ಅನಿತಾ ಕುಮಾರಸ್ವಾಮಿ ರಾಜಕೀಯ ಮಾಡಿ ಸಾಧಿಸುವುದು ಏನೂ ಇಲ್ಲ : ಹೆಚ್‌ಡಿಕೆ

ಬೆಂಗಳೂರು – ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನು ಎಳೆದು ತರಬೇಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಿತಾ ಕುಮಾರಸ್ವಾಮಿ ಅವರಿಗೆ ರಾಜಕೀಯ ಮಾಡಿ ಸಾಧಿಸುವುದು ಏನೂ ಇಲ್ಲ ಪಕ್ಷ ಉಳಿಸಿಕೊಳ್ಳುವ ಉದ್ದೇಶದಿಂದ ಅವರು ಈ ಹಿಂದೆ ಸ್ಪರ್ಧಿಸಿ ಚುನಾಯಿತರಾಗಿದ್ದರು.

ನಮ್ಮ ಅಭ್ಯರ್ಥಿಗಳು ಕೈ ಕೊಟ್ಟು ಹೋದಾಗ ಪಕ್ಷ ಉಳಿಸಿಕೊಳ್ಳಲು ಅವರನ್ನು ಸ್ಪರ್ಧೆಗಿಳಿಸಿ ಆಯ್ಕೆ ಮಾಡಿದ್ದೆವು. ಅವರನ್ನು ನಾನು ರಾಜಕೀಯವಾಗಿ ದುರುಪಯೋಗ ಮಾಡಿಕೊಂಡೆ ಅಂತ ಜನ ಮಾತಾಡಿಕೊಂಡರು. ಈ ಬಾರಿ ಚುನಾವಣೆಯ ಮೇಲೆ ಅನಿತಾ ಕುಮಾರಸ್ವಾಮಿಗೆ ಯಾವುದೇ ಆಸಕ್ತಿ ಇಲ್ಲ. ಅವರ ಕ್ಷೇತ್ರ ರಾಮನಗರವನ್ನು ಪುತ್ರ ನಿಖಿಲ್ ಕುಮಾರಸ್ವಾಮಿಗೆ ಕೊಟ್ಟು ಸುಮ್ಮನಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಅವರು ಟಿಕೆಟ್ ಬಯಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಹಾಸನದ ರಾಜಕೀಯವೇ ಬೇರೆ, ಮಂಡ್ಯದ ರಾಜಕೀಯವೇ ಬೇರೆ. ಇವೆರಡನ್ನೂ ಒಟ್ಟಿಗೆ ಮಾಡಿ ನೋಡುವುದು ಬೇಡ,ನಮ್ಮ ಕುಟುಂಬದಲ್ಲಿ ಟಿಕೆಟ್ ಗಾಗಿ ಹೊಡೆದಾಟ ಮಾಡುವುದು ಏನೂ ಇಲ್ಲ. ಇವೆಲ್ಲಾ ಷಡ್ಯಂತ್ರ. ಪಕ್ಷ ಉಳಿಸಿಕೊಳ್ಳಲು ಅನಿತಾ ಕುಮಾರಸ್ವಾಮಿ ಚುನಾವಣೆಗೆ ನಿಂತರು ಅನ್ನೋದು ಬಿಟ್ಟರೆ ಬೇರೆ ಯಾವ ಉದ್ದೇಶವೂ ಇರಲಿಲ್ಲ. ಈಗ ಇದನ್ನು ಹಾಸನ ಅಭ್ಯರ್ಥಿ ಆಯ್ಕೆಗೂ ಹೊಂದಿಸಿ ಚರ್ಚೆ ಮಾಡುವುದು ಬೇಡ ಎಂದು ಹೇಳಿದರು.

ಇದನ್ನೂ ಓದಿ : ಮಗ ನಿಖಿಲ್‌ಗಾಗಿ ಅನಿತಾ ಕುಮಾರಸ್ವಾಮಿ ಕ್ಷೇತ್ರ ತ್ಯಾಗ

ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಸಲಿರುವ ಜೆಡಿಎಸ್ ನ ಎಲ್ಲಾ ಅಭ್ಯರ್ಥಿಗಳ ವಿಚಾರದಲ್ಲೂ ಚರ್ಚೆ ಮಾಡಿ ಅಂತಿಮಗೊಳಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಕೆಲವೊಂದು ಕೆಲಸ ಕಾರ್ಯಗಳ ನಿಮಿತ್ತ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ವಿಳಂಬವಾಗಿದೆ ಎಂದು ತಿಳಿಸಿದರು.

ಕಿಂಗ್ ಆಗೋದು ತಪ್ಪಿಸಲಾಗದು :
ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಬಯಕೆ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ ಅವರು, ನಾನು ಕಿಂಗ್ ಆಗೋದನ್ನು ಯಾರಿಂದಲೂ ತಪ್ಪಿಸೋಕೆ ಸಾಧ್ಯ ಇಲ್ಲ. ಈ ಬಾರಿ 100 ರಿಂದ 120 ಸ್ಥಾನ ಗಳಿಸುತ್ತೇವೆ. ಕಾಂಗ್ರೆಸ್, ಬಿಜೆಪಿ ಎರಡೂ ಕೂಡ 60ರಿಂದ 70 ಸ್ಥಾನ ಪಡೆಯಲ್ಲ. ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿಗಳ ಕೋಟಾ ದೊಡ್ಡದಿದೆ. ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಆಗೋದು ಅಂದು ಕೊಂಡಿದ್ದಾರೆ. ಆದರೆ ಯಾವ ಕಾರಣಕ್ಕೂ ಅವರಿಗೆ ಅಷ್ಟು ಸ್ಥಾನ ಬರಲ್ಲ. ಕಾಂಗ್ರೆಸ್ ಯಾವುದೇ ಕಾರಣಕ್ಕೂ ಅಕಾರಕ್ಕೆ ಬರಲ್ಲ. ಅಂತಿಮವಾಗಿ ಜನರು ತೀರ್ಮಾನ ಮಾಡಬೇಕಲ್ಲವೇ ಎಂದರು.

Donate Janashakthi Media

Leave a Reply

Your email address will not be published. Required fields are marked *