ಭಾರತದೊಂದಿಗೆ ವಿಲೀನಗೊಳಿಸಲು ಪಾಕ್‌ ಆಕ್ರಮಿತ ಪಿಒಕೆ ಜನರ ಪ್ರತಿಭಟನೆ

ಇಸ್ಲಾಮಾಬಾದ್‌: ಆರ್ಥಿಕ ಸಮಸ್ಯೆ, ಪ್ರವಾಹ ಪರಸ್ಥಿತಿ, ಆಹಾರದ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಪಾಕಿಸ್ತಾನದಲ್ಲಿ ಇದೀಗ ಪ್ರತಿಭಟನೆಗಳ ಕಾವು ಜೋರಾಗಿದೆ. ಇದಕ್ಕೆ ಪೂರಕವಾಗಿ ಪಾಕಿಸ್ಥಾನ ಆಕ್ರಮಿತ ಕಾಶ್ಮೀರ(ಪಿಒಕೆ)ದ ಗಿಲ್ಗಿಟ್-ಬಾಲ್ಟಿಸ್ಥಾನವನ್ನು ಭಾರತ ದೇಶದೊಂದಿಗೆ ವಿಲೀನಗೊಳಿಸಬೇಕೆಂದು ಆ ಪ್ರದೇಶದ ಜನತೆ ಮಿಲಿಟರಿ ಹಾಗೂ ಸರ್ಕಾರದ ವಿರುದ್ಧ ಪ್ರತಿಭಟನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಿಒಕೆ ಪ್ರದೇಶದಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಪಾಕಿಸ್ತಾನ ಸರ್ಕಾರ ದುರುಪಯೋಗ ಮಾಡುತ್ತಿದೆ. ಜತೆಗೆ ದುರಾಡಳಿತದಿಂದ ಜನತೆಯ ಜೀವನಕ್ಕೆ ತೊಂದರೆಕೊಡುತ್ತಿದೆ. ಹೀಗಾಗಿ, ಭಾರತದ ಜತೆಗೆ ಗಿಲ್ಗಿಟ್-ಬಾಲ್ಟಿಸ್ಥಾನ ವಿಲೀನಗೊಳಿಸಿ ಎಂದು ಸ್ಥಳೀಯರು 12 ದಿನಗಳಿಂದ ಪ್ರತಿಭಟಿಸುತ್ತಿದ್ದಾರೆ.

ಇದನ್ನು ಓದಿ: ಅರಾಜಕತೆ ಸೃಷ್ಟಿಸೋದು ನನಗಿಷ್ಟವಿಲ್ಲ: ಪ್ರತಿಭಟನಾ ರ‍್ಯಾಲಿ ಕೈಬಿಟ್ಟ ಮಾಜಿ ಪ್ರಧಾನಿ ಇಮ್ರಾನ್ ಖಾನ್

ಪಾಕಿಸ್ತಾನ ಸರ್ಕಾರ ತಾರತಮ್ಯ ಮತ್ತು ದಬ್ಬಾಳಿಕೆಯ ನೀತಿಗಳನ್ನು ಅನುಸರಿಸುತ್ತಿದೆ ಎಂದು ಜನರು ಕೋಪಗೊಂಡಿದ್ದಾರೆ. ಶೋಷಣೆಗೆ ಬೇಸತ್ತ ಸ್ಥಳೀಯ ಜನತೆ ಭಾರತವನ್ನು ಲಡಾಖ್‌ ಪ್ರದೇಶಕ್ಕೆ ಸೇರಿಸುವಂತೆ ಒತ್ತಾಯಿಸಿದ್ದಾರೆ.

ಬೃಹತ್‌ ರ‍್ಯಾಲಿಯೊಂದನ್ನು ಸಂಘಟಿಸಿದ್ದ ಗಿಲ್ಗಿಟ್ ಬಾಲ್ಟಿಸ್ತಾನ್‌ ನ ಜನರು ಕಾರ್ಗಿಲ್ ರಸ್ತೆಯನ್ನು ಪುನರಾರಂಭಿಸಬೇಕು ಮತ್ತು ಬಾಲ್ಟಿಸ್ತಾನ್ ಅನ್ನು ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಕಾರ್ಗಿಲ್ ಜಿಲ್ಲೆಯಲ್ಲಿ ಮತ್ತೆ ವಿಲೀನಗೊಳಿಸಬೇಕು ಎಂದಿದ್ದಾರೆ.

ದೇಶದಲ್ಲಿ ಗೋಧಿ ಮತ್ತು ಇತರ ಆಹಾರ ಪದಾರ್ಥಗಳ ಮೇಲಿನ ಸಬ್ಸಿಡಿ ಮರುಸ್ಥಾಪನೆ, ಲೋಡ್-ಶೆಡ್ಡಿಂಗ್, ಅಕ್ರಮ ಭೂ ಸ್ವಾಧೀನ ಮತ್ತು ಇಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಶೋಷಣೆಯಂತಹ ಹಲವಾರು ಸಮಸ್ಯೆಯನ್ನು ಪರಿಹರಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಪಾಕಿಸ್ತಾನದ ಲೀನಾ ಗಿಲ್ಗಿಟ್ ಬಾಲ್ಟಿಸ್ತಾನ್‌ನ ಭೂಮಿ ಮತ್ತು ಸಂಪನ್ಮೂಲಗಳನ್ನು ಬಲವಂತವಾಗಿ ಆಕ್ರಮಿಸಿಕೊಳ್ಳುತ್ತಿದೆ ಎಂಬ ವರದಿಗಳು ಇವೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *