ಅಂಜಲಿ ಹತ್ಯೆ ಪ್ರಕರಣದ ಆರೋಪಿ ವಿಶ್ವ ಅಲಿಯಾಸ್‌ ಗಿರೀಶ್‌ ವಿರುದ್ಧ ಮತ್ತೊಂದು ಎಫ್‌ಐಆರ್

ಬೆಂಗಳೂರು: ಹುಬ್ಬಳ್ಳಿಯ ಯುವತಿ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ ಆರೋಪಿ ವಿಶ್ವ ಅಲಿಯಾಸ್‌ ಗಿರೀಶ್‌ ವಿರುದ್ಧ ಮತ್ತೊಂದು ಎಫ್‌ಐಆರ್‌ ದಾಖಲಿಸಲಾಗಿದೆ.

ಆರೋಪಿ ವಿಶ್ವ ಅಲಿಯಾಸ್ ಗಿರೀಶ್, ಹುಬ್ಬಳ್ಳಿಯ ಯಲ್ಲಾಪುರ ಓಣಿಯ ಅಪ್ರಾಪ್ತಳನ್ನು 6 ತಿಂಗಳ ಹಿಂದೆ ಪ್ರೀತಿಸಿ ಮೋಸ ಮಾಡಿದ್ದ. ಅಲ್ಲದೇ ಪ್ರೀತಿ ನಾಟಕವಾಡಿ ಚಿನ್ನಾಭರಣವನ್ನೂ ಆರೋಪಿ ದೋಚಿ ಪರಾಯಿಯಾಗಿದ್ದ.

ಇದನ್ನೂ ಓದಿ: ಎನ್‍ಇಪಿಗೆ ತಿಲಾಂಜಲಿಯ ಸಾಧನೆ: ಸುರೇಶ್ ಕುಮಾರ್

ಈ ಸಂಬಂಧ ಅಪ್ರಾಪ್ತಳ ಪೋಷಕರು ಹುಬ್ಬಳ್ಳಿ ಬೆಂಡಿಗೇರಿ ಠಾಣೆಯಲ್ಲಿ ದೂರು ನೀಡಿದ್ದು, ಎಫ್ ಐಆರ್ ದಾಖಲಾಗಿದೆ. ಈ ದೂರಿನನ್ವಯ ಆರೋಪಿ ವಿಶ್ವ ಅಲಿಯಾಸ್ ಗಿರೀಶ್ ವಿರುದ್ಧ ಐಪಿಸಿ ಸೆಕ್ಷನ್ 420, 504, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ನೋಡಿ: ನೇಹಾ ಬೆನ್ನಲ್ಲೆ ಅಂಜಲಿ ಹತ್ಯೆ : ಏನಾಗ್ತಿದೆ ರಾಜ್ಯದಲ್ಲಿ

Donate Janashakthi Media

Leave a Reply

Your email address will not be published. Required fields are marked *