ಅನ್ನದಾತನ ಪರ್ಯಾಯ ಪರೇಡ್ ಗೆ ವ್ಯಾಪಕ ಬೆಂಬಲ

ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರೈತರು  ದೇಶವ್ಯಾಪಿ ನಡೆಸಿದ ಪರ್ಯಾಯ ಪರೇಡ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ದೆಹಲಿಯ ಟ್ರ್ಯಾಕ್ಟರ್ ಮೆರವಣಿಗೆಯ ಮೇಲೆ ಪೊಲೀಸರು ಲಾಠಿ ಚಾರ್ಜ ಮಾಡಿ, ಜಲಫಿರಿಂಗಿ ಬಳಿಸಿದ್ದಾರೆ. ಕರ್ನಾಟಕದಲ್ಲೂ ಪರ್ಯಾಯ ಪರೇಡ್ ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಕೃಷಿ ಕಾಯ್ದೆ ರದ್ದು ಮಾಡಿ ಎಂಬ ಘೋಷಣೆಗಳು ಮೊಳಗಿದವು.

ದಿಲ್ಲಿಯ ಸುತ್ತ ಐದು ಗಡಿಗಳಲ್ಲಿ ಕಳೆದ ಎರಡು ತಿಂಗಳಿಂದ ಪ್ರತಿಭಟಿಸುತ್ತಿರುವ ರೈತರು ಮತ್ತು ದೇಶಾದ್ಯಂತ ಅವರಿಗೆ ಬೆಂಬಲವಾಗಿ ನಿಂತಿರುವ ಲಕ್ಷಾಂತರ ರೈತರು ಕಾರ್ಮಿಕರು ಇತರರು ಸೇರಿದಂತೆ  72ನೇ ಗಣತಂತ್ರ ದಿನವನ್ನು ಅಭೂತಪೂರ್ವ ರೀತಿಯಲ್ಲಿ ಆಚರಿಸಿದ್ದಾರೆ. ದೆಹಲಿಯ ಗಾಜಿಪುರ ಗಡಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿಗೆ ತೆರಳಿದ್ದವರ ಮೇಲೆ ಅಶ್ರುವಾಯು ಪ್ರಯೋಗ ಮಾಡಲಾಗಿದೆ. ಕಿಸಾನ್ ಟ್ರ್ಯಾಕ್ಟರ್ ಪರೇಡ್‌ಗೆ ತೆರಳಿದ್ದ ರೈತರ ಮೇಲೆ ಮನಬಂದಂತೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ದೆಹಲಿಯಲ್ಲಿ ರೈತರ ಮೇಲೆ ಅಶ್ರುವಾಯು ಮಾಡಲಾಗಿದೆ. ಕಿಸಾನ್ ಟ್ರ್ಯಾಕ್ಟರ್ ಪರೇಡ್‌ಗೆ ತೆರಳಿದ್ದ ರೈತರ ಮೇಲೆ ಮನಬಂದಂತೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಕೆಲವೆಡೆ ಪೊಲೀಸರ ಬ್ಯಾರಿಕೇಡ್ ತಳ್ಳಿ ರೈತರು ನುಗ್ಗಲು ಪ್ರಯತ್ನಿಸಿದರು. ದೆಹಲಿಯ ಸಿಂಘು ಗಡಿಯಲ್ಲಿ ರೈತರ ಮೇಲೆ ಲಾಠಿಚಾರ್ಜ್‌ ಮಾಡಲಾಗಿದೆ. ಹಾಗೂ ಅಕ್ಷರಧಾಮ ಬಳಿ ರೈತರ ಮೇಲೆ ಜಲಫಿರಂಗಿ ಪ್ರಯೋಗ ಮಾಡಲಾಗಿದೆ. ದಿಲ್ಲಿಯಲ್ಲಿ ಕೆಲವು ಅಹಿತಕರ ಘಟನೆಗಳು ನಡೆದಿವೆ. ಬೆಳಿಗ್ಯೆ ಸಿಂಘು ಗಡಿಯಲ್ಲಿ ಕೆಲವರು ಪೋಲೀಸರ ತಡೆಬೇಲಿಗಳನ್ನು, ಡಂಪರುಗಳ ತಡೆಯನ್ನು ಬೇಧಿಸಿ ದಿಲ್ಲಿ ಪ್ರವೇಶಿಸಿದರು.

ನಂತರ ಕೆಲವರು ದಿಲ್ಲಿಯ ಕೇಂದ್ರ ಪ್ರದೇಶಗಳತ್ತವು ಹೋಗಿ ಕೆಂಪುಕೋಟೆಯನ್ನು ಪ್ರವೇಶಿಸಿದರು ಎಂದು  ಮಾಧ್ಯಮಗಳಲ್ಲಿ ವರದಿಯಾಗಿದೆ. ಕೆಲವೆಡೆಗಳಲ್ಲಿ ಪೋಲೀಸರು ಲಾಠೀ ಪ್ರಹಾರ ಮತ್ತು ಅಶ್ರುವಾಯು ಸಿಡಿಸಿದರು. ಆದರೆ ಇವರು ಸಂಯುಕ್ತ ಕಿಸಾನ್‍ ಮೋರ್ಚಾದ ಭಾಗವಾಗಿರುವ ಪ್ರತಿಭಟನಾಕಾರರಲ್ಲ ಎಂದು ಸಂಯುಕ್ತ ಕಿಸಾನ್ ‍ಮೋರ್ಚಾದ ಮುಖಂಡರು ಹೇಳಿದ್ದಾರೆ. ಆ ನಂತರ ತಮ್ಮ ಮನವಿಗಳಂತೆ ಶಾಂತಿಯುತವಾಗಿ ಟ್ರಾಕ್ಟರ್‍ ಪರೇಡ್‍ಗಳು ನಡೆಯುತ್ತಿವೆ ಎಂದು  ಅವರು ಹೇಳಿದ್ದಾರೆ. ಈ ಕೆಲವು ಅಹಿತಕರ ಘಟನೆಗಳು ಕಳೆದ ಏಳು ತಿಂಗಳಿಂದ ಅತ್ಯಂತ ಶಾಂತಿಯುತವಾಗಿ ನಡೆಯುತ್ತಿರುವ ಈ ಚಳುವಳಿಯ ಹೆಸರುಗೆಡಿಸುವ ಪಿತೂರಿಯಿರಬಹುದು ಎಂದೂ ಕೆಲವು ರೈತ ಮುಖಂಡರು ಹೇಳಿದ್ದಾರೆ. ಇದನ್ನು ಮತ್ತೆ-ಮತ್ತೆ ತೋರಿಸಿ ಜನಗಳನ್ನು ಉದ್ರೇಕಿಸುವ ಪ್ರಯತ್ನ ಮಾಡಬೇಡಿ ಎಂದು ಎಐಕೆಎಸ್ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲ ಮಾಧ್ಯಮಗಳಿಗೆ ವಿನಂತಿ ಮಾಡಿಕೊಂಡಿದ್ದಾರೆ.

ಸಿಂಘು ಗಡಿಯಿಂದ ಪಾಣಿಪತ್‍ನ ವರೆಗೆ ಸುಮಾರು ನೂರು ಕಿ.ಮೀ. ಉದ್ದಕ್ಕೂ ಟ್ರಾಕ್ಟರುಗಳು ಬಂದು ಸೇರಿಕೊಂಡದ್ದರಿಂದ ರೈತರು ಪೋಲಿಸರು ವಿಧಿಸಿದ ಮಾರ್ಗದಲ್ಲೇ ಸಾಗಲು ಸಾಧ್ಯವಾಗಲಿಲ್ಲ. ದಿಲ್ಲಿ-ನೋಯ್ಡಾ ಹೆದ್ದಾರಿಯಲ್ಲಿರುವ ಚಿಲ್ಲಾದಲ್ಲಿ ಮೊದಲಿಗೆ ಪೋಲಿಸರು ಅನುಮತಿ ನೀಡದ್ದರಿಂದ ರೈತರು ಬ್ಯಾರಿಕೇಡುಗಳನ್ನು ಮುರಿದು ಮುಂದೊತ್ತಿದರು. ನಂತರ ಪೋಲಿಸರು ಅನುಮತಿ ನೀಡಿದರು. ಪಲ್ವಲ್‍ ಗಡಿಯಲ್ಲಿ ಬದರ್‍ಪುರ್‍ ವರೆಗೆ 45 ಕಿ.ಮೀ. ಟ್ರಾಕ್ಟರ್‍ ಮೆರವಣಿಗೆ ನಡೆಸಲು ಅನುಮತಿ ನೀಡಲಾಗಿತ್ತು. ಆದರೆ 15 ಕಿ.ಮೀ. ಸಾಗಿ ಸಿಕ್ರಿ ತಲುಪಿದಾಗ ಪೋಲೀಸರು ಲಾಠೀ ಪ್ರಹಾರ ನಡೆಸಿದರು. ಡಿವೈಎಫ್‍ಐ ಮುಖಂಡರ ಸಹಿತ ಹಲವರು ಗಾಯಗೊಂಡರು. ರೈತರು ಅಲ್ಲೇ ಕುಳಿತು ಪ್ರತಿಭಟನೆ ನಡೆಸಿದರು ಎಂದು ಅಖಿಲ ಭಾರತ ಕಿಸಾನ್‍ ಸಭಾದ ಮುಖಂಡರು ಹೇಳಿದ್ದಾರೆ. ಕಳೆದ 60 ದಿನಗಳಿಂದ ಸರಕಾರ ಪ್ರದರ್ಶಿಸುತ್ತಿರುವ ಮೊಂಡುತನದ ನಿಲುವು ಕೂಡ ಇಂತಹ ಘಟನೆಗಳು ನಡೆಯಲು ಕಾರಣವಾಗಿದೆ ಎಂದಿರುವ ಸಂಯುಕ್ತ ಕಿಸಾನ್‍ ಮೋರ್ಚಾ, ಈ ಕೆಲವು ಅಹಿತಕರ ಘಟನೆಗಳನ್ನು ಬಿಟ್ಟರೆ ಪರೇಡ್‍ ಗಳು ದೇಶಾದ್ಯಂತ ಶಾಂತಿಯುತವಾಗಿ ನಡೆದಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

ಕರ್ನಾಟಕದಲ್ಲೂ ಪರ್ಯಾಯ ಪರೇಡ್ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲವ್ಯಕ್ತವಾಗಿತ್ತು. ರಾಜಧಾನಿ ಬೆಂಗಳೂರು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ರೈತರ ರ್ಯಾಲಿ ಆಕರ್ಷಣೀಯವಾಗಿತ್ತು. ಕೇಂದ್ರ ರಾಜ್ಯ ಸರಕಾರದ ವಿರುದ್ಧ ಘೊಷಣೆಗಳನ್ನು ಮೊಳಗಿಸಿದರು

ರೈತ, ಕಾರ್ಮಿಕ ಸಂಹಿತೆ ವಿರೋಧಿಸಿ ಸಂವಿಧಾನ ರಕ್ಷಣೆಗಾಗಿ ನಾವು ನೀವು ಕಾರ್ಯಕ್ರಮ ನಡೆಯಿತು. ಸಿಐಟಿಯು, ಜನವಾದಿ ಮಹಿಳಾ ಸಂಘಟನೆ, ಡಿವೈಎಫ್ಐ, ಎಸ್.ಎಫ್ಐ, ಪ್ರಾಂತರೈತ ಸಂಘ, ಕೂಲಿಕಾರ ಸಂಘಟನೆಗಳು ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ನಂತರದಲ್ಲಿ ಅವರೆಲ್ಲ ರೈತರ ಪರ್ಯಾಯ ಪರೇಡ್ ನಲ್ಲಿ ಭಾಗವಹಿಸಿದರು. ರೈತರ ಪರ್ಯಾಯ ಪರೇಡ್ ಗೆ ರಾಜ್ಯದ ಮೂಲೆ ಮೂಲೆಗಳಿಂದ ರೈತರು ಆಗಮಿಸುತ್ತಿದ್ದರು. ಕೋಲಾರದಿಂದ ಹಾಗೂ ಚಿಕ್ಕ ಬಳ್ಳಾಪುರದಿಂದ ಹೊರಟ ಟ್ರ್ಯಕ್ಟರ್ ಗಳನ್ನು ತೆಡ ಹಿಡದಿದ್ದರು. ಮಡಕೇರಿಯಿಂದ ಹೊರಟ ಟ್ರ್ಯಾಕ್ಟರ್ ಗಳನ್ನು ಪೊಲೀಸರು ತಡೆ ಹಿಡದಿದ್ದರು, ಟ್ರ್ಯಾಕ್ಟರ್ ಬಿಡುವಂತೆ ಸ್ಥಳದಲ್ಲಿಯೇ ರೈತರು ಪ್ರತಿಭಟನೆ ನಡೆಸಿದರು. ಕೊನೆಗೆ ಪೊಲೀಸರು ವಾಹನ ವ್ಯವಸ್ಥಯನ್ನು ಮಾಡಿದರು ಆ ಮೂಲಕ ಅವರು ಬೆಂಗಳೂರಿನ ರೈತರ ರ್ಯಾಲಿಯಲ್ಲಿ ಭಾಗವಹಿಸಿದರು.

ಕೋಲಾರದಿಂದ ಬಂದ ಟ್ರ್ಯಾಕ್ಟರ್ ಗಳನ್ನೂ ಪೋಲೀಸರು  ಹೊಸಕೋಟೆಯ ಟೋಲ್ ಗೇಟ್ ನಲ್ಲಿತಡೆ ಹಿಡಿಯುತ್ತಿದ್ದರು. ರೈತರಿಗೂ  ಪೊಲೀಸರಿಗೂ ಸಾಕಷ್ಟು ಜಟಾಪಟಿ ನಡೆಯಿತು. ಕೊನೆಗೂ ರೈತರು ಪೊಲೀಸರುನ್ನು ಒಪ್ಪಿಸಿ ಐದು ಟ್ರ್ಯಾಕ್ಟರ್ ಗಳನ್ನು ಬಿಡಿಸಿಕೊಂಡು ಪ್ರೀಡಂಪಾರ್ಕ ನತ್ತ ಧಾವಿಸಿದರು.

ರೈತರ ಹೋರಾಟಕ್ಕೆ  ಮಕ್ಕಳು  ಛದ್ಮವೇಶವನ್ನು ಹಾಕಿ ಬೆಂಬಲವನ್ನು ನೀಡಿದರು, ನೇಗಿಲನ್ನು ಹೊತ್ತ ರೈತನ ಛದ್ಮವೇಶ, ರೈತ ಮಹಿಳೆಯ ಛದ್ಮವೇಶ ರ್ಯಾಲಿಗೆ ಮೆರಗನ್ನು ತುಂಬಿದವು. ಲಿಂಗತ್ವ ಅಲ್ಪಸಂಖ್ಯಾತರು  ಕೂಡ ರೈತರ ಹೋರಾಟಕ್ಕೆ ಬೆಂಬಲವನ್ನು ನೀಡಿದ್ದರು.

ಐದು ಭಾಗಗಳಿಂದ ಬಂದ ಪರ್ಯಾಯ ಪರೇಡ್ ಮೆರವಣಿಗೆ ಫ್ರೀಡಂಪಾರ್ಕ್ ನಲ್ಲಿ ಸಮಾವೇಶಗೊಂಡವು, ರೈತ ಸಂಘಟನೆ, ಕಾರ್ಮಿಕರ ಸಂಘಟನೆ, ವಿದ್ಯಾರ್ಥಿ ಸಂಘಟನೆ, ಮಹಿಳಾ ಸಂಘಟನೆ, ಯುವಜನ ಸಂಘಟನೆ, ಕೂಲಿಕಾರರ ಸಂಘಟನೆ, ದಲಿತ ಸಂಘಟನೆ, ವಕೀಲರು, ಕನ್ನಡಪರ ಸಂಘಟನೆಗಳು ಸೇರಿದಂತೆ ಅನೇಕ ಪ್ರಗತಿಪರ ಸಂಘಟನೆಗಳು ಭಾಗವಹಿಸಿದ್ದವು. ಸಿಖ್ ಸಮುದಾಯದವರು, ಬೆಂಗಳೂರು ಸಮುದಾಯ, ಹಾಗೂ ಇತರ ಸಂಘಟನೆಗಳು ಊಟದ ವ್ಯವಸ್ಥೆಯನ್ನು ಮಾಡಿದ್ದರು.

ಒಟ್ಟಾರೆ ದೆಹಲಿ, ಕರ್ನಾಟಕ ಸೇರಿದಂತೆ ಇತರೆ ಕಡೆಗಳಲ್ಲಿ ಪರ್ಯಾಯ ಪರೇಡ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮೋದಿ ಸರಕಾರಕ್ಕೆ ಇವತ್ತಿನ ರೈತ ಕಾರ್ಮಿಕರ ಪರ್ಯಾಯ ಪರೇಡ್ ಎಚ್ಚರಿಕೆಯ ಗಂಟೆಯಾಗಿದೆ. ಕೃಷಿಕಾಯ್ದೆಯನ್ನು ರದ್ದು ಮಾಡದೆ ಹೋದರೆ ಮೋದಿಗೆ ಮುಂಬರುವ ದಿನಗಳಲ್ಲಿ ಸಂಕಷ್ಟದ ದಿನಗಳು ಎದುರಾಗಲಿವೆ ಎಂಬ ಸೂಚನೆಯನ್ನು ಈ ಪರ್ಯಾಯ ಪರೇಡ್ ಸೃಷ್ಟಿ ಮಾಡಿದೆ. ಮೋದಿ ಸರಕಾರ ರೈತ, ಕಾರ್ಮಿಕರ ಮುಂದೆ ಮಂಡಿಯೂರಿ ಕೂರುವ ದಾರಿ ಬಿಟ್ಟರೆ ಬೇರಾವ ಮಾರ್ಗಗಳು ಎಲ್ಲ ಎನ್ನುವುದನ್ನು ಅರಿಯಬೇಕಿದೆ.

ರೈತ ಕಾರ್ಮಿಕರ ಪರ್ಯಾಯ ಪರೇಡ್ ಬಹಿರಂಗ ಸಭೆ ಕುರಿತು ಕರ್ನಾಟಕ ಪ್ರಾಂತರೈತ ಸಂಘದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಮಾತನಾಡುತಾ ಕೃಷಿ ಕಾಯ್ದೆಗಳ ರದ್ದತಿಗಾಗಿ ರೈತರು, ಕಾರ್ಮಿಕರು, ಯುವಜನರು, ವಿದ್ಯಾರ್ಥಿಗಳು, ಅಲ್ಪಸಂಖ್ಯಾತರು, ದಲಿತರು, ಮಹಿಳೆಯರು ಒಟ್ಟಾರೆಯಾಗಿ ಸೇರಿದ್ದು ಗಣತಂತ್ರವನ್ನು ಹಾಳುಮಾಡಲು ಬಿಡುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಇದು ಚಾರಿತ್ರಿಕೆ ಹೋರಾಟ,ಮತ್ತು ಎರಡನೇ ಸ್ವಾತಂತ್ರ ಸಂಗ್ರಾಮ ಎಂದರು.


ಈ ಹೋರಾಟ ಕೂಲಿಕಾರ, ರೈತರ, ನಾಗರಿಕರ ಹೋರಾಟ ಮಾತ್ರವಲ್ಲ ಸ್ವಾತಂತ್ರ್ಯ, ಸಾರ್ವಭೌಮತೆಯ ಉಳಿವಿಗಾಗಿ, ರೈತರು ವಿರೋಧಿಸುತ್ತಿರು ಮೂರು ಕೃಷಿ ಕಾಯ್ದೆಗಳನ್ನು ಬಿಜೆಪಿ ಸರ್ಕಾರ ಕಾರ್ಪೋರೇಟ್ ಕಂಪನಿಗಳಿಗೆ ಒತ್ತಿ ಇಡುತ್ತಿದೆ, ಇದನ್ನು ನಾವು ಬಿಡುವುದಿಲ್ಲ. ಸರ್ಕಾರ ನಮ್ಮ ಬೆನ್ನಿಗೆ ಚೂರಿಹಾಕುವ ಕೆಲಸ ಮಾಡುತ್ತಿದೆ. ಕೋವಿಡ್ -19 ಸಂಕಷ್ಟ ಕಾಲದಲ್ಲಿ ಜನರು ನಷ್ಟ ಅನುಭವಿಸುತ್ತಿದ್ದಾರೆ. ಇವರಿಂದ ಆಯ್ಕೆಯಾದ ಸರ್ಕಾರ ಇವರ ಪರವಾಗಿ ನಿಲ್ಲವುದು ಬಿಟ್ಟು ಕಾರ್ಪೋರೇಟ್ ಪರವಾಗಿ ನಿಂತಿದೆ. ಕಾರ್ಮಿಕರ ಬದಕನ್ನು, ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ. ರೈತರ ಭೂಮಿಯನ್ನು ಕಿತ್ತುಕೊಳ್ಳುತ್ತಿದೆ. ಬಿಜೆಪಿ ಮತ್ತು ಸಂಘಪರಿವಾರದವರು ಕೃಷಿ ಮಸೂದೆಗಳು ರೈತರ ಪರವಾಗಿದ್ದಾವೆ ಎಂದು ಅಪಪ್ರಚಾರ ಮಾಡುತ್ತಿವೆ. ಕಾರ್ಪೋರೇಟ್ ಎಂಜೆಟರ್ ವಿರುದ್ಧ ನಾವು ಸತ್ಯೆವನ್ನು ಜನರಿಗೆ ತಲುಪುಸುತ್ತೇವೆ.
ಕನಿಷ್ಟ ಬೆಲೆ, ಬೆಂಬಲ ಬೆಲೆ ಘೋಷಿಸಿ, ಎಂ.ಎಸ್ ಸ್ವಾಮಿನಾಥನ್ ವರದಿ ಜಾರಿಮಾಡಿ. ಕೃಷಿ ಬೆಲೆ ಆಯೋಗಗಳು ಅವೈಜ್ಞಾನಿಕವಾಗಿವೆ ಶೇ. 50% ಸೇರಿದಂತೆ ಬೆಂಬಲ ಬೆಲೆ ಘೋಷಿಸಿ, ಅದು ಸರಿಯಾದ ಕ್ರಮದಲ್ಲಿ ರೈತರಿಗೆ ತಲುಪುವಂತೆ ಮಾಡಿ ಎಂದು ಯು. ಬಸವರಾಜ ಆಗ್ರಹಿಸಿದ್ದಾರೆ.

ಈ ಸಭೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ನಾಯಕ ಬಡಗಲಪುರ ನಾಗೇಂದ್ರ, ಈ ಕಾರ್ಯಕ್ರಮವು ವಿಶಿಷ್ಟತೆಯಿಂದ ತುಂಬಿದೆ. ಕಾರಣ ಗಣರಾಜ್ಯೋತ್ಸವ ಎಂದೊಡನೆ ಸರ್ಕಾರದ ಅಧಿಕಾರಿಗಳಿಗೆ, ಸೈನಿಕರಿಗೆ, ಪೋಲಿಸರಿಗೆ ಸೆಲ್ಯೂಟ್ ಹೊಡೆಯುವುದು ಮಾತ್ರ ಎಂದು ತಿಳಿದಿದ್ದೇವು ಆದರೆ ಗಣತಂತ್ರಕ್ಕೆ ಸಾಕ್ಷಿಯಾಗಿ ನಾವೆಲ್ಲರೂ ಇಲ್ಲಿ ಸೇರಿದ್ದೇವೆ.

ಭಾರತದ ಸಂವಿಧಾನಕ್ಕೆ ಅಪಾಯ ಬಂದಿದೆ, ಪರಿಚ್ಛೇಧಗಳನ್ನು ಒಂದೊಂದಾಗಿ ತಿದ್ದುಪಡಿ ಮಾಡಲಾಗುತ್ತಿದೆ. ಪ್ರಪಂಚದಲ್ಲಿ ಭಾರತದ ಸಂವಿಧಾನಕ್ಕೆ ದೊಡ್ಡ ಮೌಲವಿದೆ, ಏಕೆಂದರೆ ಧರ್ಮನಿರಪೇಕ್ಷಿತ, ಎಲ್ಲರಿಗೂ ಸಮಾನತೆ ನೀಡುವ ಉದ್ದೇಶ, ಕಲಾವಿದರಿಗೆ ನ್ಯಾಯ ಕೊಡಬೇಕು, ಮೀಸಲಾತಿ ನೀಡಬೇಕೆಂಬ ನೀತಿಯನ್ನು ಹೊಂದಿದೆ. ಎಲ್ಲರೂ ಬದುಕುವ ಹಕ್ಕನು ನಮ್ಮ ಸಂವಿಧಾನ ನಮಗೆ ನೀಡಿದೆ. ಆಳುವ ಸರ್ಕಾರಗಳು ಇಂತಹ ಸಾರ್ವಭೌಮತೆಯ ದೇಶವನ್ನು ಮೂರು ಕಾಸಿಗೆ ಹರಾಜುಹಾಕುತ್ತಿದೆ. ಈ ದೇಶದ ಸಂಪತನ್ನು ಕಾರ್ಪೋರೇಟ್ ಕಂಪನಿಗಳಿಗೆ ಮಾರಾಟ ಮಾಡುತ್ತಿದೆ.
ಕೃಷಿ, ಕೃಷಿಕ್ಷೇತ್ರ, ಮಾರುಕಟ್ಟೆ, ಸಂಸ್ಕರಣಾ ಘಟಕ ಎಲ್ಲದರಲ್ಲೂ ತಿದ್ದುಪಡಿ ತಂದು ರೈತರನ್ನು ಬೀದಿಪಾಲು ಮಾಡುತ್ತಿದೆ. ಅಷ್ಟೇ ಅಲ್ಲದೆ ಕಾರ್ಮಿಕರ ಪರವಾಗಿರುವ ಕಾಯ್ದೆಗಳನ್ನು ತಿದ್ದಪಡಿ ಮಾಡಿ ಅವರನ್ನು ಮತ್ತಷ್ಟು ಗುಲಾಮಗಿರಿಗೆ ತಳ್ಳುತ್ತಿದೆ.
ಪ್ರಧಾನಿಗಳು ಈ ಘಟನೆಗಳಿಗೆ ಮೌವಹಿಸುತ್ತಿದ್ದಾರೆ. ಅವರು ಪ್ರಧಾನಿ ಸ್ಥಾನಕ್ಕೆ ಯೋಗ್ಯರಲ್ಲ, ದೇಶಕ್ಕೆ ಅನ್ನಹಾಕುವ ರೈತರು ದೆಹಲಿ ಗಡಿಯಲ್ಲಿ ಕಳೆದ 60 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರನ್ನು ನಡೆಸಿಕೊಳ್ಳುವ ರೀತಿ, ಅವರ ಮೇಲೆ ಆಗುತ್ತಿರುವ ದಬ್ಬಾಳಿಕೆ, ವಿದೇಶ ನಾಗರಿಕರು ಕೂಡ ಇದನ್ನು ಖಂಡಿಸಿದರೂ ಈ ದೇಶದ ಪ್ರಧಾನಿಗಳಿಗೆ ಇದು ಕಾಣುತ್ತಿಲ್ಲ. ಹಾಗಾಗಿ ನಮ್ಮ ದೇಶವನ್ನು ನಾವೇ ರಕ್ಷಣೆ ಮಾಡಬೇಕು ಇದು ಪ್ರಧಾನಿಯಿಂದ ಸಾಧ್ಯವಿಲ್ಲ ಎಂದು ಕಿಡಿಕಾರಿದರು.

Donate Janashakthi Media

Leave a Reply

Your email address will not be published. Required fields are marked *