ಆಂಧ್ರಪ್ರದೇಶ | ಜಾತಿ ಗಣತಿಗೆ ಅನುಮೋದನೆ ನೀಡಿದ ರಾಜ್ಯ ಸಂಪುಟ

ಅಮರಾವತಿ: ಆಂಧ್ರಪ್ರದೇಶದ ಸಂಪುಟವು ರಾಜ್ಯದಲ್ಲಿ ಸಮಗ್ರ ಜಾತಿ ಗಣತಿಗೆ ಅನುಮೋದನೆ ನೀಡಿದೆ ಎಂದು ಸಚಿವ ಚೆಲುಬೋಯಿನ ಶ್ರೀನಿವಾಸ ವೇಣುಗೋಪಾಲ ಕೃಷ್ಣ ಶುಕ್ರವಾರ ನಡೆದ ಸಂಪುಟ ಸಭೆಯ ನಂತರ ಘೋಷಿಸಿದ್ದಾರೆ. ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಬಿಹಾರದ ಜಾತಿ ಸಮೀಕ್ಷೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಜಾತಿ ಗಣತಿಯು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಜೀವನೋಪಾಯ ಮತ್ತು ಜನಸಂಖ್ಯೆಯ ಡೇಟಾಗಳನ್ನು ಲೆಕ್ಕಹಾಕುವ ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.

“ಆಂಧ್ರಪ್ರದೇಶದ ಸೇರಿದಂತೆ ಭಾರತದಾದ್ಯಂತ ಜಾತಿ ಗಣತಿಗೆ ಒತ್ತಾಯಿಸುತ್ತಿರುವ ಎಲ್ಲರ ಸಲಹೆಗಳನ್ನು ಪರಿಗಣಿಸಲು ಸರ್ಕಾರ ಯೋಜಿಸಿದೆ. ಜಿಲ್ಲಾಧಿಕಾರಿಗಳ ವ್ಯಾಪ್ತಿಯಲ್ಲಿ ವಿವಿಧ ಜಾತಿ ಸಂಘಗಳ ಅಭಿಪ್ರಾಯಗಳನ್ನೂ ಪರಿಗಣಿಸಲಾಗುವುದು. ವರ್ಷಗಟ್ಟಲೆ ಜಾತಿಗಣತಿ ಕೋರಿ ವಿವಿಧ ಜಾತಿ ಸಂಘಗಳಿಂದ ಮಾಹಿತಿ ಪಡೆಯಲು ಐದು ಸ್ಥಳಗಳಲ್ಲಿ ದುಂಡು ಮೇಜಿನ ಚರ್ಚೆ ನಡೆಸಲಾಗುವುದು” ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಛತ್ತೀಸ್‌ಘಡ | ಚುನಾವಣೆ ಚಿಹ್ನೆ ಕಳೆದುಕೊಂಡ 7 ಸಿಪಿಐ ಅಭ್ಯರ್ಥಿಗಳು!

ಭಾರತದಲ್ಲಿ ಕೊನೆಯ ಬಾರಿ ಜಾತಿ ಗಣತಿ 92 ವರ್ಷ(1931) ಗಳ ಹಿಂದೆ ನಡೆದಿತ್ತು ಎಂದು ಹೇಳಿದ ಸಚಿವ ವೇಣುಗೋಪಾಲ ಕೃಷ್ಣ, “1951 ರಿಂದ 2011 ರವರೆಗೆ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಮಾತ್ರ ಗಣತಿ ಮಾಡಲಾಯಿತು” ಎಂದು ಹೇಳಿದ್ದಾರೆ.

ಸಚಿವ ಸಂಪುಟದ ಇತರ ಹಲವು ನಿರ್ಧಾರಗಳನ್ನು ಶುಕ್ರವಾರ ಪ್ರಕಟಿಸಲಾಯಿತು. 6790 ಸರ್ಕಾರಿ ಪ್ರೌಢಶಾಲೆಗಳಲ್ಲಿ ‘ಭವಿಷ್ಯದ ಕೌಶಲ್ಯ’ ತಜ್ಞರ ನೇಮಕಕ್ಕೆ ಆಂಧ್ರ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಪೋಲಾವರಂ ಯೋಜನೆಯ ಪ್ರವಾಹಕ್ಕೆ ಒಳಗಾದ ಗ್ರಾಮಗಳ ಪುನರ್ವಸತಿ ಪ್ರಯತ್ನಗಳ ಭಾಗವಾಗಿ, ಏಲೂರು ಜಿಲ್ಲೆಯ ಪೊಲಾವರಂ, ವೇಲೇರುಪಾಡು ಮತ್ತು ಕುಕುನೂರ್ ಮಂಡಲಗಳಲ್ಲಿ 12,984 ಕುಟುಂಬಗಳಿಗೆ ಉಚಿತ ಭೂ ಹಕ್ಕು ನೋಂದಣಿ ನೀಡುವ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಅಕ್ಟೋಬರ್ 30 ರಂದು ನಡೆದ ರಾಜ್ಯ ಹೂಡಿಕೆ ಉತ್ತೇಜನಾ ಮಂಡಳಿಯ ಸಭೆಯ ನಂತರ ರಾಜ್ಯದಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಸಂಪುಟವು ಅನುಮೋದನೆ ನೀಡಿದೆ. ಎರಡು ಆಹಾರ ಸಂಸ್ಕರಣಾ ಘಟಕಗಳಿಗೆ ವಿಶೇಷ ಪ್ಯಾಕೇಜ್ ನೀಡುವ SIPB ನಿರ್ಧಾರವನ್ನು ಸರ್ಕಾರ ಅನುಮೋದಿಸಿತು. ರಸ್ತೆ ಮತ್ತು ಕಟ್ಟಡಗಳ ಇಲಾಖೆಯಲ್ಲಿ 467 ಹುದ್ದೆಗಳನ್ನು ಹೊರಗುತ್ತಿಗೆ ಮೂಲಕ ಭರ್ತಿ ಮಾಡಲು ಕೂಡಾ ಈ ವೇಳೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ವಿಡಿಯೊ ನೋಡಿ: ‘ತುಘಲಕ್’ ನಾಟಕವನ್ನು ಕಟ್ಟಿ ಕೊಟ್ಟಿದ್ದರ ಹಿಂದೆ ರೋಚಕ ಕಥೆ ಇದೆ – ಡಾ. ಶ್ರೀಪಾಧ್‌ ಭಟ್‌

Donate Janashakthi Media

Leave a Reply

Your email address will not be published. Required fields are marked *