4 ಹುಲಿಗಳ ಅಸಹಜ ಸಾವು: ತನಿಖಾ ವರದಿ ಬಳಿಕ ಸೂಕ್ತ ಕ್ರಮ – ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ನಾಲ್ಕು ಹುಲಿಗಳು ಅಸಹಜವಾಗಿ ಸಾವನ್ನಪ್ಪಿರುವಂತಹ ಆಘಾತಕಾರಿ ಘಟನೆಯ ಬಗ್ಗೆ ಜೂನ್‌ 26 ಗುರುವಾರದಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಚಾಮರಾಜನಗರದಲ್ಲಿ ನಾಲ್ಕು ಹುಲಿಗಳ ಸಾವಿಗೆ ಸಂಬಂಧಪಟ್ಟಂತೆ ತನಿಖೆಗೆ ಸೂಚಿಸಲಾಗಿದೆ. ತನಿಖಾ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮಾದಕ ದ್ರವ್ಯ ಸೇವನೆ: ತಮಿಳು ನಟ ಕೃಷ್ಣ ಬಂಧನ

ಘಟನೆಗೆ ಸಂಬಂಧಪಟ್ಟಂತೆ ಎಕ್ಸ್‌ ಪೋಸ್ಟ್‌ನಲ್ಲಿ ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ಈಶ್ವರ್‌ ಖಂಡ್ರೆ, ಮಲೆ ಮಹದೇಶ್ವರ ಬೆಟ್ಟದಲ್ಲಿ 4 ಹುಲಿಗಳ ಅಸಹಜ ಸಾವು ತೀವ್ರ ದುಃಖಕರ. ಪಿಸಿಸಿಎಫ್‌ ನೇತೃತ್ವದ ತನಿಖಾ ತಂಡ ರಚಿಸಿ, 3 ದಿನಗಳಲ್ಲಿ ವರದಿ ಕೋರಲಾಗಿದೆ. ನಿರ್ಲಕ್ಷ್ಯವಿದ್ದರೆ ಅಥವಾ ಯಾವುದೇ ಕಾರಣಕ್ಕಾಗಿಯೂ ಹುಲಿಗಳು ಸಾವಿಗೀಡಾಗಿದ್ದರೆ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ತಾಯಿ ಹುಲಿ ಹಾಗೂ ಮೂರು ಮರಿಗಳು ಸಾವನ್ನಪ್ಪಿರುವುದು ಬೆಳಕಿಗೆ. ನಂದಿದೆ. ಮೇಲ್ನೋಟಕ್ಕೆ ಹುಲಿಗಳಿಗೆ ವಿಷ ನೀಡಿರುವುದಾಗಿ ವರದಿಗಳು ತಿಳಿಸಿವೆ.

ಇದನ್ನೂ ನೋಡಿ: ಘೋಷಿತ ತುರ್ತು ಪರಿಸ್ಥಿತಿ ಮತ್ತು ಅಘೋಷಿತ ತುರ್ತು ಪರಿಸ್ಥಿತಿಯ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ತೆರೆದಿಡುವ ಪುಸ್ತಕ

Donate Janashakthi Media

Leave a Reply

Your email address will not be published. Required fields are marked *