ಬೆಂಗಳೂರು: ಲೈಂಗಿಕ ದೌರ್ಜನ್ಯ ಮತ್ತು ಅಪಹರಣ ಸಹಕಾರ ಆರೋಪವನ್ನು ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ತಾಯಿ, ಜೆಡಿಎಸ್‌ನ ಶಾಸಕ ಹೆಚ್.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣಗೆ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.
ಎಸ್‌ಐಟಿ ತನಿಖೆಗೆ ಒಂದು ಕಡೆ ಭವಾನಿ ರೇವಣ್ಣ ಸಹಕರಿಸುತ್ತಲೂ ಇಲ್ಲ, ಅಲ್ಲದೇ ನೀಡಿರುವ ನೊಟೀಸ್‌ನಂತೆ ನಡೆದುಕೊಂಡು ಇಲ್ಲ. ತಲೆಮರೆಸಿಕೊಂಡಿರುವ ಭವಾನಿ ರೇವಣ್ಣ ವಿರುದ್ಧ ನ್ಯಾಯಾಲಯ ಬಂಧನ ವಾರೆಂಟ್ ಜಾರಿ ಮಾಡಿದೆ. ಮೈಸೂರು ಜಿಲ್ಲೆಯ ಕೆಆರ್ ನಗರ ಪೊಲೀಸರು ಮಹಿಳೆಯ ಅಪಹರಣ ಮತ್ತು ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಗೆ ಬೇಕಾಗಿರುವ ಪ್ರಕರಣದಲ್ಲಿ ಭವಾನಿ ಭಾಗಿಯಾಗಿರುವ ಬಗ್ಗೆ ಎಸ್‌ಐಟಿ ವಿವರವಾದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ಇದನ್ನು ಓದಿ : ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು ಅವ್ಯವಹಾರಗಳು – ಡಿಕೆಶಿ ಆರೋಪ
ಪ್ರಜ್ವಲ್ ರೇವಣ್ಣ ಅವರ ತಾಯಿ ಭವಾನಿ ಅವರಿಗೆ ತನಿಖಾ ತಂಡ ಮೂರು ಬಾರಿ ನೋಟಿಸ್ ನೀಡಿದ್ದರೂ ಎಸ್‌ಐಟಿ ಎದುರು ಹಾಜರಾಗಲು ವಿಫಲರಾಗಿದ್ದಾರೆ. ಹದಿನೈದು ದಿನಗಳಿಂದ ತಲೆಮರೆಸಿಕೊಂಡಿರುವ ಭವಾನಿಯನ್ನು ಬಂಧಿಸಲು ಎಸ್‌ಐಟಿ ಪೊಲೀಸ್ ತಂಡಗಳನ್ನು ರಚಿಸಿದೆ.
ಬೆಂಗಳೂರಿಗೆ ಹಿಂದಿರುಗುವ ಮೊದಲು ಎಸ್‌ಐಟಿ ಇತ್ತೀಚೆಗೆ ಹೊಳೆನರಸೀಪುರದ ಅವರ ನಿವಾಸದಲ್ಲಿ ಭವಾನಿಗಾಗಿ ಕನಿಷ್ಠ ಏಳು ಗಂಟೆಗಳ ಕಾಲ ಕಾದು ವಾಪಾಸಾಗಿತ್ತು.ಇದೀಗ ಭವಾನಿ ರೇವಣ್ಣ ವಿರುದ್ಧ ಬೆಂಗಳೂರಿನ 42 ನೇ ಎಸಿಎಂಎಂ ಅವರು ಬಂಧನ ವಾರಂಟ್ ಹೊರಡಿಸಿದೆ.
ಇದನ್ನು ನೋಡಿ : ಬಿಜೆಪಿಯನ್ನು ಕೈ ಬಿಟ್ಟ ಐದು ರಾಜ್ಯಗಳು Janashakthi Media