ನಾಗಮಂಗಲ ಕೋಮುಗಲಭೆ ಪ್ರಕರಣದಲ್ಲಿ ಬಂಧನ ಭೀತಿ: ಗ್ರಾಮ ತೊರೆದು ಹೋಗುತ್ತಿದ್ದ ಯುವಕ ಬ್ರೈನ್ ಸ್ಟ್ರೋಕ್‌ನಿಂದ ಮೃತ

ಸುಳ್ಳು ಸುದ್ದಿ ಎಂದ ಪೋಲಿಸ್, ಮೃತ ಪಟ್ಟ ಕಿರಣ್ ಆರೋಪಿಯಲ್ಲ
ಮಂಡ್ಯ: ಯುವಕನೋರ್ವ ನಾಗಮಂಗಲ ಕೋಮುಗಲಭೆ ಪ್ರಕರಣದಲ್ಲಿ ಬಂಧನ ಭೀತಿಯಿಂದ ಗ್ರಾಮ ತೊರೆದು ಹೋಗುತ್ತಿರುವಾಗ  ಬ್ರೈನ್ ಸ್ಟ್ರೋಕ್‌ನಿಂದ ಮೃತಪಟ್ಟ ಘಟನೆ ನಡೆದಿದೆ. ಕೋಮುಗಲಭೆ 

ಕಿರಣ್ (23) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಸೆಪ್ಟೆಂಬರ್ 11 ರ ರಾತ್ರಿ ಘಟನೆ ನಡೆದ ನಂತರ ಯುವಕ ಗ್ರಾಮ ತೊರೆದಿದ್ದನು . ಯುವಕನಿಗೆ ಬ್ರೈನ್ ಸ್ಟ್ರೋಕ್ ಆಗಿತ್ತು. ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಗೆ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ ಯುವಕ ಮೃತಪಟ್ಟಿದ್ದಾನೆ.

ಇದನ್ನು ಓದಿ : ಕ್ರಿಕೆಟ್‌ ಬ್ಯಾಟ್‌ನಿಂದ ಬೀದಿನಾಯಿಯನ್ನು ಹೊಡೆದು ಸಾಯಿಸಿ ಕ್ರೌರ್ಯ ಮೇರೆದ ವ್ಯಕ್ತಿ: ಎಫ್‌ಐಆರ್ ದಾಖಲು

ಈಗಾಗಲೇ ಪ್ರಕರಣ ಸಂಬಂಧ ಎ17 ಆರೋಪಿಯಾಗಿ ಮೃತ ಕಿರಣ್ ತಂದೆ ಮಂಡ್ಯ ಕಾರಾಗೃಹದಲ್ಲಿದ್ದಾರೆ. ತಂದೆ ಜೈಲಿನಲ್ಲಿರುವಾಗಲೇ ಇತ್ತ ಮಗ ಕಿರಣ್ ಬ್ರೈನ್ ಸ್ಟ್ರೋಕ್‌ನಿಂದ ಮೃತಪಟ್ಟಿರುವುದು ಕುಟುಂಬಸ್ಥರ ಸಂಕಟ ಹೇಳತೀರದಾಗಿದೆ.

ನಾಗಮಂಗಲ ಗಲಭೆ ಪ್ರಕರಣ ಸಂಬಂಧ ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯವಾಳಿ ಪರಿಶೀಲನೆ ನಡೆಸುತ್ತಿರುವುದನ್ನು ತಿಳಿದು ಅನೇಕ ಯುವಕರು ಊರು ತೊರೆದಿದ್ದಾರೆ. ಇತ್ತ ಪೊಲೀಸರು ಯುವಕರು ಊರಿಗೆ ಬರುವುದನ್ನೆ ಕಾಯುತ್ತಿದ್ದಾರೆ.

ಬದರಿಕೊಪ್ಪಲಿನ ಯುವಕರು ಊರಿಗೆ ಬರುವುದಕ್ಕೆ ಹೆದರುತ್ತಿದ್ದಾರೆ. ಪೊಲೀಸರು ಆರೋಪಿಗಳನ್ನು ಹುಡುಕಿಕೊಂಡು ಹೋಗಿ ಬಂಧಿಸುತ್ತಿದ್ದಾರೆ ಇದರಿಂದ ಯುವಕರು ಬಂಧನ ಭೀತಿಗೆ ಒಳಗಾಗಿದ್ದಾರೆ.

ಹಿಂದುತ್ವ ಸಂಘಟನೆಯ ನಾಯಕರು ನೆಮ್ಮದಿಯಿಂದ ಮನೆಯಲ್ಲಿದ್ದಾರೆ, ಇವರ ತೆವಲಿಗೆ ಕುಣಿದ ಯುವಕರು ಜೈಲು ಪಾಲಾಗುವುದು, ಮೃತರಾಗುತ್ತಿದ್ದಾರೆ. ನೆಮ್ಮದಿಯ ಜೀವನಕ್ಕೆ ಯುವಕರು ಹಿಂದುತ್ವ ಸಂಘಟನೆ ಸೇರಿ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂಬುದು ಸಾರ್ವಜನಿಕ ಅಭಿಪ್ರಾಯವಾಗಿದೆ.

 

ಸುಳ್ಳು ಸುದ್ದಿ: ಕ್ರಮದ ಎಚ್ಚರಿಕೆ :’ನಾಗಮಂಗಲ ಗಲಭೆ ಪ್ರಕರಣದಲ್ಲಿ ಎ–1 ಆಗಿದ್ದ ಕಿರಣ್‌ ಮಿದುಳಿಗೆ ಸ್ಟ್ರೋಕ್‌ ಆಗಿ ಮೃತಪಟ್ಟಿದ್ದಾನೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ. ‘ಬ್ರೈನ್‌ ಸ್ಟ್ರೋಕ್‌ನಿಂದ ಮೃತಪಟ್ಟಿರುವ ಕಿರಣ್‌ ಗಲಭೆ ಪ್ರಕರಣದ ಆರೋಪಿಯಾಗಿರುವುದಿಲ್ಲ’ ಎಂದು ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸ್ಪಷ್ಟಪಡಿಸಿದ್ದಾರೆ.

ಎ–1 ಆರೋಪಿ ಕಿರಣ್‌ಕುಮಾರ್‌ ಎಸ್‌. ಬಿನ್‌ ಶ್ರೀನಿವಾಸ ಎಂಬಾತ ಈಗಾಗಲೇ ದಸ್ತಗಿರಿಯಾಗಿ, ಮಂಡ್ಯ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನಲ್ಲಿದ್ದಾನೆ ಎಂದು ತಿಳಿಸಿದ್ದಾರೆ.

ಇದನ್ನು ನೋಡಿ : ನಾಗಮಂಗಲ ಮತೀಯ ಗಲಭೆ- ಮುಂದುವರಿದ ನೂರು ವರ್ಷಗಳ ರಕ್ತಚರಿತ್ರೆ. Janashakthi Media

Donate Janashakthi Media

Leave a Reply

Your email address will not be published. Required fields are marked *