ವಿಧಾನಸಭೆ,ವಿಧಾನ ಪರಿಷತ್‌ಗೆ ಮುಖ್ಯ ಸಚೇತಕರ ನೇಮಕ

ಬೆಂಗಳೂರು: ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಮುಖ್ಯ ಸಚೇತಕರಾಗಿ ಶಾಸಕ ಅಶೋಕ ಪಟ್ಟಣ್‌ ಅವರನ್ನು ನೇಮಕ ಮಾಡಲಾಗಿದೆ. ವಿಧಾನ ಪರಿಷತ್‌ನ ಮುಖ್ಯ ಸಚೇತಕರಾಗಿ ಕಾಂಗ್ರೆಸ್‌ ನಾಯಕ ಸಲೀಂ ಅಹ್ಮದ್‌ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ಟಿ.ಬಿ ಜಯಚಂದ್ರ ಅವರು ಸೇವೆ ಸಲ್ಲಿಸಲಿದ್ದಾರೆ.

ಇದನ್ನೂ ಓದಿ:ಮುಂದಿನ ವಾರ ಕಾಂಗ್ರೆಸ್‌ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಗೆ ಸಿದ್ಧತೆ : ಮಾ.15 ರಂದು ಮಹತ್ವದ ಸಭೆ

ಅಶೋಕ್‌ ಪಟ್ಟಣ ಅವರು ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದು ಚೀಫ್‌ ವಿಫ್‌ ಆಯ್ಕೆಯಲ್ಲಿ ಸಿದ್ದರಾಮಯ್ಯ ಅವರ ಕೈ ಮೇಲಾಗಿದೆ. ಸಲೀಂ ಅವರು ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ನಾಯಕರಾಗಿದ್ದು ಮೇಲ್ಮನೆಯಲ್ಲಿ ಪಕ್ಷದ ಶಾಸಕ ಚಟುವಟಿಕೆಗಳ ಮೇಲೆ ನಿಗಾ ಇಡಲಿದ್ದಾರೆ.

ಇಂದು ಕಾಂಗ್ರೆಸ್‌ ನೇತೃತ್ವದ ನೂತನ ಸರ್ಕಾರ ಅಸ್ತತ್ವಕ್ಕೆ ಬಂದ ಮೇಲೆ ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿದ್ದು ಅಧಿವೇಶನಕ್ಕೆ ಮುನ್ನ ಕಾಂಗ್ರೆಸ್‌ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಮುಖ್ಯ ಸಚೇತಕರ ಆಯ್ಕೆಯನ್ನು ಘೋಷಿಸಿದೆ.

Donate Janashakthi Media

Leave a Reply

Your email address will not be published. Required fields are marked *