲಾಭದ ದರದಲ್ಲಿನ ಹೆಚ್ಚಳವು ಹೂಡಿಕೆ ದರವನ್ನು ಹೆಚ್ಚಿಸುತ್ತದೆ ಎಂದು ವಾದಿಸಿದರು. ಇದು ಬಂಡವಾಳದ ದಾಸ್ತಾನಿನ ಪ್ರತಿಯೂನಿಟ್‌ಹೂಡಿಕೆ, ಅಂದರೆ, ಬಂಡವಾಳದ ದಾಸ್ತಾನಿನ ದರ, ಮತ್ತು ಅದರಿಂದ ಉತ್ಪಾದನೆ ಮತ್ತು ಉದ್ಯೋಗದ ಬೆಳವಣಿಗೆಯ ದರ ಹೆಚ್ಚುತ್ತದೆ ಎಂದು ವಾದಿಸಿದರು.
ಇದರರ್ಥ ಯಂತ್ರೋಪಕರಣಗಳ ಪರಿಚಯವು ತಕ್ಷಣವೇ ನಿರುದ್ಯೋಗವನ್ನು ಉಂಟು ಮಾಡಿದರೂ, ಅದು ಉದ್ಯೋಗದ ಬೆಳವಣಿಗೆಯ ದರವನ್ನು ಕೂಡ ಹೆಚ್ಚಿಸುತ್ತದೆ, ಇದರಿಂದಾಗಿ ಸ್ವಲ್ಪ ಸಮಯದ ನಂತರ ಉಂಟಾದ ತಾತ್ಕಾಲಿಕ ಹೆಚ್ಚುವರಿ ನಿರುದ್ಯೋಗವನ್ನು ನಿವಾರಿಸಲಾಗುತ್ತದೆ, ಅದನ್ನು ಪರಿಚಯಿಸುವ ಮೊದಲು ಇದ್ದುದಕ್ಕಿಂತ ಹೆಚ್ಚಿನ ಉದ್ಯೋಗವನ್ನು ಉಂಟಾಗುತ್ತದೆ. ಅಂದರೆ, ಯಂತ್ರೋಕರಣದ ಪರಿಚಯ ತಾತ್ಕಾಲಿವಾಗಿ ನಿರುದ್ಯೋಗವನ್ನು ಉಲ್ಬಣಗೊಳಿಸಿದರೂ, ದೀರ್ಘಾ ವಧಿಯಲ್ಲಿ ಹೆಚ್ಚಿನ ಉದ್ಯೋಗಗಳನ್ನು ಉಂಟುಮಾಡುತ್ತದೆ ಎಂಬುದು ಇಂತಹ ಅರ್ಥಶಾಸ್ತ್ರಜ್ಞರವಾದ.
ಇಂದಿಗೂ ರಿಕಾರ್ಡೊ ಅವರ ವಾದವನ್ನು ಯಂತ್ರೋಪಕರಣಗಳ ಪರಿಚಯವು ಉದ್ಯೋಗಕ್ಕೆ ಹಾನಿಕಾರಕವಾಗಿದೆ ಎಂಬ ಟ್ರೇಡ್ ಯೂನಿಯನ್‌ಗಳ ವಾದಕ್ಕೆ ಪ್ರತಿಯಾಗಿ ಮಂಡಿಸಲಾಗುತ್ತಿದೆ. ಈ ವಾದವು ಎರಡು ಸ್ಪಷ್ಟ ಕಾರಣಗಳಿಂದಾಗಿ ತಪ್ಪಾಗಿದೆ. ಮೊದಲನೆಯದು ಇದು ಒಂದು ಬಾರಿಯ ಯಂತ್ರೋಪಕರಣಗಳ ಪರಿಚಯವನ್ನು ಮಾತ್ರ ಸೂಚಿಸುತ್ತದೆ; ಆದರೆ, ಯಂತ್ರೋಪಕರಣಗಳ (ಅಥವಾ ಶ್ರಮಿಕ-ಉಳಿತಾಯ ಆವಿಷ್ಕಾರಗಳ) ಪರಿಚಯವು ನಿರಂತರ ಪ್ರಕ್ರಿಯೆಯಾಗಿದೆ, ಆದ್ದರಿಂದ ಈ ರೀತಿಯ ಪ್ರತಿಯೊಂದು ಪರಿಚಯದಿಂದ ಉಂಟಾಗುವ ನಿರುದ್ಯೋಗದ ಸೃಷ್ಟಿ ಕೂಡ ಒಂದು ನಿರಂತರ ಪ್ರಕ್ರಿಯೆಯಾಗಿದೆ; ಆಧ್ದರಿಂದ ಯಾವುದೇ ನಿರ್ದಿಷ್ಟ ಅವಧಿಯಲ್ಲಿ, ಯಂತ್ರೋಪಕರಣಗಳ ನಿರಂತರ ಪರಿಚಯದ ಮೊದಲು ಇದ್ದಕ್ಕಿಂತ ನಿಜವಾದ ಉದ್ಯೋಗ ಕಡಿಮೆ ಇರುತ್ತದೆ. ಹೆಚ್ಚಿನ ಉದ್ಯೋಗದ ಸೃಷ್ಟಿಯಾಗುವ ಸಮಯ ಪ್ರಾರಂಭವಾಗುವ ಆ ದಿನ ಅರ್ಥಪೂರ್ಣ ಅವಧಿಯಲ್ಲಿ ಎಂದೂ ಬರಲಿಕ್ಕಿಲ್ಲ.
ಆದಾಗ್ಯೂ ಹೆಚ್ಚು ಮುಖ್ಯವಾದ ಅಂಶವು ಈ ಕೆಳಗಿನವುಗಳಿಗೆ ಸಂಬಂಧಿಸಿದೆ. ಬಂಡವಳಿಗರು ಮಾರುಕಟ್ಟೆ ವಿಸ್ತರಿಸುವ ನಿರೀಕ್ಚೆಯಿದ್ದಾಗ ಮಾತ್ರ ಹೂಡಿಕೆ ಮಾಡುತ್ತಾರೆ. ಶ್ರಮ-ಉಳಿತಾಯದಿಂದ ಉಂಟಾಗುವ ಕಡಿಮೆ ಯೂನಿಟ್ ಶ್ರಮ ವೆಚ್ಚದಿಂದಾಗಿ ಲಾಭದ ಮಿತಿ ಮತ್ತು ಲಾಭದ ದರವು ಹೆಚ್ಚಾದಾಗ ಅಲ್ಲ. ಈಗ, ಯಂತ್ರೋಪಕರಣಗಳನ್ನು ಪರಿಚಯಿಸುವ ಅವಧಿಯನ್ನು ಪರಿಗಣಿಸಿ. ರಿಕಾರ್ಡೊರವರೇ ಒಪ್ಪಿಕೊಂಡಂತೆ, ಇದರಿಂದಾಗಿ ಉದ್ಯೋಗವು ತಕ್ಷಣವೇ ಕುಸಿಯುತ್ತದೆ, ಜೀವನಾಧಾರ ಮಟ್ಟದಲ್ಲಿ ನಿಜವೇತನವನ್ನು ನಿಗದಿ ಪಡಿಸಿರುವುದರಿಂದ ಒಟ್ಟು ಕೂಲಿ ಮೊತ್ತ ಮತ್ತು ಕಾರ್ಮಿಕರ ಬಳಕೆ ಪ್ರಮಾಣವೂ ಉಳಿಯುತ್ತದೆ. ಬಂಡವಾಳ ಶಾಹಿಗಳು ತಮ್ಮ ಲಾಭದ ಒಂದು ಸಣ್ಣ ಪ್ರಮಾಣವನ್ನು ಮಾತ್ರ ಬಳಸುತ್ತಾರೆ (ಸರಳತೆಗಾಗಿ, ಅವರು ತಮ್ಮ ಸಂಪೂರ್ಣ ಲಾಭವನ್ನು ಉಳಿಸುತ್ತಾರೆ ಎಂದು ಭಾವಿಸೋಣ). ಆದ್ದರಿಂದ ಆ ಅವಧಿಯಲ್ಲಿ ಅರ್ಥ ವ್ಯವಸ್ಥೆಯಲ್ಲಿ ಒಟ್ಟು ಬಳಕೆ ಕಡಿಮೆಯಾಗುತ್ತದೆ; ಮತ್ತು ಹೂಡಿಕೆ ಹೆಚ್ಚಾಗಲು ಯಾವುದೇ ಐಹಿಕ ಕಾರಣವಿಲ್ಲ. ಆದ್ದರಿಂದ ಒಟ್ಟಾರೆ ಬೇಡಿಕೆ ಮತ್ತು ಉತ್ಪಾದನೆಯು ಆ ಅವಧಿಯಲ್ಲಿ ಕುಸಿದಿರುತ್ತದೆ. ಅಂತಹ ಸಂದರ್ಭದಲ್ಲಿ, ರಿಕಾರ್ಡೊ ವಾದಿಸಿದಂತೆ ಹೂಡಿಕೆಯ ಸಮಯಾವಧಿ ಮೊದಲಿಗಿಂತ ಹೆಚ್ಚಿರುವ ಬದಲು ಕಡಿಮೆಯಿರುತ್ತದೆ. ಆದ್ದರಿಂದಉದ್ಯೋಗದಸಮಯಾವಧಿಯೂಕಡಿಮೆಇರುತ್ತದೆ.
ಯುರೋಪ್‌ನಲ್ಲಿ ನಿರುದ್ಯೋಗವು ತೀವ್ರವಾಗಲಿಲ್ಲ ವೇಕೆ?
ಯಂತ್ರೋಪಕರಣಗಳ ಪರಿಚಯವು ಉದ್ಯೋಗಕ್ಕೆ ಹಾನಿಕಾರಕವಾಗಿದೆ ಎಂಬ ಕಾರ್ಮಿಕರ ಹಳೆಯವಾದವು ಅಲ್ಪಾವಧಿಯಲ್ಲಿ ಮತ್ತು ದೀರ್ಘಾವಧಿಯಲ್ಲಿಯೂ ಮಾನ್ಯವಾಗಿ ಉಳಿದಿದೆ. ಆಧರೂರಿಕಾರ್ಡೊ ವಿರುದ್ಧ ನಮ್ಮ ವಾದವು ಸೂಚಿಸುವಂತೆ ಯಂತ್ರೋಪಕರಣಗಳ ಪರಿಚಯದಿಂದಾಗಿ ಯುರೋಪ್‌ನಲ್ಲಿ ನಿರುದ್ಯೋಗದಲ್ಲಿ ಸ್ಥಿರವಾದ ಹೆಚ್ಚಳವನ್ನು ನಾವುಕಾಣುವುದಿಲ್ಲ ಏಕೆ? ಇದಕ್ಕೆ ಎರಡು ಸ್ಪಷ್ಟ ಕಾರಣಗಳಿವೆ: ಒಂದು ಯುರೋಪ್ ನಿಂದ ಬಿಳಿಯರ ವಸಾಹತುಗಳ ಸಮಶೀತೋಷ್ಣ ಪ್ರದೇಶಗಳಿಗೆ ಬೃಹತ್ ವಲಸೆ, ಅಲ್ಲಿ ವಲಸಿಗರು ಸ್ಥಳೀಯ ನಿವಾಸಿಗಳನ್ನು ಹೊರ ಹಾಕಿದರು ಮತ್ತು ಅವರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡರು. ಇದು ಯುರೋಪಿಯನ್ ಆರ್ಥಿಕತೆಗಳಲ್ಲಿ ನಿರುದ್ಯೋಗದ ಮಟ್ಟವನ್ನು ಕಡಿಮೆ ಮಾಡಿತು ಮತ್ತು ವೇತನದರಗಳು ಈ ವಲಸೆ ಇಲ್ಲದಿದ್ದರೆ ಇರಬಹುದಾಧ್ದಕ್ಕಿಂತ ಹೆಚ್ಚಾದವು. ಡಬ್ಲ್ಯೂ ಆರ್ಥರ್ಲೆವಿಸ್ಪ್ರಕಾರ, “ದೀರ್ಘ ಹತ್ತೊಂಬತ್ತನೇಶ ತಮಾನದಲ್ಲಿ” ಅಂದರೆ ಸಂಪೂರ್ಣ ಹತ್ತೊಂಬತ್ತನೇ ಶತಮಾನದಲ್ಲಿ ಮತ್ತು ಮೊದಲ ವಿಶ್ವಯುದ್ಧದ ಹಿಂದಿ ನಅವಧಿಯಲ್ಲಿ. 5 ಕೋಟಿ ಯುರೋಪಿಯನ್ ರು ಕೆನಡಾ, ಯುಎಸ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾಕ್ಕೆ ವಲಸೆ ಹೋದರು. ಕೃತಕ
ಯುರೋಪ್‌ನಲ್ಲಿ ನಿರುದ್ಯೋಗವು ತೀವ್ರವಾಗದಿರಲು ಎರಡನೆಯ ಕಾರಣವೆಂದರೆ ಉಷ್ಣವಲಯದ ವಸಾಹತುಗಳು ಮತ್ತು ಭಾರತ ಮತ್ತು ಚೀನಾ ದಂತಹ ಅರೆ-ವಸಾಹತುಗಳಲ್ಲಿನ ಬಂಡವಾಳ ಶಾಹಿ ಪೂರ್ವ ಮಾರುಕಟ್ಟೆಗಳಿಗೆ ಯುರೋಪಿಯನ್ ಸರಕುಗಳ ಹಠಾತ್ ದಾಳಿ. ಅಲ್ಲಿ ಅವು ಸ್ಥಳೀಯ ಕುಶಲ ಕರ್ಮಿಗಳನ್ನು ಹೊರದಬ್ಬಿದವು. ಇದರಿಂದ ಯುರೋಫಿನಲ್ಲಿನ ನಿರುದ್ಯೋಗವು ಈ ಪ್ರದೇಶಗಳಿಗೆ ರಫ್ತಾದಂತಾಯಿತು. ಅಂದರೆ ಅಲ್ಲಿ “ವಿಕೈಗಾರಿಕೀಕರಣ” ( ಅಂದರೆ, ಕೈಗಾರಿಕೆಗಳ ನಾಶಕ್ಕೆ) ಕ್ಕೆಕಾರಣವಾಯಿತು ಮತ್ತು ಆದ್ದರಿಂದ ಈ ಬಂಡವಾಳ ಶಾಹಿ ಪೂರ್ವ ಆರ್ಥಿಕ ವ್ಯವಸ್ಥೆಗಳಲ್ಲಿ ನಿರುದ್ಯೋಗ ಮತ್ತು ಯುರೋಪಿನೊಳಗೆ ಉದ್ಯೋಗನಿ ರ್ಮಾಣದ ಒಂದೇ ಸಮಯದಲ್ಲಿ ನಡೆಯಿತು. ಕೃತಕ
ಮೆಟ್ರೋ ಪಾಲಿಟನ್ (ಮುಂದುವರೆದ ಪಾಶ್ಚಿಮಾತ್ಯ ದೇಶಗಳ) ಬಂಡವಾಳ ಶಾಹಿಗೆ ಸಾಮ್ರಾಜ್ಯ ಶಾಹಿ ಒದಗಿಸಿದ ಈ ನಿರ್ದಿಷ್ಟ ಸುರಕ್ಷತಾ ಕವಾಟಗಳು ದಬ್ಬಾಳಿಕೆ ಯದ್ದಾಗಿದ್ದುದರಿಂದ ಅಸಹ್ಯಕರವಾಗಿದ್ದವು ಮಾತ್ರವಲ್ಲ, ಈಗ ಇಂತಹ ಸುರಕ್ಷಿತ ಕವಾಟಗಳು ಬಂಡವಾಳ ಶಾಹಿಯ ಅಂಚಿನಲ್ಲಿರುವ ದೇಶಗಳೀಗೆ ಮಾತ್ರವಲ್ಲ, ಮಹಾನಗರ ಬಂಡವಾಳ ಶಾಹಿಗೂ ಲಭ್ಯವಿಲ್ಲ, ಪ್ರಭುತ್ವ ವೆಚ್ಚವು ಬಂಡವಾಳ ಶಾಹಿ ವಿಭಾಗಕ್ಕೆ ಬೇಡಿಕೆಯನ್ನು ಸೃಷ್ಟಿಸ ಬಹುದು ಮತ್ತು ಆಮೂಲಕ ಮಹಾ ನಗರದೊಳಗೆ ಆಂತರಿಕ ಉದ್ಯೋಗವನ್ನು ಹೆಚ್ಚಿಸ ಬಹುದು ಎಂದು ಕೇನ್ಸ್ ಬಾವಿಸಿದರು. ಆದರೆ, ನವ ಉದಾರವಾದಿ ಬಂಡವಾಳ ಶಾಹಿಯ ಅಡಿಯಲ್ಲಿ ಇದು ಸಾಧ್ಯವಿಲ್ಲ ಎಂಬುದು ಪ್ರಸ್ತುತ ದೀರ್ಘಕಾಲದ ಬಿಕ್ಕಟ್ಟಿನಿಂದ ಸ್ಪಷ್ಟವಾಗಿದೆ. ಈ ಪರಿಸ್ಥಿತಿಗಳಲ್ಲಿ, ಬಂಡವಾಳ ಶಾಹಿ ವಿಭಾಗದೊಳಗೆ ಎ.ಐ.ಯನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಿದರೆ ಅದು ಮಹಾನಗರಗಳಲ್ಲೂ ಮತ್ತು ಬಂಡವಾಳ ಶಾಹಿ ವ್ಯವಸ್ಥೆಯ ಅಂಚಿನಲ್ಲಿರುವ ಪ್ರದೇಶಗಳಲ್ಲೂ ಬೃಹತ್ ನಿರುದ್ಯೋಗವನ್ನು ಉಂಟುಮಾಡುತ್ತದೆ. ಈ ನಿರುದ್ಯೋಗದ ವಿರುದ್ಧ ಈಗ ಹಾಲಿವುಡ್‍ನ ಲೇಖಕರು ಮತ್ತು ಧ್ವನಿ ಕಲಾವಿದರು ಹೋರಾಟಕ್ಕಿಳಿದರು. ಆದರೆ ಇದರಿಂದ ಘೋರ ಭವಿಷ್ಯವನ್ನು ಎದುರಿಸಬೇಕಾದವರು ಅವರು ಮಾತ್ರವೇ ಅಲ್ಲ. ಸಾಮಾನ್ಯ ಕಾರ್ಮಿಕರೂ ಇದರ ದುಷ್ಟರಿಣಾಮಗಳನ್ನು ಎದುರಿಸ ಬೇಕಾಗುತ್ತದೆ. ಇಂತಹ ಭೀಕರ ಭವಿಷ್ಯ ಸಾಕಾರಗೊಳ‍್ಳುವುದನ್ನು ತಡೆಯಲು ಸೂಕ್ತವಾದ ಬೇಡಿಕೆಗಳನ್ನು ಎತ್ತುವ ಕಾರ್ಮಿಕ ಹೋರಾಟಗಳನ್ನು ಪ್ರಾರಂಭಿಸುವುದು ಮುಖ್ಯವಾಗಿದೆ.
ಚಿತ್ರಕೃಪೆ: ದಿಹಾಲಿವುಡ್ ರಿಪೋರ್ಟರ್
ಇದನ್ನೂ ನೋಡಿ: ವಚನಾನುಭವ – 02| ದೇಹಾರಕ್ಕೆ ಆಹಾರವೆ ನಿಚ್ಚಣಿಗೆ – ಡಾ. ಮೀನಾಕ್ಷಿ ಬಾಳಿJanashakthi Media