ಅತಿಥಿ ಶಿಕ್ಷಕರ ನೇಮಕ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಮಾರಕ – ಖಾಯಂ ಶಿಕ್ಷಕರ ನೇಮಕಕ್ಕೆ ಒತ್ತಾಯ :ಪಾಫ್ರೆ

ಬೆಂಗಳೂರು: ರಾಜ್ಯ ಸರ್ಕಾರ 51,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಹೊರಟಿರುವ ಪ್ರಕ್ರಿಯೆ ಕುರಿತು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜಾನಂದೋಲನಗಳ ಸಮನ್ವಯ ಸಮಿತಿ ಇದು ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಮಾರಕವಾಗಿದ್ದು, ಖಾಲಿ ಹುದ್ದೆಗಳಿಗೆ ಖಾಯಂ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭಿಸಬೇಕೆಂದು ಒತ್ತಾಯಿಸಿದೆ.

ರಾಜ್ಯ ಸರ್ಕಾರ ಈಗಾಗಲೇ ಪ್ರಾಥಮಿಕ ಶಾಲೆಗಳಿಗೆ 40000 ಮತ್ತು ಪ್ರೌಢ ಶಾಲೆಗಳಿಗೆ 11000, ಒಟ್ಟು 51000 ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆಯ ಅನುಮೋದನೆಯನ್ನು ಸರ್ಕಾರ 2025-26 ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಸೀಮಿತಗೊಳಿಸುವುದು ಸೂಕ್ತವೆಂದು ಅಭಿಪ್ರಾಯಪಡುತ್ತದೆ .

ಇದನ್ನು ಓದಿ:ಆರೋಗ್ಯ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆ; ಆನ್‌ಲೈನ್ ಮೂಲಕ ಅರ್ಜಿಗಳ ಆಹ್ವಾನ

ಆರ್ಥಿಕ ಇಲಾಖೆ ಅನುಮೋದನೆ ನೀಡಿರುವುದು ಈಗಾಗಲೇ ತುಂಬಾ ತಡವಾಗಿದ್ದು ,ಮೇ 29 ರಿಂದ ಶಾಲೆಗಳು ಪ್ರಾರಂಭವಾಗಲಿವೆ.
ಪ್ರಾರಂಭದಲ್ಲಿಯೇ ಮಕ್ಕಳ ಪ್ರವೇಶ, ಶಾಲಾ ಸಿದ್ಧತೆ , ಸೇತುಬಂಧ ಮತ್ತು ಶಿಕ್ಷಣದ ಪ್ರಾರಂಭಕ್ಕೆ ತೊಂದರೆಯಾಗುತ್ತದೆ . ಆದ್ದರಿಂದ, ಈಗಾಗಲೇ ಕಳೆದ ವರ್ಷ ಕಾರ್ಯ ನಿರ್ವಹಿಸುತ್ತಿದ್ದ ಅತಿಥಿ ಶಿಕ್ಷಕರನ್ನು ಮೇ 29 ರಿಂದಲೇ ಕಾರ್ಯ ನಿರ್ವಹಿಸುವಂತೆ ಕ್ರಮವಹಿಸಿ , ಉಳಿದ ಅತಿಥಿ ಶಿಕ್ಷಕರು ಕನಿಷ್ಠ ಜೂನ್ ಮೊದಲ ವಾರದಲ್ಲಿ ಶಾಲೆಗಳಲ್ಲಿ ಲಭ್ಯವಿರುವಂತೆ ಕ್ರಮವಹಿಸಲು ಆರ್ಥಿಕ ಇಲಾಖೆಯ ಅನುಮೋದನೆಯನ್ನು ತ್ವರಿತವಾಗಿ ಜಾರಿಗೊಳಿಸಲು ಶಿಕ್ಷಣ ಇಲಾಖೆ ತಕ್ಷಣ ಪ್ರಕ್ರಿಯೆ ಪ್ರಾರಂಭಿಸಬೇಕೆಂದು ತಿಳಿಸಿದೆ.

ಇದೇ ಸಂದರ್ಭದಲ್ಲಿ, ಸರ್ಕಾರದ ಅನುಮೋದನೆಯ ಆದೇಶದಲ್ಲಿಯೇ ಹೇಳಿರುವಂತೆ, ಅತಿಥಿ ಶಿಕ್ಷಕರ ನೇಮಕಾತಿ ಕೇವಲ ತಾತ್ಕಾಲಿಕ ವ್ಯವಸ್ಥೆಯಾಗಿದ್ದು ಶಿಕ್ಷಕರಿಗೆ ಯಾವುದೇ ಸೇವಾ ಭದ್ರತೆಯಿಲ್ಲದ ಕಾರಣ ಅದು ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ. ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವ ಮೂಲಕ ಪ್ರತಿಯೊಂದು ಶಾಲೆಯನ್ನು ನೆರೆಹೊರೆಯ ಸಮಾನ ಶಾಲೆಯನ್ನಾಗಿ ಪರಿವರ್ತಿಸಿ ಎಲ್ಲಾ ಮಕ್ಕಳಿಗೆ ಸಮಾನ ಗುಣಮಟ್ಟದ ಶಿಕ್ಷಣ ಒದಗಿಸಬೇಕಾದರೆ ಎಲ್ಲಾ ಶಾಲೆಗಳಲ್ಲಿ ಖಾಯಂ ಶಿಕ್ಷಕರ ಅಗತ್ಯವಿದೆ. ಆದ್ದರಿಂದ , ಸರ್ಕಾರ ಈ ಎಲ್ಲಾ 51000 ಹುದ್ದೆಗಳಿಗೆ ಖಾಯಂ ನೇಮಕಾತಿ ಮಾಡಲು ಕೂಡಲೇ ಕ್ರಮವಹಿಸಬೇಕೆಂದು ಎಂದಿದೆ .

ತಾತ್ಕಾಲಿಕವಾಗಿ, ಈಗ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರಿಗೆ ಕ್ರಮವಾಗಿ ನಿಗದಿಗೊಳಿಸಿರುವ ತಲಾ ರೂ .12000 ಮತ್ತು 12500 ಗೌರವಧನವನ್ನು, ಸಂವಿಧಾನದ ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಕೌಶಲಾಧಾರಿತ ಕೆಲಸಕ್ಕೆ ಕನಿಷ್ಠ ವೇತನದ ಆಶಯದಂತೆ ಕನಿಷ್ಠ ರೂ. 20000 ಮತ್ತು 22000 ವೆಂದು ಮರು ನಿಗದಿಗೊಳಿಸಬೇಕೆಂದು ಎಂದು ತಿಳಿಸಿದೆ.

ಇದನ್ನು ಓದಿ:ಕಾನೂನು ಪದವಿ ಪರೀಕ್ಷೆಗಳನ್ನು ಪಾರದರ್ಶಕತೆಯಿಂದೆ ನಡೆಸಿ, ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಲು ಕಾನೂನು ರೂಪಿಸಿ – ಬಸವರಾಜ ಎಸ್

Donate Janashakthi Media

Leave a Reply

Your email address will not be published. Required fields are marked *