ಅಂಗನವಾಡಿ ನೌಕರರ ಬೇಡಿಕೆಗಳ ಪರಿಶೀಲನೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹಕ್ಕೆ ಕರೆ

ಬೆಂಗಳೂರು : 2021-22 ರ ರಾಜ್ಯ ಬಜೆಟ್ ನಲ್ಲಿ ಅಂಗನವಾಡಿ ನೌಕರರ ಬೇಡಿಕೆಗಳನ್ನು ಪರಿಶೀಲನೆ ಮಾಡಲು ಒತ್ತಾಯಿಸಿ ಕರ್ನಾಟ ರಾಜ್ಯ ಅಂಗನವಾಡಿ ನೌಕರರ ಸಂಘ ಇಂದು ಬೆಂಗಳೂರಿನ ಪ್ರೆಸ್‌ ಕ್ಲಬ್‌ ನಲ್ಲಿ ಸುದ್ದಿಗೋಷ್ಠಿ ನಡೆಸಿದರು.

ಅಂಗನವಾಡಿ ನೌಕರರ ಬೇಡಿಕೆಗಳಿಗೆ ಸ್ಪಂದಿಸದಿರುವ ಬಜೆಟ್‌ ನ್ನು ವಿರೋಧಿಸಿ ಹೆಚ್ಚುವರಿ ಕೆಲಸಗಳನ್ನು ಬಹಿಷ್ಟರಿಸಿ ಮಾರ್ಚ್‌ 15 ರಂದು ರಾಜ್ಯವ್ಯಾಪಿ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳುವುದಾಗಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ತಿಳಿಸಿದೆ.

ಸುದ್ದಿಗೋಷ್ಠಿಯ ಕುರಿತು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯಧ್ಯಕ್ಷರಾದ ಎಸ್‌ ವರಲಕ್ಷ್ಮಿ ಮಾತನಾಡಿ ಹೆಸರಿಗೆ ಮಾತ್ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯೆಂದು ಬಜೆಟ್‌ನ್ನು ಮಂಡಿಸಿ, ಮಹಿಳಾ ವಿರೋಧೀ ನೀತಿ ಅನುಸರಿಸಿರುವುದನ್ನು ನಾವು ಖಂಡಿಸುತ್ತೇವೆ. ಅಂಗನವಾಡಿ ನೌಕರರು ಕಡಿಮೆ ಸವಲತ್ತುಗಳಿಗೆ ದುಡಿಯುತ್ತಿದ್ದರೂ ಕೂಡಾ ಕರೋನಾ ಸಂದರ್ಭದಲ್ಲಿ ಸರ್ಕಾರ ಸೂಚನೆ ಕೊಟ್ಟ ಕೂಡಲೇ ಯಾವುದೇ ಶರತ್ತಗಳಿಲ್ಲದೆ  ಕೆಲಸವನ್ನು ನಿರ್ವಹಿಸಿದ್ದಾರೆ. ಈ ಕೆಲಸ ಮಾಡುವಾಗ ಕೆಲಸದ ಒತ್ತಡದಿಂದ 35 ಜನ , ಕರೋನಾ ಕೆಲಸ ಮಾಡುವಾಗ 28 ಜನರು ತಮ್ಮ ಜೀವನಗಳನ್ನೇ ಮುಡುಪಾಗಿಟ್ಟು ಬಲಿಯಾಗಿದ್ದಾರೆ. 173 ಜನರಿಗೆ ಕರೋನಾ ಬಂದು ಆ ದಿನಗಳಲ್ಲಿ ತಮ್ಮ ಕುಟುಂಬದ ಆದಾಯವನ್ನು ಕಳೆದುಕೊಂಡಿದ್ದಾರೆ. ರಾಜ್ಯದ ಹೈಕೋರ್ಟ್ ಕರೋನಾ ಸಂದರ್ಭದಲ್ಲಿ ಮಕ್ಕಳಿಗೆ – ಮಹಿಳೆಯರ ಅಪೌಷ್ಠಿಕತೆಯನ್ನು ತಡೆಯಲು ಪೌಷ್ಠಿಕ ಆಹಾರ ಫಲಾನುಭವಿಗಳಿಗೆ ತರಲುಪಿಸುವುದನ್ನು ಖಾತ್ರಿ ಪಡಿಸಬೇಕೆಂದೂ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ಕೊಟ್ಟಿತ್ತು. ಅಂತಹ ಎಲ್ಲಾ ದೂರುಗಳಿಂದ ಎಚ್ಚರಿಕೆಗಳಿಂದ ಸರ್ಕಾರದ ಘನತೆಯನ್ನು ಕಾಪಾಡಿದ್ದು ಇದೇ ಅಂಗನವಾಡಿ ನೌಕರರು.

ಕರೋನಾ ಸಾಂಕ್ರಾಮಿಕದ ಭಯಂಕರತೆ ಇದ್ದಾಗಲೂ ಮಲೆನಾಡು, ಗುಡ್ಡಗಾಡು, ಕೊಳಚೆ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ತಮ್ಮ ಕುಟುಂಬದ ವಾಹನಗಳನ್ನು ಬಳಸಿ ಆಹಾರ ಸಾಮಾಗ್ರಿಗಳನ್ನು ಮನೆಮನೆಗೆ ಹಂಚಿದ್ದು, ಕ್ವಾರಂಟೈನ್ ಆದ ಸ್ಥಳಗಳಿಗೆ ಮಾಸ್ಕ್, ಸ್ಯಾನಿಟೈಜರ್, ಮಾತ್ರೆಗಳು ಇಲ್ಲದಿದ್ದರೂ ತಮ್ಮ ಕೈಯಿಂದ ಎಲ್ಲವನ್ನು ಖರ್ಚು ಮಾಡಿ ಕೊಂಡು ಆಹಾರ ವಿತರಣೆ ಮಾಡಿದ್ದಾರೆ. ಕರೋನಾ ರೋಗಿಗಳನ್ನು ಸಂತೃಪ್ತಿಸಿದ್ದು ಮಾತ್ರವಲ್ಲದೇ ಸಾರ್ವಜನಿಕರಿಂದ ಹಲ್ಲೆಗೊಳಗಾದರೂ ಕೂಡಾ ಎದೆಗುಂದದೆ ಕೆಲಸ ಮಾಡಿದ ಈ ಹೆಣ್ಣು ಮಕ್ಕಳ ಸ್ಥೈರ್ಯವನ್ನು ಮತ್ತು ಸೇವೆಯನ್ನು ಬರಿಯ ಮಾತುಗಳಲ್ಲಿ ಹೇಳಿದರೆ ಸಾಕೇ? ಹಲವು ಹಂತಗಳ ಹೋರಾಟಗಳ ಒತ್ತಾಯಗಳ ಭಾಗವಾಗಿ  ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ

  • ಸೇವಾ ಜೇಷ್ಠತೆಯ ಆಧಾರದಲ್ಲಿ
153.25 ಕೋಟಿ
  • ಮಿನಿ ಅಂಗನವಾಡಿ ಕೇಂದ್ರಗಳ ಸಹಾಯಕಿ ನೇಮಕಾತಿ     
6.99 ಕೋಟಿ

 

  • ಅಂಗನವಾಡಿ ಸಹಾಯಕಿಯರಿಗೆ ಸಂಬಳದ ವ್ಯತ್ಯಾಸ ಮೊತ್ತ 
131.42 ಕೋಟಿ
  • ನಿವೃತಿಸೌಲಭ್ಯ     
47.82 ಕೋಟಿ                                                        
  • ಒಟ್ಟು
339.48

ಶಿಫಾರಸ್ಸು ಮಾಡಲಾಗಿತ್ತು. ಈ ಮೊತ್ತ ನೀಡಿದ್ದಿರೆ. 1 ಲಕ್ಷ 30 ಸಾವಿರ ಕುಟುಂಬಗಳಿಗೆ ಸಹಾಯವಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ಈ ಮೂರು ಶಿಫಾರಸ್ಸುಗಳಲ್ಲಿ ಯಾವುದೇ ಒಂದು ಅಂಶವನ್ನು ಪರಿಗಣನೆ ಮಾಡಿಲ್ಲ. 2016 ರಿಂದ 7304 ಜನ ನಿವೃತ್ತಯಾಗಿದ್ದಾರೆ. ಅವರಿಗೆ ಕೊಡಬೇಕಾಗಿದ್ದ ಇಡಗಂಟನ್ನು ಕೂಡಾ ಸರ್ಕಾರ ಪರಿಗಣನೆ ಮಾಡಿಲ್ಲ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಬೆಂಗಳೂರು ಜಿಲ್ಲಾಧ್ಯಕ್ಷರಾದ  ಟಿ. ಲೀಲಾವತಿ ಸರ್ಕಾರಕ್ಕೆ ಪ್ರಶಿಸಿದರು.

ಈ ಸುದ್ದಿಗೋಷ್ಠಿಯಲ್ಲಿ  ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಮುಖಂಡರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *