ಬೆಂಗಳೂರು | ಕಡಲೆಕಾಯಿ ಪರಿಷೆಗೆ ಇಂದು ಚಾಲನೆ : ಪ್ಲ್ಯಾಸ್ಟಿಕ್ ಬಳಸಿದರೆ ಸೂಕ್ತ ಕ್ರಮ – ಸಚಿವ ರಾಮಲಿಂಗಾ ರೆಡ್ಡಿ 

ಬೆಂಗಳೂರು:  ಐತಿಹಾಸಿಕ ಇತಿಹಾಸವಿರುವ ಬಸವನಗುಡಿ ಕಡಲೆಕಾಯಿ ಪರಿಷೆಗೆ   ಇಂದು ಚಾಲನೆ ನೀಡಲಾಗಿದ್ದು, ಪ್ಲಾಸ್ಟಿಕ್‌ ಬಳಕೆ ಮಾಡುವ ಅಂಗಡಿಗಳನ್ನ ಎತ್ತಂಗಡಿ ಮಾಡಲಾಗುತ್ತದೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ  ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ಬೆಂಗಳೂರು | ಕೃಷಿ ಮೇಳ ಮುಕ್ತಾಯ : ನಾಲ್ಕು ದಿನದ ಕೃಷಿ ಮೇಳಕ್ಕೆ ಲಕ್ಷಾಂತರ ಜನ ಭೇಟಿ

ಈ ವರ್ಷ ಬಹಳ ವಿಶೇಷವಾಗಿ ಮಾಡಲಾಗುತ್ತಿದೆ. 5 ಬಸವಗಳಿಗೆ ಕಡಲೆಕಾಯಿ ತಿನ್ನಿಸುವ ಮೂಲಕ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಲಾಗಿದೆ. ಸಂಸದ ತೇಜಸ್ವಿ ಸೂರ್ಯ, ರವಿ ಸುಬ್ರಹ್ಮಣ್ಯ ಸೇರಿದಂತೆ ಅನೇಕ ಗಣ್ಯರು ಇದರಲ್ಲಿ ಭಾಗವಹಿಸಿದ್ದಾರೆ. ಯಾವಾಗಿನಂತೆ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಮಾಡದಂತೆ ನಿಷೇದ ಹೇರಲಾಗಿದೆ. ಯಾರಾದರೂ ಬಳಕೆ ಮಾಡುವುದು ಕಂಡು ಬಂದರೆ ಅವರ ಅಂಗಡಿಗಳನ್ನ ಎತ್ತಂಗಡಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಕಡಲೆಕಾಯಿ ಪರಿಷೆಗೆ ಸುಮಾರು 500 ವರ್ಷಗಳ ಇತಿಹಾಸ ಇದೆ. ಮೊದಲು ಇದನ್ನ ಸಣ್ಣ ಪ್ರಮಾಣದಲ್ಲಿ ಮಾಡಲಾಗುತ್ತಿತ್ತು. ಸುತ್ತ-ಮುತ್ತಲಿನ ಹಳ್ಳಿಗಳ ರೈತರು ಕಡಲೆಕಾಯಿ ಬೆಳೆ ಬಂದ ನಂತರ ಬಂದು ದೊಡ್ಡ ಗಣಪತಿಗೆ ಅರ್ಪಣೆ ಮಾಡಿ ಪೂಜೆ ಮಾಡುತ್ತಿದ್ದರು.  ಈ ಪರಿಷೆಯ ಇತಿಹಾಸದ ಬಗ್ಗೆ ನಾನು ಸಹ ಒಂದು ಡಾಕ್ಯೂಮೆಂಟರಿ ಮಾಡಿಸಿದ್ದೆ ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಈ ರೀತಿಯ ಜಾತ್ರೆ ಹಾಗೂ ಕಾರ್ಯಕ್ರಮಗಳಲ್ಲಿ ಅಂಗಡಿಗಳನ್ನ ತೆರೆಯಲು ಶುಲ್ಕ ನೀಡಬೇಕಾಗುತ್ತದೆ. ಆದರೆ ಈ ಬಾರಿ ಶುಲ್ಕ ರಹಿತವಾಗಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ. ಈಗಾಗಲೇ ಸಾವಿರಾರು ಅಂಗಡಿಗಳನ್ನ ಹಾಕಲಾಗಿದೆ. ಈ ಹಣವನ್ನ ಸಂಗ್ರಹ ಮಾಡುವುದರಲ್ಲಿ ಬಹಳ ಕಿರಿಕಿರಿ ಆಗುತ್ತದೆ. ಅಧಿಕಾರಿಗಳಿಗೆ ಹಾಗೂ ವ್ಯಾಪಾರಿಗಳಿಗೆ ಸಮಸ್ಯೆ ಆಗುತ್ತದೆ. ಅಲ್ಲದೇ, ರೈತರು ಬಂದು ವ್ಯಾಪಾರ ಮಾಡುವುದರಿಂದ ಅವರಿಗೆ ಒಳ್ಳೆಯದಾಗಲಿ ಎನ್ನುವ ಕಾರಣಕ್ಕೆ ಈ ಬಾರಿ ತೆರಿಗೆಯನ್ನ ವಿಧಿಸಲಾಗುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ನೋಡಿ : ಕಡಲೆಕಾಯಿ ಪರಿಷೆಗೆ ಶೃಂಗಾರಗೊಳ್ಳುತ್ತಿದೆ ಬಸವನಗುಡಿ |17 ರಿಂದ 21 | Janashakthi Media| #kadalekaiparishe

Donate Janashakthi Media

Leave a Reply

Your email address will not be published. Required fields are marked *