ರಾಯಚೂರು: ಪವರ್ ಸ್ಟಾರ್ ದಿವಂಗತ ಪುನೀತ್ ರಾಜಕುಮಾರ್ ಜನ್ಮದಿನ ಹಿನ್ನೆಲೆ ರಾಯಚೂರು ಜಿಲ್ಲೆಯ ಹಟ್ಟಿ ಪಟ್ಟಣದಲ್ಲಿ ಅಭಿಮಾನಿಗಳು ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದರು. ಪುನೀತ್ ರಾಜಕುಮಾರ್ ಅಪ್ಪಟ ಅಭಿಮಾನಿಯಾಗಿರುವ ಪೊಲೀಸ್ ಅಧಿಕಾರಿ ಹಟ್ಟಿ ಪೊಲೀಸ್ ಠಾಣೆ ಪಿಐ ಹೊಸಗೆರೆಪ್ಪ ಅಪ್ಪು ಹುಟ್ಟು ಹಬ್ಬ ಹಿನ್ನೆಲೆ ಕೇಕ್ ಕತ್ತರಿಸಿ ಸಂಭ್ರಮಿಸಿದರು ,ಅನ್ನದಾನ ಮಾಡಿ ಅಭಿಮಾನ ಮೆರೆದರು.ಇದನ್ನು ಓದಿ:ಕರ್ನಾಟಕ ಬಜೆಟ್: ಅದು ಸುಸ್ಥಿರ ಹಾದಿಯಲ್ಲಿದೆಯೆ?
ಹಟ್ಟಿ ನಿವಾಸಿಗಳು ಹಾಗೂ ಅಪ್ಪು ಅಭಿಮಾನಿಗಳೊಂದಿಗೆ ಸಂಭ್ರಮಾಚರಣೆ ಮಾಡಿದರು. ಅಪ್ಪು ಅಭಿನಯದ ವಂಶಿ ಸಿನೆಮಾದಲ್ಲಿ ಕಾಣಿಸಿಕೊಂಡಿರುವ ಪಿಐ ಹೊಸಗೆರೆಪ್ಪ, ವಂಶಿ ಸಿನಿಮಾದಲ್ಲಿ “ಭುವನಂ ಗಗನಂ ಸಕಲಂ ಶರಣಂ” ಎಂಬ ಹಾಡಿನಲ್ಲಿ ಅಪ್ಪು ಪಕ್ಕದಲ್ಲೇ ಕಾಣಿಸಿಕೊಂಡಿದ್ದಾರೆ.
ಸಿನೆಮಾದಲ್ಲಿ 50 ಜನ ನಿಜವಾದ ಪೋಲಿಸ್ ಟ್ರೇನಿಗಳಿಗೆ ಅವಕಾಶ ನೀಡಲಾಗಿತ್ತು. ಸಬ್ ಇನ್ಸಪೆಕ್ಟರ್ ಟ್ರೇನಿಂಗ್ ನಲ್ಲಿದ್ದ ಹೊಸಗೆರೆಪ್ಪ ಸಿನೆಮಾದಲ್ಲಿ ನಟಿಸಿದ್ದರು. ಈ ಮೊದಲು ಸಹ ಅಭಿಮಾನಿಯಾಗಿದ್ದ ಹೊಸಗೆರೆಪ್ಪ
ಪುನೀತ್ ಹುಟ್ಟು ಹಬ್ಬ ಹಿನ್ನೆಲೆ ಹಟ್ಟಿ ಪಟ್ಟಣದಲ್ಲಿ ಅನ್ನದಾನ ಮಾಡಿ ಅಭಿಯಾನ ಮೆರೆದಿದ್ದಾರೆ.ಇದನ್ನೂ ಓದಿ:ಕಾಡುವ ವಲಸಿಗ ಫಿಲಂಗಳು -1: ‘ಕಾಣದ ನಾಡಿನತ್ತ’ ಮತ್ತು ‘ಸುಲೈಮಾನ್ ಕತೆ’