ಅಪಘಾತ ರಹಿತ ಸೇವೆ ಸಲ್ಲಿಸಿದ 13 ಚಾಲಕರಿಗೆ ಬೆಳ್ಳಿ ಪದಕ, ನಗದು ಪುರಸ್ಕಾರ ವಿತರಣೆ

ಗಜೇಂದ್ರಗಡ : ಜ. 27 : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗಜೇಂದ್ರಗಡ ಘಟಕದಲ್ಲಿ ಅಪಘಾತ ರಹಿತ ಸೇವೆ ಸಲ್ಲಿಸಿದ 13 ಚಾಲಕರಿಗೆ ಬೆಳ್ಳಿ ಪದಕ, ನಗದು ಪುರಸ್ಕಾರ ವಿತರಣಾ ಮತ್ತು ರಸ್ತೆ ಸುರಕ್ಷಿತಾ ಮಾಸಿಕ ಸಮಾರಂಭ ನಡೆಯಿತು.

ಈ ಕಾರ್ಯಕ್ರಮ ಕುರಿತು ಪಿಎಸ್ಐ ಗುರುಶಾಂತ ದಾಶ್ಯಾಳ ಮಾತನಾಡಿ ಅವಸರ ಅಪಘಾತಕ್ಕೆ ಕಾರಣವಾಗಿದ್ದು, ಚಾಲಕರು ಏಕಾಗ್ರತೆಯಿಂದ ಚಾಲನೆ ಮಾಡಬೇಕು, ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸಿ ಸುರಕ್ಷಿತೆ ಜಾಗ್ರತೆ ವಹಿಸದಾಗ ಅಪಘಾತ ತಪ್ಪಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗದಗದ ವಿಭಾಗೀಯ ಸಂಚಲನಾಧಿಕಾರಿ ಜಿ.ಆಯ್. ಬಸಂತಕುಮಾರ ಮಾತನಾಡಿ,  ಇದು ಶಿಸ್ತಿನ ಇಲಾಖೆ ಆಗಿದ್ದು, ಚಾಲಕರು ಕರ್ತವ್ಯವೆ ದೇವರೆಂದು ಭಾವಿಸಿ ಮಾನಸಿಕ ಒತ್ತಡ ಇಲ್ಲದೆ ಆರೋಗ್ಯ ಕಾಪಾಡಿಕೊಂಡು ಚಾಲನೆ ಮಾಡಬೇಕು, ಬಸ್ಸಿನಲ್ಲಿ ಅಶಕ್ತರಿಗೆ ಹತ್ತಲು ಇಳಿಯಲು ಕುಳಿತುಕೊಳ್ಳಲು ಮೊದಲ ಆದ್ಯತೆ ನೀಡಿ ಪ್ರಯಾಣಿಕರು ಪ್ರಭುಗಳೆಂದು ಭಾವಿಸಿದಾಗ ಸಂಸ್ಥೆಯ ಬಗ್ಗೆ ಸಾರ್ವಜನಿಕರಿಗೆ ವಿಸ್ವಾಸ ಮೂಡುತ್ತದೆ ಎಂದರು. ಘಟಕ ವ್ಯವಸ್ಥಾಪಕಿ ಡಿ.ಹೆಚ್.ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೆಳ್ಳಿ ಪದಕ ವಿಜೇತರು:

ಡಿ.ಕೆ.ಮಾಲ್ದಾರ,ವಾಯ್.ಕೆ.ಭಜಂತ್ರಿ, ಎನ್. ಎಸ್. ಕುಷ್ಟಗಿ, ಎನ್. ಜಿ.ಬೇಗಾರ, ಎ.ಎಫ್. ಪೋಳದ, ಆಯ್.ಸಿ.ಬಡಿಗೇರ,ಹೆಚ್.ಬಿ.ಜಿಗಳೂರ, ವಿ.ಬಿ.ಕಜ೯ಗಿ, ಎಸ್. ವಿ.ಕಲ್ಮಠ, ಬಿ.ಎನ್.ಚವಡಿ, ಎನ್. ಎಸ್. ಕೋನೇರಿ, ಆರ್. ಹೆಚ್.ದಾಸರ, ಎಂ.ಹೆಚ್. ದಿಡ್ಡಿಮನಿ.

ವೇದಿಕೆಯಲ್ಲಿ ಸಹಾಯಕ ಉಗ್ರಾಣಾಧಿಕಾರಿ ಬಾಗಪ್ಪ ಮೇಟಿ, ಬಸವರಾಜ ರೇಷ್ಮೆ, ಶೈಲಾ ಜಿಗಳೂರ, ಎಸ್. ಮಂಜುಳಾ, ಎಸ್. ಎಸ್. ಸುಂಕದ, ಎನ್. ಕೆ.ಘೋಪ೯ಡೆ, ಎ.ಬಿ.ತಹಸೀಲ್ದಾರ್, ಎಂ.ಬಿ.ಇಟಗಿ, ಹೆಚ್.ಎಸ್. ಪೂಜಾರ, ಎ.ಎಂ.ಮಾಡಲಗೇರಿ, ಬಿ.ಹೆಚ್.ಹೆಬ್ಬಾಳ, ಆರ್. ಜಿ.ಕುಲಕರ್ಣಿ,  ಪರಶುರಾಮ ರಾಯಬಾಗಿ, ಎಂ.ಎಸ್. ಮಕಾನದಾರ ಮುಂತಾದವರು ಉಪಸ್ಥಿತರಿದ್ದರು.

ವರದಿ: ದಾವಲಸಾಬ ತಾಳಿಕೋಟಿ

Donate Janashakthi Media

Leave a Reply

Your email address will not be published. Required fields are marked *