ಬೆಂಗಳೂರು: ಕೆಪಿಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಹಾಯ ಮಾಡಿ ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಸರ್ಕಾರಿ
ನಾಗರಬಾವಿ ಡಿ ಗ್ರೂಪ್ ಲೇಔಟ್ ನಿವಾಸಿ ನೈರುತ್ಯ ರೈಲ್ವೆ ವಲಯ ಕಚೇರಿಯಲ್ಲಿ ಮುಖ್ಯ ಟಿಕೆಟ್ ಇನ್‌ಸ್ಪೆಕ್ಟರ್ ಗೋವಿಂದರಾಜು (49) ಬಂಧಿತ. ಕೆಲವರನ್ನು ವಶಕ್ಕೆ ಪಡೆದಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸರ್ಕಾರಿ
ಗೋವಿಂದರಾಜು ಕೆಪಿಎಸ್‌ಸಿ ನಡೆಯುವ ಕೆಎಎಸ್, ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸ್ ಮಾಡಿಸಿ ಸರ್ಕಾರಿ ನೌಕರಿ ಕೊಡಿಸುವುದಾಗಿ ಅಭ್ಯರ್ಥಿಗಳಿಗೆ ನಂಬಿಸಿ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಧನಕ್ಕೆ ಬಲೆಬೀಸಲಾಯಿತು.
ವಿಜಯನಗರದಲ್ಲಿ ನೆಲೆಸಿರುವ ಕೆಎಎಸ್ ಪರೀಕ್ಷಾರ್ಥಿ ಮನೆಗೆ ಶಣಿವಾರ (ಡಿ.28) ರಾತ್ರಿ 9 ಗಂಟೆಯಲ್ಲಿ ಹೋಗಿ ಪರೀಕ್ಷೆ ಪಾಸ್ ಮಾಡಿಸಿ ನೌಕರಿ ಕೊಡಿಸಲು ಸಹಾಯ ಮಾಡುವುದಾಗಿ ಆಮಿಷವೊಡ್ಡಿ ಹಣ ವಸೂಲಿಗೆ ಹೋಗಿದ್ದರು. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋದಾಗ, ಮನೆಯಿಂದ ಗೋವಿಂದರಾಜು ಹೊರಗೆ ಬರುತ್ತಿದ್ದ. ಕಾದು ಆರೋಪಿಯನ್ನು ಹಿಂಬಾಲಿಸಿ ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಯಿತು.
ಇತ್ತೀಚೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆ ಬರೆದ ಕೆಲ ಅಭ್ಯರ್ಥಿಗಳನ್ನು ಸಂಪರ್ಕಿಸಿ, ಪರೀಕ್ಷೆಯಲ್ಲಿ ಪಾಸ್ ಮಾಡಿಸಿ ಮಧ್ಯವರ್ತಿಗಳ ಮತ್ತು ಅಧಿಕಾರಿಗಳ ಸಹಾಯದಿಂದ ನೌಕರಿ ಕೊಡಿಸುವುದಾಗಿ ಭರವಸೆ ನೀಡಿದ್ದ. ಪಿಡಿಒ ಹುದ್ದೆಗೆ 25 ಲಕ್ಷ ರೂ. ಮತ್ತು ಕೆಎಎಸ್ ಪ್ರಿಲಿಮ್ಸ್‌ಗೆ 50 ಲಕ್ಷ ರೂ. ನೀಡಿದರೆ ನೌಕರಿ ಕೊಡಿಸುತ್ತೇವ. ಪರೀಕ್ಷೆ ವೇಳೆ ಉತ್ತರ ಗೊತ್ತಿಲ್ಲದಿದ್ದರೆ, ಓಎಂಆರ್ ಶೀಟ್‌ನಲ್ಲಿ ಖಾಲಿ ಬಿಟ್ಟು ಬರಬೇಕು. ಆನಂತರ ಸರಿ ಉತ್ತರ ಬರೆದು ಪಾಸ್ ಮಾಡಿಸಲಾಗುತ್ತದೆ.
ಗ್ಯಾರಂಟಿಯಾಗಿ ಅಭ್ಯರ್ಥಿಗಳ ಎಸ್‌ಎಸ್‌ಎಲ್‌ಸಿ ಮತ್ತು ಪದವಿ ಸರ್ಟಿಫಿಕೇಟ್, ಪರೀಕ್ಷಾ ಪ್ರವೇಶ ಪತ್ರಗಳು, ಚೆಕ್‌ಗಳನ್ನ ಪಡೆದುಕೊಂಡಿದ್ದ ಎಂದು ಹೇಳಲಾಗುತ್ತಿದೆ. ಭಾನುವಾರ ನಡೆದ ಕೆಎಎಸ್ ಪರೀಕ್ಷೆಯಲ್ಲಿ ಪಾಸ್ ಮಾಡಿಸುವುದಾಗಿ ಅಭ್ಯರ್ಥಿ ಭೇಟಿಯಾಗಲು ವಿಜಯನಗರಕ್ಕೆ ಬಂದಿದ್ದಾಗ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತನ ಬಳಿ 4 ಮೊಬೈಲ್ಗಳು ಪತ್ತೆಯಾಗಿದೆ. ಅದರಲ್ಲಿ 46 ಅಭ್ಯರ್ಥಿಗಳ ಹೆಸರು ಮತ್ತು ಚೆಕ್ ಮತ್ತು ದಾಖಲೆ ಪತ್ರಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಭ್ಯರ್ಥಿಗಳು ಯಾರು ಎಂಬುದರ ಕುರಿತು ಕೂಲಂಕಷವಾದ ತನಿಖೆ ನಡೆಸಲಾಗುತ್ತಿದೆ. ಆರೋಪಿಯು ಅಭ್ಯರ್ಥಿಗಳಿಂದ ಪಡೆದ ಕೆಲವು ದಾಖಲಾತಿ ಮತ್ತು ಚೆಕ್‌ಗಳನ್ನು ಮಧ್ಯವರ್ತಿಗಳಿಗೆ ನೀಡಿರುವುದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಪಿಎಸ್‌ಸಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆ, ಬರದ ಕಲ ಅಭ್ಯರ್ಥಿಗಳಿಗೆ ಪಾಸ್ ಮಾರಿಸುವುದಾಗಿ ಭರವಸೆ ಕೊಟ್ಟು, ಬಾಲ್ ಟಿಕೆಟ್, ಚಕ್‌ಗಳನ್ನು ಪಡೆದುಕೊಳ್ಳುತ್ತಿದೆ. ಈ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಬಂಧಿಸಲಾಗಿದ ಈತನೊಂದಿಗೆ ರಾಜ್ಯದ ಬೇರೆ ಬೇರೆ ಜನರು ಸಂಪರ್ಕದಲ್ಲಿ ಇರುವುದು ತಿಳಿದುಬಂತು. ಯಾರಿಗೂ ಬಾಸ್ ಮಾಡಿಸಿ ಕೊಟ್ಟಿಲ್ಲ, ಆಮಿಷವೂ ಖಾಲಿ ಚೆಕ್‌ಗಳನ್ನು ಪಡೆಯುತ್ತಿದ್ದ, ಈ ಸಂಬಂಧ ಕೆಲವರಿಗೆ ನೊಟೀಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ.
ಬಂಧಿತ ಆರೋಪಿಗೂ ಮತ್ತು ಕೆಪಿಎಸ್‌ಸಿಗೂ ಯಾವುದೇ ಸಂಪರ್ಕ ಇರಲಿಲ್ಲ. ಇದೇ ರೀತಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, 2018ರಲ್ಲಿ ಸಿಸಿಬಿಗೆ ಸೆರೆಸಿಕ್ಕಿದ್ದ ಈ ಬಗ್ಗೆ ತನಿಖೆ ಮುಂದುವರಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.
ಇದನ್ನೂ ನೋಡಿ: ಕುವೆಂಪು 120| lವಿಚಾರ ಕ್ರಾಂತಿಗೆ ಆಹ್ವಾನ : ಹಿಂದಿ ಹೇರಿಕೆಯ ಭಾಷೆ Janashakthi Media