ವಿಕಲಚೇತನರಿಗೆ ಪುನರ್ ವಸತಿ ಮತ್ತು ಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಧಿಕಾರಿಗಳಿಗೆ ಮನವಿ

ಹಾವೇರಿ: ವಿಕಲಚೇತನರಿಗೆ ಪುನರ್ ವಸತಿ ಮತ್ತು ಸೌಲಭ್ಯಗಳನ್ನು ಕಲ್ಪಿಸಲು ಒತ್ತಾಯಿಸಿ, ಅನ್ಯಾಯ ವೆಸಗಿದ ಕಲ್ಮೇಶ್ವರ ಸಂಸ್ಥೆ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ, ಶಾಶ್ವತ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ವಿಕಲಚೇತನರಿಗೆ ಪುನರ್ ವಸತಿ ಮತ್ತು ಸೌಲಭ್ಯಗಳನ್ನು ಕಲ್ಪಿಸಲು ಒತ್ತಾಯಿಸಿ, ಅನ್ಯಾಯ ವೆಸಗಿದ ಕಲ್ಮೇಶ್ವರ ಸಂಸ್ಥೆ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ, ಶಾಶ್ವತ ಪರಿಹಾರಕ್ಕಾಗಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಬೆಂಬಲದೊಂದಿಗೆ ವಿಕಲಚೇತನರು ಮಾನ್ಯ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ ಅವರಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಮನವಿ ಪತ್ರ ಸಲ್ಲಿಸಿದರು.

ಇದನ್ನೂ ಓದಿ:-ಶೀತನಿದ್ರೆ: ಪ್ರಾಣಿಪ್ರಪಂಚದ ಮತ್ತೊಂದು ವಿಸ್ಮಯ!

ಹತ್ತಾರು ವರ್ಷಗಳಿಂದ ಆಶ್ರಯ ನೀಡಿ ಅನೇಕ ವಿಕಲಚೇತನ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರ ಶಿಕ್ಷಣ, ಉದ್ಯೋಗ ಸೇರಿದಂತೆ ಸ್ವತಂತ್ರರಾಗಿ ಘನತೆ ಬದುಕು ಕಟ್ಟಿಕೊಳ್ಳಲು ಸಹಾಯಕಾರಿಯಾಗಿದ್ದ ಕಲ್ಮೇಶ್ವರ ವಿದ್ಯಾ ಸಂಸ್ಥೆಯು ಸರ್ಕಾರದ ಯಾವುದೇ ಆದೇಶಗಳಿಲ್ಲದೆ ಏಕಾಏಕಿ ವಸತಿ ನಿಲಯದಲ್ಲಿದ್ದ ಐದು ಜನ ವಿಕಲಚೇತನರನ್ನು ಹೊರದೂಡುವ ಕಾರ್ಯವನ್ನು ಎಸ್ಎಫ್ಐ ಹಾವೇರಿ ಜಿಲ್ಲಾ ಸಮಿತಿಯು ಹಾಗೂ ಅಂಗವಿಕಲರ ಒಕ್ಕೂಟವು ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.

ವಿದ್ಯಾರ್ಥಿನಿ ಹೇಮಾ ಪ್ರಕಾಶ್ ಮಾತನಾಡಿ, ನೂರಾರು ಕನಸುಗಳನ್ನು ಕಟ್ಟಿಕೊಂಡು ಸ್ವಂತ ಕಾಲಮೇಲೆ ನಿತ್ತು ಘನತೆ ಜೀವನವನ್ನು ರೂಪಿಸಿಕೊಳ್ಳಬೇಕೆಂಬ ಆಸೆಗೆ ಆಶ್ರಯ ಬೇಕಿದೆ. ಸರ್ಕಾರದ ಅನುದಾನ ಬರುತ್ತಿಲ್ಲ ಎಂದು ಸಂಸ್ಥೆ ಮುಖ್ಯಸ್ಥರು ನಿಮ್ಮ ಮನೆಗಳಿಗೆ ಹೋಗಿ ಎಂದಿದ್ದಾರೆ. ಮನೆಗೆ ಹೋದರೆ ಸಮಾಜದಲ್ಲಿ ಬದುಕುವುದು ಬಹಳಷ್ಟು ಕಷ್ಟವಾಗುತ್ತದೆ. ಬಸ್ ಗಳಲ್ಲಿ, ರಸ್ತೆಗಳಲ್ಲಿ ವಿಪರೀತ ಜನಸಂದಣಿಯ ಮಧ್ಯೆ ಓಡಾಡಲು ಕಷ್ಟವಾಗುತ್ತದೆ ಎಂದು ತಿಳಿಸಿದರು.

ಈ ಹಿಂದೆ ಎಸ್ಎಫ್ಐ ಹೋರಾಟ ಹಾಗೂ ಮಾಧ್ಯಮದವರು ವರದಿ ಮಾಡುವ ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಶ್ರೀನಿವಾಸ ಅಲದರ್ತಿ ಅವರು ಕಲ್ಮೇಶ್ವರ ಸಂಸ್ಥೆ ಮುಖ್ಯಸ್ಥ ದಯಾನಂದ ಅವರಿಗೆ ದೂರವಾಣಿ ಸಂಪರ್ಕ ಮಾಡಿ ಯಾವುದೇ ಕಾರಣಕ್ಕೂ ವಿಕಲಚೇತನರನ್ನು ಹೊರಗಡೆ ಕಳಿಸಬೇಡಿ ಎಂದು ತರಾಟೆಗೆ ತೆಗೆದುಕೊಂಡರು. ತಾವೇ ಸ್ವತಃ ಗುಂಟ್ಟುಮುಟ್ಟೆಗಳನ್ನು ಒಳಗಡೆ ಇರಿಸಿದರು. ವಿಕಲಚೇತನರಿಗೆ ಯಾವುದೇ ತೊಂದರೆ ನೀಡಿದಂತೆ ಕ್ರಮಕೈಗೊಳಲಾಗುವುದು ಎಂದು ಭರವಸೆ ನೀಡಿದರು. ಆದರೆ ಈಗ ಎಪ್ರಿಲ್ 1 ರಿಂದ ಸಂಸ್ಥೆಯನ್ನು ಮುಚ್ಚುತ್ತೇವೆ ಎಂದು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ:-ಮಹಾನಗರ ಪಾಲಿಕೆಯ 35 ಸದಸ್ಯರ ಸದಸ್ಯತ್ವ ಅನರ್ಹ: ಕಲಬುರಗಿ ಹೈಕೋರ್ಟ್

ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ಅಂಗವಿಕಲ ಸ್ತ್ರೀಯರಿಗೆ ಖಾಯಂ ಪುನರ್ವಸತಿ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡಲು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯಿದೆ 2016 ರ ಜಾರಿಯ ಬಗೆಗಿನ ಜಿಲ್ಲಾ ಕಮಿಷನರಾದ ತಮ್ಮಲ್ಲಿ ಮಾನವೀಯಾಡುತ್ತಿದೇವೆ. ಕೂಡಲೇ ಕಲ್ಮೇಶ್ವರ ಗ್ರಾಮೀಣ ಸಂಸ್ಥೆಯ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಸಂಸ್ಥೆ ಮುಚ್ಚುವುದು ಸರ್ಕಾರದ ನಿಯಮಗಳ ಉಲ್ಲಂಘನೆ ಆಗಿದೆ. ಅನುದಾನ ನೆಪ ಬಿಡಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಅನುದಾನಿತ ಸಂಸ್ಥೆಗಳನ್ನು ಮುಚ್ಚಿ ನೇರವಾಗಿ ಇಲಾಖೆಯೇ ನಿರ್ವಹಣೆ ಮಾಡಬೇಕು ಶಾಶ್ವತ ಪರಿಹಾರವನ್ನು ಒದಗಿಸಬೇಕು ನಿರ್ಲಕ್ಷ್ಯ ವಹಿಸಿದ್ದೆ ಆದಲಿ ಜಿಲ್ಲಾಡಳಿತ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ

ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಇಲಾಖೆಯ ಅಧಿಕಾರಗಳ ಜೊತೆಗೆ ಚರ್ಚೆಸಿ ಪರಿಹಾರ ಕಲ್ಪಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಗಿರಿಜಾ ಗೌಳಿ, ಸುಮಾ ಸಿ ಡಿ, ರೇಖಾ ಎಮ್ ಎಸ್ಎಫ್ಐ ಮುಖಂಡ ಧನುಷ್ ದೊಡ್ಡಮನಿ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *