ಅತಿ ದುಬಾರಿ ಎಚ್‍1-ಬಿ ವೀಸಾ ಶುಲ್ಕ: ಅಮೆರಿಕದ ಇನ್ನೊಂದು ತೋಳು ತಿರುಚುವ ತಂತ್ರ : ಸಿಪಿಐ(ಎಂ) ಪೊಲಿಟ್‍ಬ್ಯುರೊ

“ಭಾರತೀಯ ಪ್ರಭುತ್ವದ ಮುಖ್ಯಸ್ಥರ ಪಲಾಯನವಾದಿ ನಿಲುವು, ವಿದೇಶಾಂಗ ಸಚಿವಾಲಯದ ದಯನೀಯ ಪ್ರತಿಕ್ರಿಯೆ ದೇಶಕ್ಕೆ ನಿರಾಶೆ ಮತ್ತು ಅವಮಾನ ಮಾಡಿದೆ”
ನವದೆಹಲಿ: ಪ್ರತಿ ಎಚ್-1ಬಿ ವೀಸಾ ಹೊಂದಿರುವವರಿಗೆ 88 ಲಕ್ಷ ರೂಪಾಯಿಗಳ ಬಹುದುಬಾರಿ ಶುಲ್ಕ ವಿಧಿಸಿರುವ ಅಮೆರಿಕ ಸಂಯುಕ್ತ ಸಂಸ್ಥಾನಗಳ ಟ್ರಂಪ್ ಆಡಳಿತವು ಏಕಪಕ್ಷೀಯ ಮತ್ತು ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ. ದುಬಾರಿ 

ಸೆಪ್ಟೆಂಬರ್ 21, 2025 ರಿಂದ ಜಾರಿಗೆ ಬರಲಿರುವ ಈ ಹೊಸ ಘೋಷಣೆಯು, ಇತರ ದೇಶಗಳ ವೆಚ್ಚದಲ್ಲಿ ತನ್ನ ಸ್ವಂತ ವ್ಯಾಪಾರ ಹಿತಗಳನ್ನು ಸಾಧಿಸಿಕೊಳ್ಳಲು ಅಮೆರಿಕವು ಬಲವಂತ ಹೇರುವ ತಂತ್ರಗಳನ್ನು ಬಳಸುತ್ತಿರುವುದಕ್ಕೆ ಮತ್ತೊಂದು ಉದಾಹರಣೆಯಾಗಿದೆ ಎಂದು ಅದು ಹೇಳಿದೆ. ದುಬಾರಿ 

ಶೇಕಡಾ 50 ರಷ್ಟು ಸುಂಕ ಹೇರಿಕೆ  ಮತ್ತು ಭಾರತವು ನಿರ್ವಹಿಸುವ ಯೋಜನೆಯಾದ ಇರಾನ್‌ನ ಚಾಬಹಾರ್ ಬಂದರಿನ ಮೇಲೆ ನಿರ್ಬಂಧಗಳನ್ನು ಮತ್ತೆ ಹೇರಿದ ಬೆನ್ನಲ್ಲೇ ಈ ಕ್ರಮ ಬಂದಿದೆ, ಇದು ಸ್ಪಷ್ಟವಾಗಿ ದ್ವಿಪಕ್ಷೀಯ ವ್ಯಾಪಾರ ಚರ್ಚೆಗಳು ಪುನರಾರಂಭಗೊಳ್ಳುತ್ತಿರುವಂತೆ ಭಾರತದ ಮೇಲೆ ಒತ್ತಡ ಹೇರಲು ಯೋಚಿಸಿರುವ ಕ್ರಮ. ಈ ಕ್ರಮಗಳು ದಾದಾಗಿರಿಗೆ ಸಮನಾಗಿದ್ದು, ಯುಎಸ್ ನ ಅನ್ಯಾಯಕರ ಸುಂಕ ಸಂಬಂಧಿತ ಬೇಡಿಕೆಗಳಿಗೆ ಭಾರತ ಮಣಿಯುವಂತೆ ಮಾಡುವ ಉದ್ದೇಶವನ್ನು ಹೊಂದಿವೆ.

ಇದನ್ನೂ ಓದಿ: ಕ್ರೈಸ್ತ ಧರ್ಮಕ್ಕೆ ಹಿಂದೂ ಉಪಜಾತಿಗಳ ಸೇರ್ಪಡೆ ಮರುಪರಿಶೀಲಿಸುವಂತೆ ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲ ಪತ್ರ

ಈ ತೋಳು-ತಿರುಚುವ ತಂತ್ರಗಳನ್ನು ಪ್ರತಿವಿರೋಧಿಸುವ ಬದಲು, ಪ್ರಧಾನ ಮಂತ್ರಿ ಮೋದಿ ಸ್ವಾವಲಂಬನೆಯ ಅಗತ್ಯತೆಯ ಬಗ್ಗೆ ಅಸ್ಪಷ್ಟ ಉಪದೇಶಗಳೊಂದಿಗೆ ಇದಕ್ಕೆ ಸ್ಪಂದಿಸುವ ದಾರಿ  ಆಯ್ಕೆ ಮಾಡಿಕೊಂಡಿದ್ದಾರೆ. ಇದು ಪ್ರಭುತ್ವದ ಮುಖ್ಯಸ್ಥರ ಪಲಾಯನವಾದಿ ಧೋರಣೆ ಎಂದಿರುವ ಪೊಲಿಟ್‍ಬ್ಯುರೊ, ವಿದೇಶಾಂಗ ಸಚಿವಾಲಯದ ಅಷ್ಟೇ ದಯನೀಯ ಪ್ರತಿಕ್ರಿಯೆಯು ದೇಶಕ್ಕೆ ನಿರಾಶೆ ಮತ್ತು ಅವಮಾನಕರವಾಗಿದೆ ಎಂದು ಹೇಳಿದೆ.

ಎಚ್-1ಬಿ ವೀಸಾ ಹೊಂದಿರುವವರ ಪ್ರವೇಶವನ್ನು ನಿರ್ಬಂಧಿಸುವ ಯುಎಸ್‍ ಘೋಷಣೆಯು ಸಾವಿರಾರು ನುರಿತ ಭಾರತೀಯ ವೃತ್ತಿಪರರ ಮೇಲೆ ನೇರ ಮತ್ತು ತೀವ್ರ ಪರಿಣಾಮ ಬೀರುತ್ತದೆ, ಅವರ ವೃತ್ತಿಜೀವನವನ್ನು ಅಸ್ತವ್ಯಸ್ತಗೊಳಿಸುತ್ತದೆ ಮತ್ತು ಅವರ ಕುಟುಂಬಗಳ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ.

ಇಂತಹ ಬಲಾತ್ಕಾರದ ಮತ್ತು ಅನ್ಯಾಯದ ಕ್ರಮಗಳ ವಿರುದ್ಧ ಭಾರತ ಸರ್ಕಾರ ಒಂದು ದೃಢ ನಿಲುವು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಅಮೆರಿಕದ ಒತ್ತಡಕ್ಕೆ ಮಣಿಯಲು ನಿರಾಕರಿಸಬೇಕು ಮತ್ತು ಭಾರತೀಯ ಜನತೆಯ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ನಿರ್ಣಾಯಕವಾಗಿ ವರ್ತಿಸಬೇಕು ಎಂದು ಆಗ್ರಹಿಸಿದೆ.

ಇದನ್ನೂ ನೋಡಿ: ವಚನಾನುಭವ | ನಿಮ್ಮನರಿಯದ ಕಾರಣ ಕೈಯಲ್ಲಿ ಹುಲ್ಲು Janashakthi Media

Donate Janashakthi Media

Leave a Reply

Your email address will not be published. Required fields are marked *