ಎಲ್ಲಾ ವಿಭಾಗಗಳ ದುಡಿಯುವ ಮಹಿಳೆಯರಿಗೆ ಜಾರಿಗೆ ಸೊಕ್ತ ಕ್ರಮಕ್ಕೆ ಆಗ್ರಹ
ಬೆಂಗಳೂರು: ಒಟ್ಟು ದುಡಿಮೆಗಾರರಲ್ಲಿ ನಿಯಮಿತ ಮತ್ತು ಸಾಂದರ್ಭಿಕ ಉದ್ಯೋಗಗಳಲ್ಲಿ ಮಹಿಳೆಯರ ದುಡಿಮೆ ಅತ್ಯಂತ ನಿರ್ಣಾಯಕವಾಗಿದೆ. ಕರ್ನಾಟಕ ಇಂದು ಕೈಗಾರಿಕೆಗಳಲ್ಲಿ, ಸೇವಾ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದೆ ಇದಕ್ಕೆ ಪ್ರಮುಖವಾದ ಶ್ರಮಿಕರಲ್ಲಿ ಮಹಿಳೆಯರ ಶ್ರಮವೂ ಇದೆ. ಹಾಗಾಗಿ ಒಂದು ದಿನದ ವೇತನ ಸಹಿತ ಮುಟ್ಟಿನ ರಜೆ ನೀಡಿರುವ ಸರ್ಕಾರದ ಕ್ರಮವನ್ನು ಸಿಐಟಿಯು ಸ್ವಾಗತಿಸಿದೆ.ವೇತನ
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಅನುಭವಿಸುತ್ತಿರುವ ಸಂಕಷ್ಟಗಳಲ್ಲಿ ಅತೀ ಪ್ರಮುಖವಾದ ಸಮಸ್ಯೆ ಮುಟ್ಟಿನ ಸಮಸ್ಯೆ. ಉತ್ತಾದನಾ ಘಟಕಗಳಲ್ಲಿ , ಶಾಪಿಂಗ್ ಮಾಲ್ ಗಳಲ್ಲಿ, ಆಸ್ಪತ್ರೆ ಗಳಲ್ಲಿ, ಕಸ ತಗೆಯುವವರು, ಇನ್ನೂ ಮುಂತಾದ ವಿಭಾಗಗಳಲ್ಲಿ ಮಹಿಳೆಯರು ನಿಂತುಕೊಂಡು ಅಥವಾ ಬಗ್ಗಿಕೊಂಡು ವಿಶ್ರಾಂತಿ ಇಲ್ಲದೆ ದುಡಿಯಬೇಕು,ಇನ್ನೂ ಕಸತಗೆಯುವ ಮಹಿಳೆಯರು, ಸಾರಿಗೆಯಲ್ಲಿ ಕೆಲಸ ಮಾಡುವ ಬಸ್ ಕಂಡಕ್ಟರ್ ಮತ್ತು ಮಹಿಳಾ ಚಾಲಕರು ದುಡಿಯುವ ಕಡೆ ಶೌಚಾಲಯಗಳೇ ಇಲ್ಲದ್ದರಿಂದ ಮುಟ್ಟಾದಾಗ ಪ್ಯಾಡ್ ಬದಲಾಯಿಸಲು ಪಡಬೇಕಾದ ಯಾತನೆ ನರಕಯಾತನೆಯಾಗಿತ್ತು. ವೇತನ
ಮಾತ್ರವಲ್ಲದೆ ಇತ್ತೀಚಿನ ಜೀವನ ಪದ್ದತಿಯಿಂದ ಮುಟ್ಟಾಗುವ ಮುಂಚಿನ ದಿನದಿಂದಲೇ ಕೆಲವರಿಗೆ ತಡೆಯಲಾರದ ಹೊಟ್ಟೆನೋವು, ಕೆಲವರಿಗೆ ಮುಟ್ಟಾದ ದಿನ ಹೊಟ್ಟೆನೋವು, ಮನಸಿಕಿ ಕಿರಿಕಿರಿ, ವಾಂತಿ , ಬೆನ್ನು ನೋವು ಇನ್ನೂಮುಂತಾದ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಇಂತಹ ಸಮಯದಲ್ಲಿ ವಿಶ್ರಾಂತಿ ಪಡೆಯವುದು ಅಸಾದ್ಯದ ಮಾತಾಗಿತ್ತು. ವೇತನ
ಇದನ್ನೂ ಓದಿ: ಬೆಂಗಳೂರು | ‘ಪ್ರಜಾವಾಣಿ ದೀಪಾವಳಿ ಕಥೆ ಮತ್ತು ಕವನ ಸ್ಪರ್ಧೆ: ದಯಾನಂದ ಸೇರಿ ಆರು ಜನರಿಗೆ ಬಹುಮಾನ
ಇಂತಹ ಸಂಧರ್ಭದಲ್ಲಿ ಕನಿಷ್ಠ ಒಂದು ದಿನದ ರಜೆ ಸದ್ಯಕ್ಕೆ ಪರಿಹಾರವಾಗಿ ಬಂದಿದೆ. ಮುಟ್ಟಿನ ಆರೋಗ್ಯವು ಸಂಪೂರ್ಣ ವಾಗಿ ಮಾನಸಿಕವಾಗಿ, ದೈಹಿಕವಾಗಿ, ಸಾಮಾಜಿಕ ವಾಗಿ ಯೋಗಕ್ಷೇಮದ ಸ್ಥಿತಿ.ಮುಟ್ಟಿಗೆ ಸಂಬಂಧಿಸಿದಂತೆ ಕೇವಲ ರೋಗ ಅಥವಾ ದೌರ್ಬಲ್ಯದ ಅನುಪಸ್ಥಿತಿಯಲ್ಲ. ದುಡಿಮೆಯ ಕ್ಷೇತ್ರದಲ್ಲಿ ಯೂ ಮಹಿಳೆ ಪಾಲ್ಗೊಳ್ಳ ಬೇಕದಾರೆ ಮುಟ್ಟಿನ ರಜೇ ಹಕ್ಕಿನ ರಜೆಯಾಗಬೇಕು. ಈ ಹಿನ್ನೆಲೆಯಲ್ಲಿ CITU ಮತ್ತು ಇತರೆ ಸಂಘಟನೆ ಗಳು ನಡೆಸಿದ ನಿರಂತರ ಪ್ರಯತ್ನಗಳಿಗೆ ಇಂದು ಜಯ ಸಿಕ್ಕಿದೆ.
ರಾಜ್ಯ ಸರ್ಕಾರ ತಜ್ಞ ರ ಸಮಿತಿಯನ್ನು ರಚಿಸಲಾಗಿತ್ತು.ಆ ಸಮಿತಿಯ ಶಿಫಾರಸ್ಸು ನ್ನು ಒಪ್ಪಿ 9/10/25 ರಂದು ಸಚಿವ ಸಂಪುಟ ಅನುಮೋದನೆ ಮಾಡಿರುವುದನ್ನು CITU ರಾಜ್ಯ ಸಮಿತಿ ಸ್ವಾಗತ ಮಾಡುತ್ತದೆ.
ಈ ರಜೆಯನ್ನು ಸಿದ್ದುಉಡುಪು ಕಾರ್ಖಾನೆಗಳು,ಪ್ಲಾಂಟೇಷನ್, ನಗರ ಮತ್ತು ಮಹಾನಗರ ಪಾಲಿಕೆಗಳು,ಖಾಸಗಿ ಕಾರ್ಖಾನೆಗಳಲ್ಲಿ ಮತ್ತು ಸರ್ಕಾರದ ನಿಗಮ ಮಂಡಳಿಗಳು, ಇಲಾಖೆಗಳಲ್ಲಿ ಗುತ್ತಿಗೆ ,ಹೊರಗುತ್ತಿಗೆ ಗಳಲ್ಲಿ ದುಡಿಯುವ ಮಹಿಳೆಯರು,ಖಾಸಗಿ ಶಾಪಿಂಗ್ ಮಾಲ್ ಗಳು, ಹೋಟೆಲ್ ಉದ್ಯಮಗಳಲ್ಲಿ, ಖಾಸಗಿ ಆಸ್ಪತ್ರೆ ಗಳಲ್ಲಿ ,ಆಹಾರಕ್ಕೆ ಸಂಬಂದಿಸಿದ ವಿಭಾಗಗಳಲ್ಲಿ ಮತ್ತು ಸ್ಕೀಮ್ ಕಾರ್ಮಿಕ ಮಹಿಳೆಯರಲ್ಲಿ ಇದು ಜಾರಿಯಾಗಬೇಕಾದ ಸವಾಲು ಸರ್ಕಾರದ ಮುಂದೆ ಇದೆ
ಇದನ್ನು ಸರ್ಕಾರ ಸೂಕ್ತ ಕ್ರಮ ತಗೆದುಕೊಳ್ಳಲಿ.
ಇದನ್ನೂ ನೋಡಿ: ಧರ್ಮಸ್ಥಳ ಕೊಲೆ ಪ್ರಕರಣ | ಕೊಲೆ ಮಾಡುವುದು ಧರ್ಮ ರಕ್ಷಣೆಯಾ? ಬಿ.ಎಂ ಭಟ್ Janashakthi Media
