ಬೆಂಗಳೂರು: ಒಂದನೇ ತರಗತಿ ಪ್ರವೇಶಕ್ಕೆ ನಗರದ ಶಾಲೆಯೊಂದರ ಶುಲ್ಕ ಬರೋಬ್ಬರಿ ಏಳೂವರೆ ಲಕ್ಷ ರೂ. ನಿಗದಿಯಾಗಿದ್ದು, ಶುಲ್ಕದ ರಶೀದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂತಾರಾಷ್ಟ್ರೀಯ ಮಂಡಳಿಗೆ ಸಂಯೋಜಿತವಾಗಿರುವ ನೀವ್ ಅಕಾಡೆಮಿ ನಡೆಸುತ್ತಿರುವ ಶಾಲೆಯೊಂದು 1ನೇ ತರಗತಿಗೆ ವಾರ್ಷಿಕ 7.35 ಲಕ್ಷ ರೂ. ನಿಗದಿಪಡಿಸಿದೆ.
ಪ್ರಾಥಮಿಕ ಶಿಕ್ಷಣ (1ನೇ ತರಗತಿಯಿಂದ 5ನೇ ತರಗತಿ)ಗೆ ಈ ಶುಲ್ಕ ನಿಗದಿಯಾಗಿದ್ದು 6ನೇ ತರಗತಿಯಿಂದ 8ನೇ ತರಗತಿ ಗೆ 7.75 ಲಕ್ಷ ರೂ., 9ರಿಂದ 10ನೇ ತರಗತಿಗೆ 8.50 ಲಕ್ಷ ರೂ. ಶುಲ್ಕ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಶಿಕ್ಷಣದ ಬಗ್ಗೆ ಆಸಕ್ತಿ ತೋರಲಿ;ವಿದ್ಯಾರ್ಥಿಗಳ ಪ್ರತಿಭಟನೆ
ಇನ್ನು 11, 12ನೇ ತರಗತಿಗೆ 11 ಲಕ್ಷ ರೂ. ಶುಲ್ಕವನ್ನು ನಿಗದಿ ಪಡಿಸಲಾಗಿದೆ. ಈ ಶುಲ್ಕ ರಶೀದಿಯೊಂದನ್ನು ಪಾಲಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು, 50 ಲಕ್ಷ ರೂ. ವಾರ್ಷಿಕ ಸಂಬಳ ಇರುವ ದಂಪತಿಗೂ ತನ್ನಿಬ್ಬರು ಮಕ್ಕಳನ್ನು ಇಂತಹ ಶಾಲೆಗೆ ಕಳಿಸಿ ಶುಲ್ಕ ಭರಿಸುವುದು ಕಷ್ಟ ಎಂದು ಹೇಳಿದ್ದಾರೆ.
ಖಾಸಗಿ ಶಾಲೆಗಳು ಬೇಕಾಬಿಟ್ಟಿಯಾಗಿ ಶುಲ್ಕ ನಿಗದಿ ಮಾಡುತ್ತಿರುವುದಕ್ಕೆ ಹಲವು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ನೋಡಿ: ಪಿಚ್ಚರ್ ಪಯಣ – 161 – ‘ಸು ಫ್ರಾಮ್ ಸೋ’ ಜನಪ್ರಿಯತೆ ಏನನ್ನು ಸೂಚಿಸುತ್ತದೆ?.. ಕೆ.ಫಣಿರಾಜ್ Janashakthi Media
