ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ ಯೋಜನೆ ಅನುಷ್ಠಾನಕ್ಕೆ ಅನುಮೋದನೆ | ರೈತರ ಭೂಮಿ ಕಸಿದುಕೊಳ್ಳಲು ಸಿದ್ಧತೆ

ಬೆಂಗಳೂರು: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ (ಪೆರಿಫೆರಲ್‌ ರಿಂಗ್‌ ರಸ್ತೆ) ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಭೂಮಿ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ಅನುಮೋದನೆ ನೀಡಿದ್ದು, ಮತ್ತೊಮ್ಮೆ ರೈತರಿಂದ ಭೂಮಿಯನ್ನು ಕಸಿದುಕೊಳ್ಳಲು ಸರಕಾರ ಸಿದ್ಧತೆ ನಡೆಸಿದೆ.

ಬೆಂಗಳೂರಿನಲ್ಲಿ ಉಂಟಾಗುವ ಸಂಚಾರ ದಟ್ಟಣೆ ನಿಯಂತ್ರಿಸಲು ತುಮಕೂರು ರಸ್ತೆಯಿಂದ ಮೈಸೂರು ರಸ್ತೆಗೆ ವರ್ತುಲ ರೀತಿಯಲ್ಲಿ ಸಂಪರ್ಕ ಕಲ್ಪಿಸುವ 73 ಕಿಮೀ ಉದ್ದ ಮತ್ತು 100 ಮೀ. ಅಗಲದ ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ 948.14 ಎಕರೆ ಭೂಮಿ ಸ್ವಾಧೀನಕ್ಕೆ ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು. ಕಳೆದ ಅಕ್ಟೋಬರ್‌ 17ರಂದು ಬಿಡಿಎ ಹೊರಡಿಸಿದ್ದ ಅಧಿಸೂಚನೆಯಂತೆ ಭೂ ಮಾಲೀಕರಿಗೆ ಪರಿಹಾರ ನೀಡಲು ತೀರ್ಮಾನಿಸಲಾಯಿತು.

ಪೆರಿಫೆರಲ್‌ ರಿಂಗ್‌ ರಸ್ತೆ ಹೈ-ತೀರ್ಪು ಮತ್ತು ಬಿಡಿಎ ಆದೇಶದಂತೆ ಭೂ ಮಾಲೀಕರಿಗೆ ಪರಿಹಾರ ಪಡೆಯಲು ಕೆಲ ಆಯ್ಕೆಗಳನ್ನು ನೀಡಲಾಗಿದೆ. 20 ಗುಂಟೆ ಒಳಗಿನ ಭೂಮಿಗೆ ಸರ್ಕಾರ ನಗದು ಪರಿಹಾರ ನೀಡಲಿದೆ. ಅದಕ್ಕಿಂತ ಹೆಚ್ಚಿನ ಭೂಮಿ ಹೊಂದಿರುವವರಿಗೆ ಪರಿಹಾರಕ್ಕಾಗಿ 4 ಆಯ್ಕೆ ನೀಡಲಾಗಿದೆ. ಅದರ ಪ್ರಕಾರ ನಗರ ಭಾಗದಲ್ಲಿನ ಭೂಮಿಗೆ ಮಾರುಕಟ್ಟೆ ದರಕ್ಕಿಂತ 2 ಪಟ್ಟು, ಗ್ರಾಮೀಣ ಭಾಗದಲ್ಲಿನ ಭೂಮಿಗೆ ಮಾರುಕಟ್ಟೆ ದರದ 3 ಪಟ್ಟು ಪರಿಹಾರ ನೀಡಲಾಗುತ್ತದೆ.

ಇದನ್ನೂ ಓದಿ: ಚೆನ್ನೈ| ಗುಬ್ಬಚ್ಚಿಗಳಿಗಾಗಿ 15 ಸಾವಿರ ಗೂಡುಗಳನ್ನು ನಿರ್ಮಿಸಿದ ಕೂಡುಗಲ್ ಟ್ರಸ್ಟ್

ಅದನ್ನು ಒಪ್ಪದಿದ್ದರೆ ಟಿಡಿಆರ್‌ ಅಥವಾ ನೆಲ ವಿಸ್ತೀರ್ಣ ಅನುಪಾತ (ಎಫ್‌ಎಆರ್‌) ನೀಡುವುದು. ಅದಕ್ಕೂ ಭೂ ಮಾಲೀಕರು ನಿರಾಕರಿಸಿದರೆ ಭೂಮಿ ವಿಸ್ತೀರ್ಣದ ಶೇ.35ರಷ್ಟು ಭಾಗದ ವಾಣಿಜ್ಯ ಭೂಮಿ ಅಥವಾ ವಸತಿ ಪ್ರದೇಶದಲ್ಲಿ ಶೇ.40ರಷ್ಟು ಅಭಿವೃದ್ಧಿ ಹೊಂದಿದ ಭೂಮಿ ನೀಡಲಾಗುತ್ತದೆ. ಈ ಆದೇಶದಂತೆ ರೈತರಿಗೆ ಪರಿಹಾರ ನೀಡಿ ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ಗೆ ಅಗತ್ಯವಿರುವ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

ಇದನ್ನೂ ನೋಡಿ: ಉತ್ತರ ಪ್ರದೇಶದ ಬುಲ್ಡೋಜರ್ ನೀತಿ ಕರ್ನಾಟಕಕ್ಕೂ ಬೀಸಿತೆ!? Janashakthi Media

Donate Janashakthi Media

Leave a Reply

Your email address will not be published. Required fields are marked *