ಹೈದರಾಬಾದ್: ಕೆಲವು ತಿಂಗಳುಗಳ ಹಿಂದೆ ಕರ್ನಾಟಕ ರಾಜ್ಯದಲ್ಲಿ ಪಕ್ಷದ ಭಾರಿ ಗೆಲುವಿಗೆ ಕಾರಣವಾಗಿದ್ದ ಗ್ಯಾರೆಂಟಿಗಳ ಸೂತ್ರವನ್ನು ತೆಲಂಗಾಣದಲ್ಲೂ ಜಾರಿಗೆ ತರಲು ಕಾಂಗ್ರೆಸ್ ನಿರ್ಧರಿಸಿದೆ.
ಇಲ್ಲಿಗೆ ಸಮೀಪದ ತುಕ್ಕುಗೂಡದ ವಿಜಯಭೇರಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಭಾನುವಾರ ಸೆ-17 ತೆಲಂಗಾಣಕ್ಕೆ ಆರು ಗ್ಯಾರೆಂಟಿಗಳನ್ನು ಘೋಷಿಸಿದರು. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣವೇ ಇವನ್ನ ಜಾರಿಗೊಳಿಸಲು ಬದ್ಧರಾಗಿರುವುದಾಗಿ ಹೇಳಿದರು.
ಇದನ್ನೂ ಓದಿ:ಕಾಂಗ್ರೆಸ್ 5 ‘ಗ್ಯಾರಂಟಿ’ ಜಾರಿ: ಯೋಜನೆಗಳ ಲಾಭ ಪಡೆಯೋದು ಹೇಗೆ? ಇಲ್ಲಿದೆ ಸಮಗ್ರ ವಿವರ!
ತೆಲಂಗಾಣ ವಿಧಾನಸಭೆಯ 119 ಸ್ಥಾನಗಳಿಗಾಗಿ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಬೇಕಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಆರು ಗ್ಯಾರೆಂಟಿಗಳನ್ನು ಘೋಷಿಸಿದರು.
ಆರು ಗ್ಯಾರೆಂಟಿಗಳು:
1.ಮಹಾಲಕ್ಷ್ಮಿ
- ಮಹಿಳೆಯರಿಗೆ ತಿಂಗಳಿಗೆ ₹2,500 ಆರ್ಥಿಕ ನರೆವು
- ₹500ಕ್ಕೆ ಎಲ್‌ಪಿಜಿ ಸಿಲಿಂಡರ್
- ಸ್ರೀಯರಿಗೆ ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ
2.ರೈತ ಭರೋಸಾ
- ರೈತರು ಮತ್ತು ಗೇಣಿದಾರರಿಗೆ ವಾರ್ಷಿಕ ₹15 ಸಾವಿರ ಆರ್ಥಿಕ ನೆರವು
- ಕೃಷಿ ಕಾರ್ಮಿಕರಿಗೆ ₹12,000
- ಭತ್ತದ ಬೆಳೆಗೆ ₹500 ಬೆಂಬಲ ಬೆಲೆ
3.ಗೃಹಜ್ಯೋತಿ
- ಪ್ರತಿ ಕುಟುಂಬಕ್ಕೂ 200 ಯೂನಿಟ್‌ವರೆಗೆ ಉಚಿತ ವಿದ್ಯುತ್
- ಇಂದಿರಮ್ಮ ಮನೆ
- ಸ್ವಂತ ಮನೆ ಇಲ್ಲದವರಿಗೆ ನಿವೇಶನ ಮತ್ತು ₹5 ಲಕ್ಷ ನಗದು
- ತೆಲಂಗಾಣ ಚಳವಳಿ ಹೋರಾಟಗಾರರಿಗೆ 250 ಚದರ ಅಡಿ ನಿವೇಶನ
5.ಯುವ ಕಿಕಾಸಂ
- ವಿದ್ಯಾರ್ಥಿಗಳಿಗೆ ₹5 ಲಕ್ಷ ಮೌಲ್ಯದ ವಿದ್ಯಾ ಭರೋಸಾ ಕಾರ್ಡ್‌ಗಳನ್ನು ನೀಡಲಾಗುವುದು.
- ಪ್ರತಿ ಮಂಡಲದಲ್ಲಿ ತೆಲಂಗಾಣ ಇಂಟರ್‌ನ್ಯಾಷನಲ್ ಶಾಲೆ
6.ಕೈಮಗ್ಗ
- ಮಾಸಿಕ ₹400 ಪಿಂಚಣಿ
- ₹10 ಲಕ್ಷ ರಾಜೀವ್ ಆರೋಗ್ಯ ವಿಮ
ವಿಡಿಯೋ ನೋಡಿ:ಐದು ಗ್ಯಾರಂಟಿ ಯೋಜೆನೆ ಜಾರಿ ಮಾಡ್ತೀವಿ ಅಂದಿದ್ದೆವು, ಈಗ ಮಾಡಿದ್ದೇವೆ- ಡಿಕೆ ಶಿವಕುಮಾರ