ಮಂಗಳೂರು: ಸಂವಿಧಾನ ವಿರೋಧಿಸಿ ಹೇಳಿಕೆ ನೀಡಿದ ಉಡುಪಿ ಪೇಜಾವರ ಮಠದ ಸ್ವಾಮೀಜಿರವರ ಮೇಲೆ ಸ್ವಯಂ ಪ್ರೇರಿತ ದೂರನ್ನು ನಗರದ ಪೋಲಿಸ್ ಕಮೀಷನರ್ ಗೆ ತಾಕತ್ತಿದ್ದರೆ ದಾಖಲಿಸಲಿ. ಅದು ಬಿಟ್ಟು ಸಂವಿಧಾನದ ಉಳಿವಿಗಾಗಿ ಹೋರಾಟ ನಡೆಸುತ್ತಿರುವ ಚಳುವಳಿಗಾರರಾದ ಮುನೀರ್ ಕಾಟಿಪಳ್ಳ ರವರ ಮೇಲಲ್ಲ ಎಂದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರಮಾಸ್ತರ್ ಸವಾಲು ಹಾಕಿದ್ದಾರೆ. ಪ್ರತಿಭಟನೆ
ನೀವೂ ಸಂವಿಧಾನದ ಅಡಿಯಲ್ಲೇ ಕೆಲಸ ಮಾಡಬೇಕಾಗಿರುವವರು. ಸಂಘ ಪರಿವಾರದವರ ಆಣತಿಯಂತೆ ಅಲ್ಲಾ. ಸಂವಿಧಾನದ ಆಶಯದಂತೆ ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸಿದರೆ ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರಾ ? ಇದು ಪೋಲಿಸ್ ಗೂಂಡಾ ರಾಜ್ಯ ಅಲ್ಲ ಎಂದರು.
ಸಮಾಜದ ಅಂಕುಡೊಂಕುಗಳ ಬಗ್ಗೆ , ಜನಪ್ರತಿನಿಧಿಗಳ ವೈಫಲ್ಯದ ಬಗ್ಗೆ , ಪ್ರಜೆಗಳ ಮೂಲ ಭೂತ ಅವಶ್ಯಕತೆಗಳ ಬಗ್ಗೆ ಚಳವಳಿ ನಡೆಸಿದರೆ ಅದು ನಿಮಗೆ ಕಾನೂನು ಬಾಹಿರವಾಗಿ ಕಾಣುತ್ತದೋ ? ಪ್ರತಿಭಟನೆಗೆ ಅವಕಾಶ ನಿರಾಕರಿಸಿ , ಪ್ರಜಾಪ್ರಭುತ್ವ ವಿರೋಧಿ ಪೋಲೀಸ್ ಸೇವೆ ನಡೆಸುವುದು ಜನವಿರೋಧಿ ನೀತಿಯಾಗುತ್ತದೆ ಎಂದರು.
ಇದನ್ನೂ ಓದಿ: ಎಪ್ಪತ್ತೈದರ ಹರೆಯದಲ್ಲಿ ನಮ್ಮ ಸಂವಿಧಾನಕ್ಕೆ ಮುತ್ತಿಗೆ
ಎಲ್ಲಿ ನ್ಯೂನತೆಗಳಿವೆಯೋ ಅಲ್ಲೇ ಪ್ರತಿಭಟನೆ ನಡೆಸಬೇಕೇ ಹೊರತು, ರಸ್ತೆ ದುರಸ್ತಿ ಮಾಡಿ ಎಂದು ಸ್ಟಾರ್ ಹೋಟೆಲ್ ಒಳಗೆ ಕೂತು ಮಾಡುವುದಲ್ಲ.ನಮ್ಮದು ಪ್ರಜಾಪ್ರಭುತ್ದ ದೇಶ ಇದು ಹಿಟ್ಲರನ ಜರ್ಮನಿ ಅಲ್ಲಾ ಎಂದು ಹೇಳಿದ್ದಾರೆ.
ಮಾನ್ಯ ಮುಖ್ಯ ಮಂತ್ರಿಯವರು ಈ ಕೂಡಲೇ ಮಂಗಳೂರಿನ ಕಮೀಷನರ್ ಅಗರವಾಲ್ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಮತ್ತು ಮುನೀರ್ ಕಾಟಿಪಳ್ಳ ಮೇಲೆ ಹಾಕಿದ ಕೇಸನ್ನು ಈ ಕೂಡಲೇ ವಾಪಾಸು ಪಡೆಯಬೇಕೆಂದು ಆಗ್ರಹಿಸುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ನೋಡಿ: ಪ್ರತಿ 10 ನಿಮಿಷಕ್ಕೆ ಒಬ್ಬ ಮಹಿಳೆ ಕೊಲ್ಲಲ್ಪಡುತ್ತಿದ್ದಾಳೆ ; ಮನೆಯಲ್ಲೂ ಮಹಿಳೆಗೆ ಸುರಕ್ಷತೆ ಇಲ್ಲJanashakthi Media